ಕೋಚ್ ರವಿ ಶಾಸ್ತ್ರಿಗೆ 2.5 ಕೋಟಿ ರೂ. ವೇತನ ನೀಡಿದ ಬಿಸಿಸಿಐ

ಓವೆಲ್​: ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿಗೆ 2.5 ಕೋಟಿ ರೂಪಾಯಿ ವೇತನ ನೀಡಿರುವುದಾಗಿ ಬಿಸಿಸಿಐ ಹೇಳಿದೆ.

ಭಾನುವಾರ ಬಿಸಿಸಿಐ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಕೋಚ್ ರವಿ ಶಾಸ್ತ್ರಿಗೆ ಕಳೆದ ಜುಲೈನಿಂದ ಅಕ್ಟೋಬರ್​ ವರೆಗಿನ ಸೇವೆಗಾಗಿ 2. 5,2198 ರೂಪಾಯಿ ಮುಂಗಡ ಹಣವನ್ನ ಪಾವತಿಸಿರುವುದಾಗಿ ಮಾಹಿತಿ ನೀಡಿದೆ.

ಈ ಹಿಂದಿನ ಎಲ್ಲ ಕೋಚ್​ಗಳಿಗಿಂತ ಈಗನ ತಂಡದ ಕೋಚ್ ರವಿಶಾಸ್ತ್ರಿ ಎಲ್ಲರಿಗಿಂತ ಹೆಚ್ಚಿನ ವೇತನ ಪಡೆಯುತ್ತಿದ್ದಾರೆ. 2014ರಲ್ಲಿ ಕೋಚ್ ರವಿಶಾಸ್ತ್ರಿ ತಂಡದ ನಿರ್ದೇಶಕರಾಗಿ ತಂಡದ ಕೆಲಸಮಾಡಿದ್ದರು. 2016ರವರೆಗೆ ನಿರ್ದೇಶಕನಾಗಿ ಕೆಲಸ ಮಾಡಿದ ರವಿಶಾಸ್ತ್ರಿ ನಂತರ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಹಾಕಿದ್ರು. ಆದರೆ ಅನಿಲ್​ ಕುಂಬ್ಳೆ ಅವರನ್ನ ಮುಖ್ಯ ಕೋಚ್​ ಆಗಿ ನೇಮಿಸಲಾಯಿತು.

ALSO READ  ಇಂಗ್ಲೆಂಡ್ ವಿರುದ್ಧದ 2 ಟೆಸ್ಟ್​ಗೆ ಪೃಥ್ವಿ ಶಾ, ಹನುಮ ವಿಹಾರಿಗೆ ಬುಲಾವ್​

ಒಂದು ವರ್ಷಗಳ ಕಾಲ ಮುಖ್ಯ ಕೋಚ್ ಹುದ್ದೆ ನಿಭಾಯಿಸಿದ ಅನಿಲ್ ಕುಂಬ್ಳೆ ನಂತರ ತಂಡದ ನಾಯಕ ವಿರಾಟ್ ಕೊಹ್ಲಿ ಜೊತೆ ಸಂಬಂಧ ಹಾಳಾಯಿತು.

ಅನಿಲ್​ ಕುಂಬ್ಳೆಯಿಂದ ತೆರವಾಗಿದ್ದ ಹುದ್ದೆಗೆ ಕಳೆದ ವರ್ಷ ಬಿಸಿಸಿಐ ಅರ್ಜಿ ಆಹ್ವಾನಿಸಿತು. ಮೊದಲಿಗೆ ಕೋಚ್​ ರವಿ ಶಾಸ್ತ್ರಿ ಅರ್ಜಿ ಸಲ್ಲಿಸಲ್ಲಿಲ್ಲ. ನಂತರ ಬಿಸಿಸಿಐ ಇನ್ನೊಮ್ಮೆ ಅರ್ಜಿ ಆಹ್ವಾನಿಸಿದಾಗ ರವಿಶಾಸ್ತ್ರಿ ಅರ್ಜಿ ಹಾಕಿ ಟೀಂ ಇಂಡಿಯಾಕ್ಕೆ ನೂತನ ಕೋಚ್​ ಆಗಿ ಆಯ್ಕೆಯಾದರು.