ಒಬ್ಬನಿಗಾಗಿ ಮೂವರು ಹುಡುಗಿಯರ ಹೊಡೆದಾಟ

X
TV5 Kannada9 Sep 2018 9:14 AM GMT
ಹುಬ್ಬಳ್ಳಿ: ಹುಡುಗಿಗಾಗಿ ಹುಡುಗರು ಬೀದಿಯಲ್ಲಿ ನಿಂತು ಹೊಡೆದಾಡಿಕೊಂಡಿದ್ದನ್ನ ನೋಡಿದ್ದೇವೆ . ಆದರೆ, ಒಬ್ಬ ಹುಡುಗನಿಗಾಗಿ ಮೂವರು ಹುಡುಗಿಯರು ರಸ್ತೆಯಲ್ಲಿ ಜಡೆಜಗಳ ಮಾಡಿದ್ದಾರೆ.
ಹುಬ್ಬಳ್ಳಿಯ ಗೋಕುಲ್ ರೋಡ್ನಲ್ಲಿ ಮೂವರು ಕಾಲೇಜು ಹುಡುಗಿಯರು. ಒಬ್ಬ ಹುಡುಗನಿಗಾಗಿ ನಡುರಸ್ತೆಯಲ್ಲಿ ಜಗಳವಾಡಿದ್ದಾರೆ. ಹಿಗ್ಗಾಮುಗ್ಗಾ ಹೊಡೆದಾಡಿಕೊಂಡಿದ್ದಾರೆ.
ಮೂವರು ವಿದ್ಯಾರ್ಥಿನಿಯರು ಹುಬ್ಬಳ್ಳಿಯ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿಯರಾಗಿದ್ದು, ಹೊಟೇಲ್ನಿಂದ ವಾಪಸ್ಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಕನ್ಯಾಮಣಿಯರ ಈ ಫೈಟ್ ನೋಡಿದ ಜನ, ಕಕ್ಕಾಬಿಕ್ಕಿಯಾಗಿದ್ದಾರೆ. ವಾಹನ ಚಲಾಯಿಸುವವರು ಒಂದು ಕ್ಷಣ ನಿಂತು ಇವರ ಶೋ ವೀಕ್ಷಿಸಿದ್ದು, ಯುವತಿಯರ ಈ ಫೈಟ್ ಸ್ಥಳೀಯರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
Next Story