Top

ಭಾರತ್ ಬಂದ್: ಏನಿರುತ್ತೆ? ಏನಿರಲ್ಲ?

ಭಾರತ್ ಬಂದ್: ಏನಿರುತ್ತೆ? ಏನಿರಲ್ಲ?
X

ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಖಂಡಿಸಿ ನಾಳೆ ಭಾರತ ಬಂದ್ ಗೆ ಕರೆ ನೀಡಲಾಗಿದೆ. ಬಂದ್ಗೆ ಹಲವು ಸಂಘಟನೆಗಳು ಕೈಜೋಡಿಸಿದ್ದು, ಪ್ರತಿಭಟನೆ-ಜಾಥಾ ಜೋರಾಗಿ ಇರಲಿದೆ. ಹೀಗಾಗಿ ಇಡೀ ಭಾರತ ನಾಳೆ ಮುಂಜಾನೆಯಿಂದ್ಲೇ ಸ್ತಬ್ಥವಾಗಲಿದ್ದು, ಮೋದಿ ವಿರುದ್ದ ರಣಕಹಳೆ ಸಾರಲು ಸಿದ್ದತೆ ನಡೆದಿದೆ. ಸೋಮವಾರ ಏನೇನಿರುತ್ತೆ ಏನೇನಿರಲ್ಲ ಅಂತ ನೋಡೋಣ.

ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರಿಗೆ ಕಾಂಗ್ರೆಸ್ ಸೇರಿದಂತೆ ಮಿತ್ರ ಪಕ್ಷಗಳು ಭಾರತ ಬಂದ್ ಗೆ ಕರೆ ಕೊಟ್ಟಿವೆ. ಹಲವು ಸಂಘಟನೆಗಳು ಬಂದ್ಗೆ ಬೆಂಬಲ ವ್ಯಕ್ತ ಸೂಚಿಸಿವೆ. ಹಾಗಿದ್ದರೆ ಯಾವೆಲ್ಲಾ ಸೇವೆ ನಾಳೆ ಲಭ್ಯವಿದೆ.

ಏನಿರುತ್ತೆ?

  • ಔಷಧಿ ಮಳಿಗೆ ಪೆಟ್ರೋಲ್
  • ಆಸ್ಪತ್ರೆ ಡಿಸೇಲ್
  • ಹೋಟೆಲ್ ತುರ್ತು ಸೇವೆಗಳು

    ಏನಿರಲ್ಲ?

  • ಕೆಎಸ್ಆರ್ಟಿಸಿ ಬಿಎಂಟಿಸಿ
  • ಓಲಾ ಊಬರ್ ಟ್ಯಾಕ್ಸಿ,
  • ಆಟೋ ಮಾಲ್ ಮಾರುಕಟ್ಟೆ ಸೇವೆ ವ್ಯತ್ಯಯ
  • ನಮ್ಮ ಮೆಟ್ರೋ ಸಂಚಾರ ವ್ಯತ್ಯಯ

ಇದೆಲ್ಲದ ನಡುವೆ ಬಂದ್‌ಗೆ ಕೆಲ ಖಾಸಗಿ ಕಂಪನಿಗಳು ಬೆಂಬಲ ಸೂಚಿಸಿದ್ದು ಇನ್ನು ಕೆಲವು ಕಡೆ ಬೆಬಂಲ ಸೂಚಿಸಿದ್ದಾರೆ.. ಹೀಗಾಗಿ ನಾಳೆ ಬ್ಯಾಂಕಿಂಗ್‌ ಸೇವೆ, ಸರ್ಕಾರಿ ಹಾಗೂ ಖಾಸಗಿ ಶಾಲೆಗಳು, ಐಟಿ,ಬಿಟಿ ಕಂಪನಿಗಳ ಸೇವೆ ಹಾಗೂ ಕೆಎಸ್​ಆರ್​ಟಿಸಿ, ಬಿಎಂಟಿಸಿ ಸೇವೆ ಕೂಡ ಅನುಮಾನವಾಗಿದೆ.

ಇನ್ನು ನಾಳೆ ಬೆಳಗ್ಗೆಯಿಂದಲೇ ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್‌ಗಳು ರಸ್ತೆಗಿಳಿಯೋದಿಲ್ಲ. ಭಾರತ್ ಬಂದ್‌ಗೆ ಎಐಟಿಯುಸಿ, ಸಿಐಟಿಯು ಬೆಂಬಲ ನೀಡಿದ್ದು ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಬಸ್ ಸಂಚಾರ ಇರೋದಿಲ್ಲ. ಇತ್ತ ಖಾಸಗಿ ಬಸ್‌ಗಳಿಂದಲೂ ಪರೋಕ್ಷ ಬೆಂಬಲ ವ್ಯಕ್ತವಾಗಿದ್ದು, ಬಸ್ ನಿಲ್ಲಿಸುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ.

