ಎಸಿಬಿ ಬಲೆಗೆ ಬಿದ್ದ ಭ್ರಷ್ಟ ಪೊಲೀಸ್ ಅಧಿಕಾರಿ

ಬೆಂಗಳೂರು : ಭ್ರಷ್ಠಾಚಾರ ನಿಗ್ರಹ ದಳದ ಅಧಿಕಾರಿಗಳು ಮತ್ತೆ ಸದ್ದು ಮಾಡಿದ್ದಾರೆ. ಸ್ನೋಕರ್ ನಡೆಸಿದ್ದ ವ್ಯಕ್ತಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದ ಪೊಲೀಸ್ ಇನ್ಸ್ಪೆಕ್ಟರ್‌ರನ್ನು ರೆಡ್ ಹ್ಯಾಂಡ್ ಆಗಿ ಬಲೆಗೆ ಕೆಡವಿಕೊಂಡಿದ್ದಾರೆ. ಹಾಗಾದ್ರೆ ಎಸಿಬಿ ಬಲೆಗೆ ಬಿದ್ದ ಪೊಲೀಸ್ ಇನ್ಸ್ಪೆಕ್ಟರ್ ಯಾರು..? ಆ ಬಗ್ಗೆ ಮುಂದೆ ಓದಿ.

ನಗರದ ಪ್ರತಿಷ್ಠಿತ ಏರಿಯಾಗಳಲ್ಲಿ ಒಂದಾದ ಬಾಣಸವಾಡಿ ಪೊಲೀಸ್ ಇನ್ಸ್ಪೆಕ್ಟರ್ ಮುನಿಕೃಷ್ಣ, ಇಲ್ಲಿನ ಕಮ್ಮನಹಳ್ಳಿ ಮುಖ್ಯ ರಸ್ತೆಯಲ್ಲಿ ಸೈಯದ್ ಇಸ್ಮಾಯಿಲ್ ಅನ್ನೋರು ಸ್ನೋಕರ್ ನಡೆಸುತ್ತಿದ್ರು.

ಈ ಹಿಂದೆ ಸ್ನೋಕರ್ ನಡೆಸೋಕೆ ಪ್ರತಿ ತಿಂಗಳು 20 ಸಾವಿರ ಹಣ ಕೊಡಬೇಕು ಅಂತಾ ಒತ್ತಡ ಹಾಕಿದ್ದ ಪೊಲೀಸರು, ಇನ್ಸ್ಪೆಕ್ಟರ್ ಮುನಿಕೃಷ್ಣ ಸೂಚನೆ ಮೇರೆಗೆ ತಿಂಗಳಿಗೆ 60 ಸಾವಿರ ಹಣ ನೀಡುವಂತೆ ಬೆದರಿಸಿದ್ರು. ಒಂದು ವೇಳೆ ಹಣ ನೀಡಿಲ್ಲ ಅಂದ್ರೆ ಇಲ್ಲಸಲ್ಲದ ಕೇಸ್ ಹಾಕಿ ಅಂಗಡಿ ಮುಚ್ಚಿಸುವಿದಾಗಿ ಬೆದರಿಸಿದ್ರು.

ಯಾವಾಗ ಇನ್ಸ್ಪೆಕ್ಟರ್ ಮುನಿಕೃಷ್ಣರ ಬೆದರಿಕೆ ಜಾಸ್ತಿ ಅಯ್ಯೋ, ಸೈಯದ್ ಇಸ್ಮಾಯಿಲ್ ಎಸಿಬಿಗೆ ದೂರು ನೀಡಲು ನಿರ್ಧಾರ ಮಾಡಿ ಎಸಿಬಿ ಪೊಲೀಸರಿಗೆ ದೂರು ನೀಡಿದು. ಇಂದು ಮಧ್ಯಾಹ್ನ ಎರಡುವರೇ ಸುಮಾರಿಗೆ ಸೈಯದ್ ರಿಂದ ಅಡ್ವಾನ್ಸ್ ಹಣ ಮೂವತ್ತು ಸಾವಿರ ಹಣ ಪಡೆಯೋ ವೇಳೆ ಇನ್ಸ್ಪೆಕ್ಟರ್ ಮುನಿಕೃಷ್ಣ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಪೊಲೀಸ್ ಠಾಣೆಯಲ್ಲೇ ಸುಮಾರು ಐದು ಗಂಟೆಗಳ ಕಾಲ ವಿಚಾರಣೆ ನಡೆಸಿದ ಪೊಲೀಸರು. ಠಾಣೆಯಲ್ಲೇ ಸಮವಸ್ತ್ರ ತೆಗೆಸಿ ಟೀ ಶರ್ಟ್ ಹಾಕಿಸಿಕೊಂಡು ನ್ಯಾಯಧೀಶರ ಮುಂದೆ ಹಾಜರುಪಡಸಿದ್ರು.

ನ್ಯಾಯವನ್ನು ಕಾಪಾಡ್ತೀವಿ ಅಂತಾ ಖಾಕಿ ತೊಟ್ಟು ಈ ರೀತಿ ಡೀಲ್ ಗೆ ಇಳಿಯೋ ಪೊಲೀಸರಿಗೆ ಎಸಿಬಿ ದಾಳಿಯಿಂದ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ವರದಿ : ಸಂಜಯ್ ಎಂ ಹುಣಸನಹಳ್ಳಿ, ಟಿವಿ5 ಬೆಂಗಳೂರು