Top

ಎಎಪಿ ಕಾರ್ಯಕರ್ತನಿಗೆ ಕಪಾಳಮೋಕ್ಷ: ವೀಡಿಯೋ ವೈರಲ್

ಎಎಪಿ ಕಾರ್ಯಕರ್ತನಿಗೆ ಕಪಾಳಮೋಕ್ಷ: ವೀಡಿಯೋ ವೈರಲ್
X

ಬೆಳಗಾವಿ: ಬೆಳಗಾವಿಯಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಹಿನ್ನೆಲೆ ಭಾರತ್ ಬಂದ್‌ಗೆ ಬೆಂಬಲ ನೀಡಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಆದರೆ ಪ್ರತಿಭಟನೆ ಮಾಡುವಾಗ, ಆಕ್ರೋಶ ವ್ಯಕ್ತಪಡಿಸುವ ಭರದಲ್ಲಿ ಆಮ್ ಆದ್ಮಿ ಕಾರ್ಯಕರ್ತನೊಬ್ಬ ತೈಲ ಬೆಲೆ ಇಳಿಯಲೇಬೇಕು ಎನ್ನುವುದನ್ನ ಬಿಟ್ಟು, ತೈಲ ಬೆಲೆ ಏರಲೇಬೇಕೆಂದು ಘೋಷಣೆ ಕೂಗಿದ್ದಾನೆ.

ಆಮ್ ಆದ್ಮಿ ಪಕ್ಷದ ಕಾರ್ಯಕರ್ತ ಈ ರೀತಿ ಎಡವಟ್ಟು ಮಾಡಿದ್ದು, ಆಪ್ ಮುಖಂಡ ಸದಾನಂದ್ ಬಾಮನೆಯಿಂದ ಕಪಾಳಕ್ಕೆ ಹೊಡೆಸಿಕೊಂಡಿದ್ದಾರೆ. ಪ್ರತಿಭಟನೆಯಲ್ಲಿ ಪೆಟ್ರೋಲ್ ಬೆಲೆ ಎಂದು ಘೋಷಣೆ ಕೂಗಿದಕ್ಕೆ ಮತ್ತೋರ್ವ ಕಾರ್ಯಕರ್ತ ಏರಲೇಬೇಕು ಅಂದಿದಕ್ಕೆ ಕಪಾಳ ಮೋಕ್ಷ ಮಾಡಿದ್ದು, ಇದೀಗ ಈ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.

Next Story

RELATED STORIES