Top

5ನೇ ಟೆಸ್ಟ್​: ಹಿನ್ನಡೆ ಅಂತರ ತಗ್ಗಿಸಿದ ಜಡೇಜಾ, ಹನುಮ

5ನೇ ಟೆಸ್ಟ್​: ಹಿನ್ನಡೆ ಅಂತರ ತಗ್ಗಿಸಿದ ಜಡೇಜಾ, ಹನುಮ
X

ಆಲ್​ರೌಂಡರ್ ರವೀಂದ್ರ ಜಡೇಜಾ ಹಾಗೂ ಹನುಮ ವಿಹಾರಿ ಅರ್ಧಶತಕಗಳ ಹೊರತಾಗಿಯೂ ಭಾರತ ತಂಡ 5ನೇ ಹಾಗೂ ಅಂತಿಮ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 40 ರನ್ ಗಳ ಅಲ್ಪ ಹಿನ್ನಡೆಗೆ ಒಳಗಾಯಿತು.

ಓವಲ್​ನಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಭಾನುವಾರ 174 ರನ್​ಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ತಂಡ ಚಹಾ ವಿರಾಮದ ವೇಳೆಗೆ 292 ರನ್​ ವರೆಗೂ ಮೊದಲ ಇನಿಂಗ್ಸ್ ಮುಂದುವರಿಸಿತು. ಇದರೊಂದಿಗೆ ಭಾರತ ಭಾರೀ ಹಿನ್ನಡೆಯ ಭೀತಿಯಿಂದ ಪಾರಾಗಿದ್ದು, ಪಂದ್ಯ ರೋಚಕತೆ ಉಳಿಸಿಕೊಂಡಿದೆ.

ಹನುಮ ವಿಹಾರಿ ಮತ್ತು ಜಡೇಜಾ 7ನೇ ವಿಕೆಟ್​ಗೆ 77 ರನ್​ಗಳ ಜೊತೆಯಾಟ ನಿಭಾಯಿಸಿದರು. 25 ರನ್ ಗಳಿಸಿ ವಿಕೆಟ್ ಉಳಿಸಿಕೊಂಡಿದ್ದ ಹನುಮ ವಿಹಾರಿ 124 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಸೇರಿದ 56 ರನ್ ಬಾರಿಸಿ ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿದ ಸಾಧನೆಯೊಂದಿಗೆ ನಿರ್ಗಮಿಸಿದರು.

ವಿಹಾರಿ ನಿರ್ಗಮಿಸಿದ ನಂತರ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತ ರವೀಂದ್ರ ಜಡೇಜಾ 156 ಎಸೆತಗಳಲ್ಲಿ 11 ಬೌಂಡರಿ ಹಾಗೂ 1 ಸಿಕ್ಸರ್ ಸಹಾಯದಿಂದ 86 ರನ್ ಬಾರಿಸಿ ಔಟಾಗದೇ ಉಳಿದರು. ಅದರಲ್ಲೂಕೊನೆಯ ವಿಕೆಟ್​ಗೆ 32 ರನ್ ಪೇರಿಸಿದರು. ಇದರಲ್ಲಿ ಜಸ್​ ಪ್ರೀತ್ ಬುಮ್ರಾ ಪಾಲು 14 ಎಸೆತಗಳಲ್ಲಿ ಶೂನ್ಯ ಆಗಿದ್ದು ವಿಶೇಷ.

  • ಸಂಕ್ಷಿಪ್ತ ಸ್ಕೋರ್
  • ಇಂಗ್ಲೆಂಡ್ ಮೊದಲ ಇನಿಂಗ್ಸ್ 332
  • ಭಾರತ ಮೊದಲ ಇನಿಂಗ್ಸ್ 292 (ಜಡೇಜಾ ಅಜೇಯ 86, ಹನುಮ 56, ಕೊಹ್ಲಿ 49, ಆ್ಯಂಡರ್ಸನ್ 54/2, ಸ್ಟೋಕ್ಸ್ 56/2, ಮೊಯಿನ್ ಅಲಿ 50/2).

Next Story

RELATED STORIES