ಬಾಕ್ಸ್‌ ಆಫೀಸ್​​​​ನಲ್ಲಿ ಕೋಟಿ ಕೋಟಿ ಬಾಚಿದ ‘ಅಯೋಗ್ಯ’

‘ಅಯೋಗ್ಯ’.. ಗ್ರಾಮೀಣ ಸೊಗಡಿನ ಅಪ್ಪಟ ಕನ್ನಡ ಸಿನಿಮಾ.. ಮಹೇಶ್​ ಕುಮಾರ್ ನಿರ್ದೇಶನದ ಈ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲೂ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.. ಮಾರಗೊಂಡನ ಹಳ್ಳಿ ಸಿದ್ಧೇಗೌಡ ಮತ್ತು ಬಚ್ಚೇಗೌಡರ ಜಟಾಪಟಿ, ಸಿದ್ಧೇಗೌಡನ ಪಟಾಲಂ ಕಾಮಿಡಿ ಕಚಗುಳಿ, ನಂದಿನಿ ಮತ್ತು ಸಿದ್ದೇಗೌಡನ ಲವ್ ಸ್ಟೋರಿ ಪ್ರೇಕ್ಷಕರ ಮನಗೆದ್ದಿದ್ದು, ಚಿತ್ರದ ಸೂಪರ್ ಹಿಟ್ ಲಿಸ್ಟ್ ಸೇರಿದೆ..

ಪರಭಾಷಾ ಫಿಲ್ಮ್​ ಮೇಕರ್ಸ್ ಗಮನ ಸೆಳೆದ ಸಿನಿಮಾ

ಮೊನ್​ ಮೊನ್ನೆ 25 ದಿನ ಪೂರೈಸಿದ ‘ಅಯೋಗ್ಯ’, ಜಗ್ಗದೇ 100ನೇ ದಿನದತ್ತ ಮುನ್ನುಗ್ಗುತ್ತಿದ್ದಾನೆ.. ತೆರೆಕಂಡ ಮೊದಲ ವಾರವೇ 7 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ ಅಯೋಗ್ಯ ಸಿನಿಮಾ, ಗೆಲುವಿನ ನಾಗಾಲೋಟ ಮುಂದುವರೆಸಿದೆ.. ಕರ್ನಾಟಕ ಮಾತ್ರವಲ್ಲದೇ ಚೆನ್ನೈ, ಗೋವಾ, ಪುಣೆ, ಹೈದರಾಬಾದ್​​ನಲ್ಲಿ ಅಯೋಗ್ಯ ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ.. ಇದೆಲ್ಲದರ ಮಧ್ಯೆ ಮತ್ತೊಂದು ಹೊಸ ಸುದ್ದಿ ಬಿದ್ದಿದೆ.

ಕಾಲಿವುಡ್ ಅಂಗಳಕ್ಕೆ ಹೊರಟು ನಿಂತ ‘ಅಯೋಗ್ಯ’ನ ಕಥೆ

ಹೌದು.. ಕರ್ನಾಟಕದಲ್ಲಿ ಅಯೋಗ್ಯ ಸಿನಿಮಾ 50 ದಿನ ಪೂರೈಸೋಕು ಮೊದಲು, ತಮಿಳಿಗೆ ರೀಮೇಕ್​ ಆಗೂ ಸಿಹಿ ಸುದ್ದಿ ಸಿಕ್ಕಿದೆ.. ಈಗಾಗಲೇ ಈ ವಿಚಾರವಾಗಿ ಮಾತುಕತೆ ನಡೀತಿದ್ದು, ತಮಿಳು ನಿರ್ಮಾಪಕರು ಅಯೋಗ್ಯನ ಕಥೆಯನ್ನ ತಮಿಳು ಪ್ರೇಕ್ಷಕರ ಮುಂದಿಡಲು ಉತ್ಸುಕರಾಗಿದ್ದಾರೆ.. ಹಳ್ಳಿ ಸೊಗಡಿನ ಸಿನಿಮಾಗಳಿಂದ ಕಾಲಿವುಡ್ ಪ್ರೇಕ್ಷಕರ ಮನಗೆದ್ದಿರೋ ವಿಜಯ್ ಸೇತುಪತಿ, ಅಯೋಗ್ಯ ರೀಮೇಕ್​ನಲ್ಲಿ ನಟಿಸೋದು ಬಹುತೇಕ ಖಚಿತ ಅನ್ನಲಾಗ್ತಿದೆ..

