Top

ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಸೆಪ್ಟಂಬರ್‌ ಸಂಕಟ : ಮತ್ತೆ ಏನಿದು ಸೆ.17ರ ಮಹಿಮೆ?

ಬೆಂಗಳೂರು : ರಾಜ್ಯ ಸರ್ಕಾರಕ್ಕೆ ಸೆಪ್ಟಂಬರ್‌ ಮಾಸ ಸಂಕಟಗಳ ಮೇಲೆ ಸಂಕಟಗಳನ್ನು ತಂದೊಡ್ಡುತ್ತಿದೆ. ಸೆಪ್ಟಂಬರ್‌ 3, ಸೆಪ್ಟಂಬರ್‌ 7 ಈಗ ಸೆಪ್ಟಂಬರ್‌ 17. ಏನಿದು 17ರ ಮಹಿಮೆ? ನಿಜಕ್ಕೂ ಸರ್ಕಾರ ಸೆಪ್ಟಂಬರ್‌ 17ಕ್ಕೆ ಬೀಳುತ್ತಾ? ಹಾಗಾದ್ರೆ ಸೆಪ್ಟಂಬರ್‌ 17ರ ಬರುವಿಕೆಗೆ ಕಾಯುತ್ತಿರೋರು ಯಾರಾರು? ಅವರಿಂದ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಠಿಯಾಗುತ್ತಾ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರಕ್ಕಾಗಿ ಮುಂದೆ ಓದಿ..

ಸರ್ಕಾರಕ್ಕೆ ಮತ್ತೊಮ್ಮೆ ಸೆಪ್ಟಂಬರ್ ಸಂಕಟ

ಈ ಬಾರಿ ಸರ್ಕಾರ ಬೀಳೋದು ಖಚಿತಾನಾ?

ಹೌದು... ರಾಜ್ಯದಲ್ಲಿ ಕುಮಾರಸ್ವಾಮಿ ನೇತೃತ್ವದ ಸಮಿಶ್ರ ಸರ್ಕಾರಕ್ಕೆ ಸೆಪ್ಟಂಬರ್‌ ಸಂಕಷ್ಟ ಸಾಕಷ್ಟು ಕಾಟ ಕೊಡುತ್ತಿದೆ. ಸೆ.3ರ ನಂತರ ಸೆ.7ರಂದು ಸರ್ಕಾರಕ್ಕೆ ಸಂಕಷ್ಟ ಎದುರಾಗಲಿದೆ ಎಂದು ಹೇಳಲಾಗುತ್ತಿತ್ತು. ಆದ್ರೆ ಯಾವುದೇ ಸಂಕಷ್ಟ ಎದುರಾಗಲಿಲ್ಲ. ಈಗ ಸೆ.17ರಂದು ಸರ್ಕಾರದಲ್ಲಿ ಅಲ್ಲೋಲ ಕಲ್ಲೋಲ ಆಗುತ್ತೆ ಎಂದು ಹೇಳಲಾಗ್ತಿದೆ. ಆ ದಿನದ ಬರುವಿಕೆಗೆ ಕಾಂಗ್ರೆಸ್‌ ಶಾಸಕರೇ ಕಾಯ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಸರ್ಕಾರ ಬೀಳಿಸಲು ಕಾಯ್ತಿರೋ ಶಾಸಕರು ಯಾರು?

ಸರ್ಕಾರ ಉರುಳಿಸಲು ಅವರು ಮಾಡಿರುವ ಪ್ಲಾನ್‌ ಏನು?

ಸಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಸದ್ಯಕ್ಕೆ ವಿದೇಶ ಪ್ರವಾಸದಲ್ಲಿದ್ದಾರೆ. ಅವರು ಬೆಂಗಳೂರಿಗೆ ವಾಪಸಾಗೋದು ಸೆ. 17ರಂದು. ಹೀಗಾಗಿ ಆ ದಿನದ ಬರುವಿಕೆಗೆ ಕಾಯುತ್ತಿದ್ದಾರೆ ಜಾರಕಿಹೊಳಿ ಬ್ರದರ್ಸ್. ಶಾಸಕ ಸತೀಶ್‌ ಜಾರಕಿಹೊಳಿ ಮತ್ತು ಸಚಿವ ರಮೇಶ್‌ ಜಾರಕಿಹೊಳಿ ಅವರು ಸಿದ್ದು ಆಗಮನಕ್ಕೆ ಕುತೂಹಲದಿಂದ ಕಾಯುತ್ತಿದ್ದಾರೆ. ಬೆಳಗಾವಿ ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯ ಸಂದರ್ಭದಲ್ಲಿ ನಡೆದ ಬೆಳವಣಿಗೆ ಬಗ್ಗೆ ಸಿದ್ದರಾಮಯ್ಯ ಅವರಿಗೆ ಸತೀಶ್ ಜಾರಕಿಹೊಳಿ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸುವ ಸಾಧ್ಯತೆ ಇದೆ.

ಸಿದ್ದು ಫಾರಿನ್‌ ಟೂರ್‌ ನಂತ್ರ ಮುಂದೆ ಏನು.?

ಜಾರಕಿಹೊಳಿ, ಹೆಬ್ಬಾಳ್ಕರ್‌ ಮೂಗಿಗೆ ತುಪ್ಪ.?

ಸತೀಶ್ ಜಾರಕಿಹೊಳಿ ಸಲ್ಲಿಸುವ ವರದಿಯನ್ನು ಆಧರಿಸಿ ಸಿದ್ದರಾಮಯ್ಯ ಯಾವ ನಿಲುವು ತಳೆಯುತ್ತಾರೆ? ಸತೀಶ್‌ ಜಾರಕಿಹೊಳಿ ಅವರನ್ನು ಬೆಂಬಲಿಸ್ತಾರಾ? ಹೆಬ್ಬಾಳ್ಕರ್‌ಗೆ ತಾಕೀತು ಮಾಡ್ತಾರಾ? ಇಬ್ಬರ ಮೂಗಿಗೂ ತುಪ್ಪ ಸವರಿ ಸಮಿಶ್ರ ಸರ್ಕಾರ ಸುಗಮವಾಗಿ ಸಾಗಲು ಅನುವು ಮಾಡಿಕೊಡ್ತಾರಾ? ಅಥವಾ ತೆರೆ ಮರೆಯಲ್ಲಿ ಸತೀಶ್‌ ಜಾರಕಿಹೊಳಿ ಅವರ ಆಕ್ರೋಶಕ್ಕೆ ತುಪ್ಪ ಸುರಿದು ರಾಜಕೀಯ ಕ್ಷಿಪ್ರ ಕ್ರಾಂತಿಗೆ ಕಾರಣರಾಗ್ತಾರಾ? ಈ ರಾಜಕೀಯ ಸನ್ನಿವೇಶವನನ್ನು ಬಿಜೆಪಿ ಬಳಕೆ ಮಾಡಿಕೊಂಡು ಸರ್ಕಾರ ರಚನೆ ಮಾಡುತ್ತಾ? ಸಮಿಶ್ರ ಸರ್ಕಾರ ಉರುಳಲು ಇದಕ್ಕೆ ಸೆ. 17ರ ನಂತರ ಸಿದ್ದರಾಮಯ್ಯ ಅನುಸರಿಸುವ ನಡೆ ಉತ್ತರ ನೀಡಲಿದೆ.

ವರದಿ : ಗುರುಲಿಂಗಸ್ವಾಮಿ ಹೊಳಿಮಠ, ಪೊಲಿಟಿಕಲ್ ಎಡಿಟರ್‌, ಟಿವಿ5 ಬೆಂಗಳೂರು

Next Story

RELATED STORIES