Top

ಶೀರೂರು ಶ್ರೀಗಳ ನಿಗೂಢ ಸಾವಿಗೆ ತೆರೆ..!

ಶೀರೂರು ಶ್ರೀಗಳ ನಿಗೂಢ ಸಾವಿಗೆ ತೆರೆ..!
X

ಉಡುಪಿ: ಶೀರೂರು ಶ್ರೀಗಳ ನಿಗೂಢ ಸಾವಿಗೆ ಕೊನೆಗೂ ತೆರೆ ಬಿದ್ದಿದೆ. ಶ್ರೀಗಳದ್ದು ಸಹಜ ಸಾವೆಂದು ವೈದ್ಯರು ವರದಿ ಮಾಡಿದ್ದು, ಕೆಎಂಸಿ ತಜ್ಞರ ತಂಡ ಅಂತಿಮ ವರದಿ ಸಲ್ಲಿಸಿದೆ.

ವೈದ್ಯರ ತಂಡ ಪೊಲೀಸ್ ಇಲಾಖೆಗೆ ಎಫ್‌ಎಸ್‌ಎಲ್ ವರದಿ ಹಸ್ತಾಂತರಿಸಿದ್ದು, ಲಿವರ್ ವೈಫಲ್ಯ, ಅನ್ನನಾಳದಲ್ಲಾದ ರಕ್ತಸ್ರಾವದಿಂದ ಸಾವು ಸಂಭವಿಸಿದೆ ಎಂದಿದ್ದಾರೆ.

ಶ್ರೀಗಳ ನಿಗೂಢ ಸಾವು ತೀವ್ರ ಕೂತುಹಲ ಮೂಡಿಸಿತ್ತು. ಆ.21 ರಂದು ಎಫ್ಎಸ್ಎಲ್ ವರದಿ ಸಿಕ್ಕಿತ್ತು. ಆದರೆ ಕೂಲಂಕುಷ ತನಿಖೆಗಾಗಿ ಪೊಲೀಸರು ಕೆಎಂಸಿ ವೈದ್ಯರಿಗೆ ವರದಿ ನೀಡಲು ಹೇಳಿತ್ತು.

ಇದೀಗ ಕೆಎಂಸಿ ವೈದ್ಯರು ಕೂಡ ಶ್ರೀಗಳದ್ದು ಸಹಜ ಸಾವು ಎಂದಿದ್ದು, ಲಕ್ಷ್ಮೀವರ ತೀರ್ಥ ಶ್ರೀಗಳ ಸಾವಿಗೆ ಕೊನೆಗೂ ತೆರೆ ಬಿದ್ದಿದೆ. ಆದರೆ ಅಂತಿಮ ವರದಿಯ ಬಗ್ಗೆಯೂ ಅಸಮಾಧಾನ ಹೊರಬಿದ್ದಿದೆ.

ಜುಲೈ.19 ರಂದು ಶ್ರೀಗಳು ಉಡುಪಿಯ ಮಣಿಪಾಲ ಕೆಎಂಸಿಯಲ್ಲಿ ಕೊನೆಯುಸಿರೆಳೆದಿದ್ದರು. ದೇಹದಲ್ಲಿ ವಿಷಾಂಶ ಪತ್ತೆಯಾಗಿದ್ದ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದರು. ಮರಣೋತ್ತರ ಪರೀಕ್ಷೆ ವರದಿಯಲ್ಲೂ ಈ ವಿಷಯ ಉಲ್ಲೇಖವಾಗಿತ್ತು.

ಆದರೆ ವೈದ್ಯರ ವರದಿಯಲ್ಲಿ ಮಾತ್ರ ವಿಷಾಂಶ ಪತ್ತೆಯಾಗದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಅಲ್ಲದೇ ಅಂತಿಮ ವರದಿಯ ಬಗ್ಗೆಯೂ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Next Story

RELATED STORIES