ಬಿಬಿಎಂಪಿಯಿಂದ ಪರಿಸರ ಸ್ನೇಹಿ ಮದುವೆಗೆ ಸಜ್ಜು

ರಾಜಧಾನಿಯಲ್ಲಿ ಹೆಚ್ಚುತ್ತಿರುವ ಪರಿಸರ ಮಾಲಿನ್ಯ ತಡೆಗಟ್ಟಲು ಬೆಂಗಳೂರು ಮಹಾನಗರದ ಪಾಲಿಕೆ ವಿಶೇಷ ಕ್ರಮ ಕೈಗೊಂಡಿದ್ದು, ಪರಿಸರ ಸ್ನೇಹಿ ವಿವಾಹಕ್ಕೆ ಕ್ರಮ ಕೈಗೊಂಡಿದೆ.

ಬೆಂಗಳೂರಿನಲ್ಲಿ ಮದುವೆ ಮಾಡಬೇಕೆಂದರೆ ಪ್ಲಾಸ್ಟಿಕ್ ಬಾಟೆಲ್​ ನಲ್ಲಿ ನೀರು, ಪ್ಲಾಸ್ಟಿಕ್ ಎಲೆ ಬಳಸುವಂತಿಲ್ಲ. ಈ ಮೂಲಕ ಕಲ್ಯಾಣ ಮಂಟಪಗಳಿಂದ ಹೆಚ್ಚಾಗುತ್ತಿರುವ ತ್ಯಾಜ್ಯ ಪ್ರಮಾಣ ಕಡಿತಗೊಳಿಸಲು ಬಿಬಿಎಂಪಿ ಕ್ರಮ ಕೈಗೊಂಡಿದೆ.

ಇನ್ನು ಮುಂದೆ ಕಲ್ಯಾಣ ಮಂಟಪಗಳಲ್ಲಿ ಪ್ಲಾಸ್ಟಿಕ್ ಬಾಟೆಲ್ ಮತ್ತು ಪ್ಲಾಸ್ಟಿಕ್ ಎಲೆಗಳನ್ನು ಬಳಸುವಂತಿಲ್ಲ. ಅದರ ಬದಲು ಅಡಕೆ ಎಲೆಗಳಿಂದ ಮಾಡಿದ ಲೋಟ, ಬಾಟೆಲ್ ಹಾಗೂ ಎಲೆಗಳನ್ನು ಬಳಸಬಹುದಾಗಿದೆ.

ALSO READ  ಫಸ್ಟ್ ಟೈಮ್ ಓಟ್ ಮಾಡಿದವ್ರಿಗೆ ಸಿಗುತ್ತೆ ಇಲ್ಲಿ ಮಸಾಲ್ ದೋಸೆ ಫ್ರೀ

ಈ ಸಂಬಂಧ ಬಿಬಿಎಂಪಿ ಸೆಪ್ಟೆಂಬರ್ 7ರಂದು ಕಲ್ಯಾಣ ಮಂಟಪ, ಮದುವೆ ಹಾಲ್ ಮುಂತಾದವುಗಳಿಗೆ ನೋಟೀಸ್ ಜಾರಿ ಮಾಡಿದ್ದು, ಶೀಘ್ರವಾಗಿ ಬದಲಾವಣೆ ಮಾಡಿಕೊಳ್ಳುವಂತೆ ಸೂಚಿಸಿದೆ.