Top

ಅಂಪೈರ್​ಗೆ ಕಳ್ಳ, ಮೋಸಗಾರ ಎಂದು ನಿಂದಿಸಿದ ಸೆರೆನಾ

ಅಂಪೈರ್​ಗೆ ಕಳ್ಳ, ಮೋಸಗಾರ ಎಂದು ನಿಂದಿಸಿದ ಸೆರೆನಾ
X

ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಟೆನಿಸ್ ಆಟಗಾರ್ತಿಯ ಸಾಲಿನಲ್ಲಿರುವ ಅಮೆರಿಕದ ಸೆರೆನಾ ವಿಲಿಯಮ್ಸ್ ಯುಎಸ್ ಓಫನ್ ಫೈನಲ್ ನಲ್ಲಿ ಅಂಪೈರ್ ಗೆ ಕಳ್ಳ, ಮೋಸಗಾರ ಎಂದು ನಿಂದಿಸಿ ವಿವಾದಕ್ಕೀಡಾಗಿದ್ದಾರೆ.

ಶನಿವಾರ ರಾತ್ರಿ ನಡೆದ ವನಿತೆಯರ ಸಿಂಗಲ್ಸ್ ಫೈನಲ್​ನಲ್ಲಿ ಸುಲಭ ಜಯ ದಾಖಲಿಸಿದ ಜಪಾನ್ ನ ನವೊಮಿ ಒಸಾಕಾ ಯುಎಸ್ ಓಪನ್ ಚಾಂಪಿಯನ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಈ ಮೂಲಕ ಗ್ರ್ಯಾನ್ ಸ್ಲಾಮ್ ಗೆದ್ದ ಮೊದಲ ಜಪಾನ್ ಆಟಗಾರ್ತಿ ಎಂಬ ಇತಿಹಾಸ ಬರೆದರು.

ಸೋಲಿನ ಆಘಾತದ ಬೆನ್ನಲ್ಲೇ ಕಣ್ಣೀರಿಟ್ಟ ಸರೆನಾ, ಆಕ್ರೋಶದ ಭರದಲ್ಲಿ ಟೂರ್ನಿಯಲ್ಲಿ ಲೈಂಗಿಕ ತಾರತಮ್ಯದ ವಿವಾದವನ್ನು ಮತ್ತೊಮ್ಮೆ ಕೆಣಕಿದರು. ಅಲ್ಲದೇ ಅಂಪೈರ್​ ಅವರನ್ನು ಬಹಿರಂಗವಾಗಿ ನಿಂದಿಸಿ ಸುದ್ದಿಗೆ ಗ್ರಾಸವಾದರು.

ಶನಿವಾರ ತಡರಾತ್ರಿ ನಡೆದ ವನಿತೆಯರ ಸಿಂಗಲ್ಸ್ ಟೆನಿಸ್ ಟೂರ್ನಿಯಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ್ತಿ ಸೆರೆನಾ ವಿಲಿಯಮ್ಸ್ 2-6, 4-6 ನೇರ ಸೆಟ್ ಗಳಿಂದ ಸೋಲುಂಡರು. ಎರಡನೇ ಸೆಟ್ ನಲ್ಲಿ ಸೋಲಿನ ಸುಳಿವು ದೊರೆಯುತ್ತಿದ್ದಂತೆ ಆಕ್ರೋಶ, ದುಃಖಕ್ಕೆ ಒಳಗಾದರು.

ಸೆರೆನಾ ನಿಯಮ ಉಲ್ಲಂಘಿಸಿದ್ದಕ್ಕಾಗಿ ಚೇರ್ ಅಂಪೈರ್ ಕಾರ್ಲೊಸ್ ರಾಮೊಸ್, ಪೆನಾಲ್ಟಿ ಪಾಯಿಂಟ್ ಅನ್ನು ಜಪಾನ್ ಆಟಗಾರ್ತಿಗೆ ನೀಡಿದರು. ಇದರಿಂದ ಆಕ್ರೋಶಗೊಂಡ ಸೆರೆನಾ ನೀನೊಬ್ಬ ಮೋಸಗಾರ, ಸುಳ್ಳುಗಾರ.. ಈ ತಪ್ಪಿಗಾಗಿ ನೀನು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಪಂದ್ಯದ ನಡುವೆ ಕೋಚ್ ಅವರ ಸಲಹೆಯನ್ನು ಸೆರೆನಾ ಕೇಳಿದ್ದಳು. ಇದಕ್ಕಾಗಿ ದಂಡ ವಿಧಿಸಿದ್ದನ್ನು ಪಂದ್ಯದ ನಂತರ ಮಾಧ್ಯಮಗಳ ಮುಂದೆ ಪ್ರಶ್ನಿಸಿದ ಸೆರೆನಾ, ನಾನೇನು ತಪ್ಪು ಮಾಡಿಲ್ಲ. ಟೆನಿಸ್ ನಲ್ಲಿ ಪುರುಷ ಮತ್ತು ಮಹಿಳೆಯರ ನಡುವೆ ತಾರತಮ್ಯ ನಡೆಯುತ್ತಿದೆ. ಪುರುಷ ಕ್ರೀಡಾಪಟುಗಳು ಕೂಡ ಪಂದ್ಯದ ನಡುವೆ ಕೋಚ್ ಗಳ ಸಲಹೆ ಪಡೆಯುತ್ತಾರೆ. ಸಿಂಗಲ್ಸ್ ಅಂದರೆ ಒಬ್ಬರೇ ಎಂದು ಅರ್ಥವಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.

Next Story

RELATED STORIES