ಓಲಾ, ಉಬರ್, ಟ್ಯಾಕ್ಸಿ ಮಾಲಿಕರ ಸಂಘಟನೆಗಳು ಬೆಂಬಲ ಸೂಚಿಸಿದ್ದು, ಪ್ರವಾಸಿ ಟ್ಯಾಕ್ಸಿ ಮಾಲಿಕರಿಂದ ಪರೋಕ್ಷ ಬೆಂಬಲ ವ್ಯಕ್ತವಾಗಿದೆ. ಹಲವು ಆಟೋ ಸಂಘಟನೆಗಳಿಂದಲೂ ಬಂದ್ ಬೆಂಬಲಿಸಿ, ಮುಷ್ಕರದಲ್ಲಿ ಭಾಗಿಯಾಗಿಯಾಗಲಿದ್ದಾರೆ.

ಇತ್ತ ಬಿಎಂಟಿಸಿ- ಕೆಎಸ್ ಆರ್ ಟಿ ಸಿ ನೌಕರರು ಬಂದ್ ಗೆ ಬೆಂಬಲ ನೀಡಿರೋ ಹಿನ್ನೆಲೆ, ಮುಂಜಾಗ್ರತೆ ಕ್ರಮ ಕೈಗೊಂಡಿದೆ. ನಾಳೆ ಬಸ್ ಸಂಚಾರ ಸ್ಥಗಿತಗೊಳ್ಳದಂತೆ ಕ್ರಮ ಜರುಗಿಸಲಾಗಿದ್ದು, ನಾಳೆ ಬಿಎಂಟಿಸಿ ನೌಕರರಿಗೆ ಯಾವುದೇ ರಜೆ ಇಲ್ಲ. ಬಿಎಂಟಿಸಿಯ 36 ಸಾವಿರ ನೌಕರರಿಗೆ ರಜೆ ರದ್ದು ಮಾಡಲಾಗಿದೆ. ಏಕಾಏಕಿ ರಜೆ ಕೈಗೊಂಡರೆ ನಿಯಮದ ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಬಿಎಂಟಿಸಿ ನಿರ್ದೇಶಕ ಪ್ರಕಾಶ್ ಗೌಡ ಆದೇಶ ಹೊರಡಿಸಿದ್ದಾರೆ.

ಕಳೆದ ತಿಂಗಳಷ್ಟೆ ಲಾರಿ ಮುಷ್ಕರ ನಡೆಸಿರೋದ್ರಿಂದ ನಾಳೆಯ ಬಂದ್ಗೆ ನಮ್ಮ ಬೆಂಬಲ ಇಲ್ಲ ಎಂದು ಲಾರಿ ಮಾಲೀಕರ ಸಂಘದ ಷಣ್ಮುಗಪ್ಪ ತಿಳಿಸಿದ್ದಾರೆ. ಲಾರಿ ಮೂಲಕ ಎಲ್ಲ ಸರಕು ಸಾಗಣೆ ವಾಹನಗಳ ಸೇವೆ ಲಭ್ಯವಿರುತ್ತದೆ. ಬಿಎಂಆರ್​​​ಎಲ್ ಕೂಡ ಬಂದ್ ಎಫೆಕ್ಟ್ ನೋಡಿಕೊಂಡು ಮೆಟ್ರೋ ಓಡಿಸುವ ಅಥವಾ ನಿಲ್ಲಿಸುವ ಬಗ್ಗೆ ನಿರ್ಧಾರ ಮಾಡಲಿದೆ . ಮತ್ತೊಂದೆಡೆ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಲಿದ್ದು, ನಾಳೆ ಬೀದಿಗಿಳಿದು ಪ್ರತಿಭಟಿಸಲು ನಿರ್ಧಾರ ಮಾಡಿವೆ.

ಬಂದ್ ಹಿನ್ನೆಲೆ ಶಿವಾಜಿನಗರದ ರಸೆಲ್ ಮಾರ್ಕೆಟ್ ಸೇರಿಂತೆ ಬಹುತೇಕ ಮಾರುಕಟ್ಟೆಗಳು ಸಂಪೂರ್ಣ ಬಂದ್ ಮಾಡಲಾಗುತ್ತೆ. ದಿನ ಬಳಕೆ ವಸ್ತುಗಳು ಬೆಲೆ ಏರಿಕೆ ವಿರುದ್ಧ ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳು ಬೆಂಬಲ ಕೊಟ್ಟಿವೆ. ತೈಲ ಬೆಲೆ ಏರಿಕೆ ಖಂಡಿಸಿ ನಾಳೆ ದೇಶವ್ಯಾಪ್ತಿ ಬಂದ್ ಮಾಡುತ್ತೇವೆ ಅಂತ ಕಾಂಗ್ರೆಸ್ ಪಕ್ಷ ಹೇಳ್ತಿದೆ. ಕೇಂದ್ರದ ವಿರುದ್ದ ಕಾಂಗ್ರೆಸ್ ರಾಜಕೀಯ ಪ್ರೇರಿತ ಬಂದ್ ಮಾಡುತ್ತಿ ಅಂತಾ ಬಿಜೆಪಿ ಆರೋಪಿಸಿದೆ. ಇಷ್ಟಾದ್ರೂ ನಾಳೆಯ ಭಾರತ ಬಂದ್ ಯಶಸ್ವಿ ಆಗುತ್ತಾ ಕಾದುನೋಡಬೇಕು.

Next Story

RELATED STORIES