ಆಂದ್ರದಲ್ಲಿ ರೂ.2 ಪೆಟ್ರೋಲ್, ಡಿಸೇಲ್‌ ದರ ಇಳಿಕೆ : ನಮ್ಮಲ್ಲಿ ಯಾವಾಗ.?

ಆಂದ್ರ ಪ್ರದೇಶ : ರಾಜಸ್ಥಾನ ರಾಜ್ಯದಂತೆ, ನೆರೆಯ ಆಂದ್ರಪ್ರದೇಶದಲ್ಲೂ 2 ರೂಪಾಯಿ ಪೆಟ್ರೋಲ್‌, ಡಿಸೇಲ್‌ ದರವನ್ನು ಇಳಿಕೆ ಮಾಡಿದ ಆಂದ್ರಪ್ರದೇಶ ಸಿಎಂ ಘೋಷಿಸಿದ್ದಾರೆ.

ಈ ಕುರಿತು ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ದಿನೇ ದಿನೇ ತೈಲ ದರದಲ್ಲಿ ಬೆಲೆ ಏರಿಕೆ ಆಗುತ್ತಿದೆ. ಇದಕ್ಕೆ ತೈಲ ದರದ ಮೇಲಿನ ಕೇಂದ್ರ ಸರ್ಕಾರದ ಏರುಗತಿಯ ಸೇವಾ ತೆರಿಗೆ ಕಾರಣ.

ಕೇಂದ್ರದ ಸೇವಾ ತೆರಿಗೆ 6 ರೂ ಇದ್ದದ್ದು ಇಂದು 26 ರೂಪಾಯಿಗೆ ಬಂದು ನಿಂತಿದೆ. ಇದರಿಂದಾಗಿ ಪೆಟ್ರೋಲ್‌, ಡಿಸೇಲ್‌ ದರ ದಿನೇ ದಿನೇ ಏರುಗತಿಯತ್ತ ಸಾಗುವಂತಾಗಿದೆ. ಆದರೂ ತೈಲ ದರ ಇಳಿಕೆ ಮಾಡುವತ್ತ ಕೇಂದ್ರ ಗಮನ ಹರಿಸುತ್ತಿಲ್ಲ ಎಂದು ಹರಿ ಹಾಯ್ದರು.

ಈ ಕೇಂದ್ರ ಸರ್ಕಾರದ ತರಿಗೆ ಜೊತೆ ಜೊತೆಗೆ ವಿವಿಧ ತೆರಿಗೆಗಳು ಸೇರಿ, ಇಂದು ಜನಸಾಮಾನ್ಯರಿಗೆ ತೈಲ ದರ ಬರೆಯನ್ನು ಏರುತ್ತಿದೆ. ಈ ಮೂಲಕ ಜನಸಾಮಾನ್ಯರಿಗೆ ದರ ಏರಿಕೆಯ ಬರೆ ಹಾಕುತ್ತಿದೆ ಎಂದು ಕಿಡಿಕಾರಿದರು.

ಈ ಎಲ್ಲಾ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಕೇಂದ್ರ ತನ್ನ ತೆರಿಗೆ ಕಡಿಮೆ ಮಾಡದೇ ಹೋದರೂ, ರಾಜ್ಯ ಸರ್ಕಾರ ರಾಜ್ಯದ ಜನರ ಹಿತ ದೃಷ್ಠಿಯಿಂದ ರಾಜ್ಯ ಸರ್ಕಾರ ವಿಧಿಸುವ ಸೆಸ್‌ ದರದಲ್ಲಿ ರೂ 2 ಇಳಿಕೆ ಮಾಡುತ್ತಿದೆ. ಈ ಮೂಲಕ ಪೆಟ್ರೋಲ್, ಡಿಸೇಲ್‌ ದರದಲ್ಲಿ ರೂ 2 ಇಳಿಕೆ ಮಾಡುತ್ತಿರುವುದಾಗಿ ಘೋಷಿಸಿದರು.

ಇದು ರಾಜ್ಯದ ಜನರ ಹಿತದೃಷ್ಠಿಯಿಂದ ಆಂದ್ರ ಸರ್ಕಾರ ಕೈಗೊಂಡ ನಿರ್ಣಯವಾಗಿದೆ. ಈ ಮೂಲಕ ಜನರ ಹಿತದೃಷ್ಠಿಗೆ ರಾಜ್ಯ ಸರ್ಕಾರ ಬದ್ದವಾಗಿದೆ ಎಂಬುದನ್ನು ಅರಿಯ ಬೇಕಿದೆ ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಿಳಿಸಿದರು.

ಇದೇ ವೇಳೆ ಕೇಂದ್ರ ಸರ್ಕಾರದ ಕೂಡಲೇ ಜನ ಸಾಮಾನ್ಯರ ತೈಲ ದರ ಇಳಿಕೆ ಮಾಡಬೇಕು. ಇಲ್ಲವಾದಲ್ಲಿ ರಾಜ್ಯದ ಜನರು ದಂಗೆ ಏಳುವ ಪರಿಸ್ಥಿತಿ ನಿರ್ಮಾಣವಾಗಿ, ಪ್ರತಿಭಟನೆಯ ಬಿಸಿಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಗೆ ನೀಡಿದರು.

ಇನ್ನೂ ಹಾಗಾದರೇ ನಮ್ಮ ರಾಜ್ಯದಲ್ಲೂ ಇತರೆ ರಾಜ್ಯಗಳ ರೀತಿಯಲ್ಲಿ ಪೆಟ್ರೋಲ್, ಡಿಸೇಲ್‌ ದರದಲ್ಲಿ ಬೆಲೆ ಇಳಿಕೆ ಯಾವಾಗ..? ಎಂಬ ಪ್ರಶ್ನೆ ಏಳುತ್ತಿದೆ.

ಬೇರೆ ರಾಜ್ಯಗಳಂತೆ ನಮ್ಮ ರಾಜ್ಯದಲ್ಲೂ ಮೊದಲು ತೈಲ ದರಳಗಳಲ್ಲಿ ಬೆಲೆ ಇಳಿಕೆ ಮಾಡಲಿ. ಆನಂತ್ರ ಬೇಕಾದರೇ ಬಂದ್‌ ನಡೆಸಿ, ಕೇಂದ್ರದಿಂದಲೂ ತೈಲ ದರ ಇಳಿಕೆ ಮಾಡುವಂತೆ ಒತ್ತಾಯಿಸಲಿ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಒಟ್ಟಾರೆಯಾಗಿ ರಾಜಸ್ಥಾನದ ಮಾದರಿಯಲ್ಲೇ ನೆರೆಯ ಆಂದ್ರ ಪ್ರದೇಶದಲ್ಲೂ ಇಂದು ಪೆಟ್ರೋಲ್, ಡಿಸೇಲ್‌ ದರದಲ್ಲಿ ರೂ 2 ಇಳಿಕೆ ಮಾಡಿದೆ. ಈ ಮೂಲಕ ವಾಹನ ಸವಾರರಿಗೆ ಉಂಟಾಗುತ್ತಿದ್ದ ದುಬಾರಿ ತೈಲ ಬೆಲೆ ಬರೆಯನ್ನು ಕಡಿಮೆ ಮಾಡಿದೆ.