Top

ತುಮಕೂರಿನಲ್ಲಿ ನಾಯಿ ದಾಳಿಗೆ ಬಾಲಕಿ ಬಲಿ

ತುಮಕೂರಿನಲ್ಲಿ ನಾಯಿ ದಾಳಿಗೆ ಬಾಲಕಿ ಬಲಿ
X

ಅಣಬೆ ಕೀಳಲು ಹೋಗಿದ್ದ ಬಾಲಕಿ ಮೇಲೆ ದಾಳಿ ನಡೆಸಿದ ನಾಯಿಗಳು ಬಲಿ ಪಡೆದ ಘಟನೆ ತುಮಕೂರಿನಲ್ಲಿ ಸಂಭವಿಸಿದೆ.

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಅರಸರ ಪಾಳ್ಯದಲ್ಲಿ ಈ ಘಟನೆ ಸಂಭವಿಸಿದ್ದು, 10 ವರ್ಷದ ಬಾಲಕಿ ತೇಜಸ್ವಿನಿ ಮೃತಪಟ್ಟಿದ್ದಾಳೆ.

ಕುಣಿಗಲ್ ಕೆರೆಯ ಬಳಿ ಅಣಬೆ ಕೀಳಲು ಹೋಗಿ ಬಾಲಕಿ ಮೇಲೆ ನಾಯಿಗಳು ಏಕಾಏಕಿ ದಾಳಿ‌ ‌ನಡೆಸಿವೆ. ಸುಮಾರು 5ಕ್ಕೂ ಹೆಚ್ಚು ನಾಯಿಗಳು ದಾಳಿ ನಡೆಸಿವೆ ಎಂದು ಹೇಳಲಾಗಿದೆ.

ದಾಳಿ ನಡೆಸಿದ ನಾಯಿಗಳು ಬಾಲಕಿಯ ಕೈಗಳನ್ನು ತಿಂದು ಹಾಕಿವೆ. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Next Story

RELATED STORIES