ಈ ಹಿಂದೆ ವಿಜಯ್ ಸೇತುಪತಿ ಅಭಿನಯದ ‘ನಡುವುಲೆ ಕೊಂಜಂ ಪಕ್ಕಥಾ ಕಾಣು’ ಚಿತ್ರದ ಕನ್ನಡ ರೀಮೇಕ್​​ನಲ್ಲಿ ನೀನಾಸಂ ಸತೀಶ್ ಬಣ್ಣ ಹಚ್ಚಿದ್ರು.. ಇದೀಗ ಸತೀಶ್​ ನಟನೆಯ ಅಯೋಗ್ಯ ತಮಿಳು ರೀಮೇಕ್​​ನಲ್ಲಿ ವಿಜಯ್ ಸೇತುಪತಿ ನಟಿಸ್ತಿರೋದು ವಿಶೇಷ..

ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ ಏನಮ್ಮಿ ಏನಮ್ಮಿ ಸಾಂಗ್

ಅಯೋಗ್ಯ ಸಿನಿಮಾ ಸಕ್ಸಸ್​​ನ ಪ್ಲಸ್​ ಪಾಯಿಂಟ್ ಅರ್ಜುನ್​ ಜನ್ಯಾ ಆಲ್ಬಮ್​​.. ಜನ್ಯ ಟ್ಯೂನು, ಚೇತನ್​ಕುಮಾರ್ ಲಿರಿಕ್ಸು ಸೇರಿ ಅಯೋಗ್ಯ ಸಾಂಗ್ಸ್ ಸೂಪರ್ ಹಿಟ್ ಆಗಿತ್ತು.. ಅದ್ರಲ್ಲೂ ‘ಏನಮ್ಮಿ ಏನಮ್ಮಿ’ ಲಿರಿಕಲ್ ವೀಡಿಯೋ ದೊಡ್ಡದಾಗಿ ಸೌಂಡ್ ಮಾಡ್ತಿತ್ತು.. ಹಾಡಿನ ಡಬ್​ಸ್ಮ್ಯಾಶ್​​ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ಲಾಗ್ತಿವೆ.. ಇದೀಗ ಆ ಸೂಪರ್ ಹಿಟ್ ಸಾಂಗ್​​ 4K ವೀಡಿಯೋ ರಿಲೀಸ್​​ ಆಗಿ ಧೂಳೆಬ್ಬಿಸಿದೆ..

ಯೂಟ್ಯೂಬ್​ಗೆ ಅಪ್​ಲೋಡ್​ ಆದ ಕೆಲವೇ ಗಂಟೆಗಳಲ್ಲಿ 5 ಲಕ್ಷ ವೀವ್ಸ್ ಸಾಧಿಸಿದ ಏನಮ್ಮಿ ಏನಮ್ಮಿ ವೀಡಿಯೋ ಸಾಂಗ್ ಸದ್ಯ ಟ್ರೆಂಡಿಂಗ್​ನಲ್ಲಿದೆ..

ಒಟ್ಟಾರೆ ಕನ್ನಡ ಸಿನಿಮಾಗಳು ಯಾರಿಗೇನು ಕಮ್ಮಿಯಿಲ್ಲ.. ಕನ್ನಡ ಸಿನಿಮಾವನ್ನ ಪರಭಾಷಿಕರು ನೋಡಿ ಮೆಚ್ಚಿ ಬಹುಪರಾಕ್ ಅನ್ನುವಂತೆ ಮಾಡಿದೆ ಅಯೋಗ್ಯ ಚಿತ್ರ ತಂಡ.. ಮುಂದಿನ ದಿನಗಳಲ್ಲಿ ಅಯೋಗ್ಯನ ಆರ್ಭಟ ಹೇಗಿರುತ್ತೆ ಅಂತ ಕಾದು ನೋಡ್ಬೇಕು..

ನಾಣಿ.. ಎಂಟ್ರಟ್ರೈನ್​​ಮೆಂಟ್ ಬ್ಯೂರೊ, ಟಿವಿ5 ಬೆಂಗಳೂರು

Recommended For You

Leave a Reply

Your email address will not be published. Required fields are marked *