Top

ಕುಸಿದು ಬಿದ್ದ ರೆಬೆಲ್‌ ಸ್ಟಾರ್‌ ಅಂಬರೀಶ್‌.!

ಕುಸಿದು ಬಿದ್ದ ರೆಬೆಲ್‌ ಸ್ಟಾರ್‌ ಅಂಬರೀಶ್‌.!
X

ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರೆಬೆಲ್‌ ಸ್ಟಾರ್ ಅಂಬರೀಶ್‌ ಕುಸಿದು ಬಿದ್ದ ಘಟನೆ ನಡೆದಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕರ್ನಾಟಕ ಸಿನಿಮಾ ಕ್ರಿಕೇಟ್‌ ಲೀಗ್‌ ಪಂದ್ಯದ ಉದ್ಘಾಟನಾ ಸಮಾರಂಭ ಇಂದು ನಡೆಯುತ್ತಿತ್ತು.

ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ರೆಬೆಲ್‌ ಸ್ಟಾರ್ ಅಂಬರೀಶ್‌ ಬೆಳಿಗ್ಗೆಯ ಕ್ರೀಡಾಂಗಣದಲ್ಲಿ ಓಡಾಡಿಕೊಂಡಿದ್ದರು. ಈ ವೇಳೆ ಚೇರ್‌ನಲ್ಲಿ ಕುಳಿತಿದ್ದ ಅಂಬರೀಶ್‌ ಎದ್ದು ನಡೆಯುವಾಗ ಕುಸಿದು ಬಿದ್ದಿದ್ದಾರೆ.

ಕುಸಿದು ಬಿದ್ದ ಅಂಬರೀಶ್‌ ಅವರನ್ನು ಕೂಡಲೇ ಕ್ರೀಡಾಂಗಣದಿಂದ ತಮ್ಮ ಕಾರಿನಲ್ಲೇ ರಾಕ್ಲೈನ್‌ ವೆಂಕಟೇಶ್‌ ಜೊತೆಗೂಡಿ, ಖಾಸಗಿ ಆಸ್ಪತ್ರೆಗೆ ತೆರಳಿ, ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಕುರಿತು ವೈದ್ಯರು ತಪಾಸಣೆ ನಡೆಸಿ, ಬೆಳಿಗ್ಗೆಯಿಂದ ಬಿಸಿಲಿನಲ್ಲಿ ಓಡಾಡಿ ಆಯಾಸ ಉಂಟಾಗಿದ್ದರಿಂದ ಹೀಗೆ ಆಗಿದೆ ಎಂದು ತಿಳಿಸಿದ್ದಾರೆ.

ಸದ್ಯಕ್ಕೆ ರೆಬೆಲ್‌ ಸ್ಟಾರ್ ಅಂಬರೀಶ್‌ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

Next Story

RELATED STORIES