ಪ್ರಿಯಕರ ಮಾತನಾಡಿಸಲಿಲ್ಲವೆಂದು ಗೃಹಿಣಿ ಸಾವಿಗೆ ಶರಣು

ಬೆಂಗಳೂರು: ವಿವಾಹಿತ ಮಹಿಳೆಯೋರ್ವಳು ತನ್ನ ಪ್ರಿಯತಮ ಮಾತನಾಡಲಿಲ್ಲವೆಂದು ಮನನೊಂದು, ಆತ್ಮಹತ್ಯೆಗೆ ಶರಣಾಗಿರುವ ಘಟನೆ ನೆಲಮಂಗಲದ ಬಳಿ ನಡೆದಿದೆ.

ಬೆಂಗಳೂರು ಸರಸ್ವತಿಪುರಂ ನಿವಾಸಿ ಸುಮಾ ( 28) ಮೃತ ದುರ್ದೈವಿಯಾಗಿದ್ದು, ಒಂದು ವರ್ಷದ ಹಿಂದೆ ಹರೀಶ್ ಎನ್ನುವರ ಜೊತೆ ಮದ್ವೆಯಾಗಿದ್ದರು.

ಆದರೆ ಮದುವೆಗೂ ಮುನ್ನ ಸುಮಾ, ತುಮಕೂರು ಮೂಲದವನನ್ನ ಪ್ರೀತಿ ಮಾಡಿದ್ದಳು. ಪ್ರಿಯಕರನನ್ನ ಮರೆಯದ ಸುಮಾ ನಿನ್ನೆ ಆತನನ್ನು ಮಾತನಾಡಿಸಲು ತುಮಕೂರಿಗೆ ತೆರಳಿದ್ದಾಳೆ.

ಆದರೆ ಆತ, ನಿನಗೆ ಈಗಾಗಲೇ ಮದುವೆಯಾಗಿದೆ. ಆತನೊಂದಿಗೆ ಚೆನ್ನಾಗಿ ಬದುಕು ಎಂದು ಹೇಳಿ ಆಕೆಯೊಂದಿಗೆ ಮಾತನಾಡಲು ನಿರಾಕರಿಸಿದ್ದಾನೆ.

ALSO READ  ಫೋಟೋಶೂಟ್‌ನಲ್ಲಿ ಭಾಗಿಯಾದ ದಸರಾ ಗಜಪಡೆ

ಮಗಳು ತುಮಕೂರಿಗೆ ತೆರಳಿರುವ ವಿಷಯ ತಿಳಿದು ಪೋಷಕರು ಕೂಡ, ತುಮಕೂರಿಗೆ ಬಂದು ಮಗಳನ್ನ ವಾಪಸ್ ಕರೆದುಕೊಂಡು ಬರಲು ಬಂದಿದ್ದರು.

ಇನ್ನೂ ಪೋಷಕರೊಂದಿಗೆ ಕಾರಿನಲ್ಲಿ ವಾಪಸ್ ಬರುವಾಗ ತೀವ್ರವಾಗಿ ಮನನೊಂದಿದ್ದ ಸುಮಾ, ವಿಷಕಾರಿ ಮಾತ್ರೆಗಳನ್ನ ಸೇವಿಸಿ ಸಾವನ್ನಪ್ಪಿದ್ದಾಳೆ. ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.