Top

ಆಂಗ್ಲರ ಎದುರು ಸಂಕಷ್ಟಕ್ಕೆ ಸಿಲುಕಿದ ಕೊಹ್ಲಿ ಪಡೆ

ಆಂಗ್ಲರ ಎದುರು ಸಂಕಷ್ಟಕ್ಕೆ ಸಿಲುಕಿದ ಕೊಹ್ಲಿ ಪಡೆ
X

ಓವೆಲ್: ಬ್ಯಾಟಿಂಗ್ ಬೌಲಿಂಗ್ ಎರಡರಲ್ಲೂ ಎಡವಿದ ಟೀಂ ಇಂಡಿಯಾ 2ನೇ ದಿನ ಆಂಗ್ಲರ ಎದುರು ಸಂಕಷ್ಟಕ್ಕೆ ಸಿಲುಕಿತು.

ಕೊಹ್ಲಿ ಪಡೆ ಮೊದಲ ಇನ್ನಿಂಗ್ಸ್‌ನಲ್ಲಿ ದಿನದಾಟದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು.

ಎರಡನೇ ದಿನ ಬ್ಯಾಟಿಂಗ್ ಮುಂದುವರೆಸಿದ ಸ್ಫೋಟಕ ಬ್ಯಾಟ್ಸ್‍ಮನ್ ಜೋಸ್ ಬಟ್ಲರ್ ಬಾಲಂಗೋಚಿಗಳ ಜೊತೆಗೂಡಿ ಭರ್ಜರಿ ಬ್ಯಾಟಿಂಗ್ ಮಾಡಿ ನೂರಕ್ಕೂ ಹೆಚ್ಚು ರನ್‍ಗಳು ಹರಿದು ಬಂದವು.

ಜೋಸ್ ಬಟ್ಲರ್ (89), ಆದಿಲ್ ರಶೀದ್(15), ಸ್ಟುವರ್ಟ್ ಬ್ರಾಡ್ (38) ರನ್ ಗಳಿಸಿತು. ಕೊನೆಯಲ್ಲಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 332 ರನ್‍ಗಳಿಗೆ ಆಲೌಟ್ ಆಯಿತು.

ಮೊದಲ ಇನ್ನಿಂಗ್ಸ್ ಅರಂಭಿಸಿದ ಟೀಂ ಇಂಡಿಯಾ ಆರಂಭದಲ್ಲೇ ಶಿಖರ್ ಧವನ್(3) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ನಂತರ ಕೆ.ಎಲ್. ರಾಹುಲ್ ಮತ್ತು ಚೇತೇಶ್ವರ ಪೂಜಾರ ತಲಾ 37 ರನ್ ಗಳಿಸಿದ್ದಾಗ ಪೆವಿಲಿಯನ್ ಸೇರಿದ್ರು.

ಅಜಿಂಕ್ಯ ರಹಾನೆ ಶೂನ್ಯಕ್ಕೆ ಔಟಾದ್ರೆ ನಾಯಕ ವಿರಾಟ್ ಕೊಹ್ಲಿ 49 ರನ್‍ಗಳಿಸಿದ್ದಾಗ ಸ್ಟೋಕ್ಸ್ ಗೆ ವಿಕೆಟ್ ಒಪ್ಪಿಸಿ ಅರ್ಧ ಶತಕದಿಂದ ವಂಚಿತರಾದ್ರು.

ಸಿಕ್ಕ ಅವಕಾಶವನ್ನ ಚೆನ್ನಾಗಿ ಬಳಸಿಕೊಳ್ಳದ ರಿಶಬ್‌ಪಂತ್ 5ರನ್ ಗಳಿಸಿದ್ರು. ಕೊನೆಯಲ್ಲಿ ಹನುಮ ವಿಹಾರಿ ಅಜೇಯ25, ರವೀಂದ್ರ ಜಡೇಜಾ ಅಜೇಯ8 ರನ್‍ಗಳಿಸಿ ಮೂರನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡರು.

Next Story

RELATED STORIES