ಹಸಿರ ದೃಶ್ಯ ವೈಭವದ ಸೊಬಗು, ಊಟಿ ಪ್ರವಾಸದ ಮೆರೆಗು

ಮಧು ಜುಂಬನಕ್ಕೆ ಪ್ರಶಾಂತ ಸ್ಥಳ, ಪ್ರೇಮಿಗಳ ಪಾಲಿಗಂತೂ ಸ್ವರ್ಗ ಸಮಾನ. ಬೆಟ್ಟ, ಬಯಲು, ಹಸಿರು ಕಾನನದ ಸಿರಿ. ಅಬ್ಬಾ ನೋಡುತ್ತಾ ಹೋದ ಹಾಗೇ ಮನಮೋಹಕಗೊಳಿಸುತ್ತೆ. ರಮಣೀಯ ಪ್ರಕೃತಿಯ ಸೌಂದರ್ಯ ರಾಶಿ ಎಂತವರನ್ನಾದರೂ ಇಲ್ಲಿ ಅಕರ್ಷಿಸುತ್ತೆ. ಅಂತ ಸ್ಥಳವೇ ತಮಿಳುನಾಡಿನ ಪ್ರವಾಸಿ ತಾಣ ಊಟಿ. ಆ ರಮಣೀಯತೆಯ ಸವಿಯನ್ನ ಓದುತ್ತಾ ಸುತ್ತಿಕೊಂಡು ಬರೋಣ ಬನ್ನಿ..

ಈ ಮೊದಲೇ ಅನೇಕ ರಮಣೀಯ ಪ್ರಕೃತಿ ಸೌಂದರ್ಯದ ಅಗಣಿತ ರಾಶಿಯನ್ನ ನಿಮ್ಮ ಮುಂದೆ ತೆರೆದಿಟ್ಟಿದ್ದೇವೆ. ಅದರೂ ಮತ್ತೆ ಮತ್ತೆ ನೋಡಬೇಕು ಎನ್ನು ತಾಣಗಳು ಈ ಸಾಲಿನಲ್ಲಿ ಇನ್ನೂ ಹೆಚ್ಚಾಗುತ್ತಾ ಹೋಗುತ್ತಾವೆ ವಿನಹ ಕಡಿಮೆ ಅಂತೂ ಆಗೋದಿಲ್ಲ. ಇಂತಹ ಒಂದು ತಾಣವೇ ಊಟಿ….

ಬೆಟ್ಟ, ಬಯಲು, ಆಕಾಶ, ಹಸಿರ ದೃಶ್ಯ ವೈಭವ

ಎತ್ತ ಕಣ್ಣು ಹೊರಳಿಸಿದರೂ ಗಿರಿ ಶೃಂಗಗಳ ಸಾಲು, ಆಕಾಶದೆತ್ತರಕ್ಕೆ ಚಾಚಿಕೊಂಡ ಬೃಹದಾಕಾರದ ವೃಕ್ಷ ಸಮೂಹ, ಮತ್ತೇರಿಸುವ ನೀಲಗಿರಿಯ ಘಮ ಘಮ ವಾಸನೆ. ಕಂಡಿತಾ ಇದನ್ನೆಲ್ಲಾ ಗಮನಿಸಿದಾಗ ನಿಮಗೆ ಮುಂದೆ ಪೂರ್ತಿ ಕಾಡಿನಲ್ಲಿಯೇ ಪ್ರಯಾಣ ಎಂಬ ಭಾವನೆ ಮನಸ್ಸಿನಲ್ಲಿ ಮನೆ ಮಾಡದೇ ಇರಲಾರದು. ಹೌದು ಮುಂದೆ ನೀವು ನೋಡುವುದೆಲ್ಲಾ ಕಾಡು..

ಬೆಟ್ಟ, ಬಯಲು, ಆಕಾಶ, ಹಸಿರ ದೃಶ್ಯ ವೈಭವ. ಇವೆಲ್ಲವನ್ನ ಅಪ್ಪಿದ ಹಿಮದ ಸೆರಗು ನೋಡಲು ಬಲು ಸೊಬಗು. ಕಡು ಹಸಿರಂತೆ ತೋರುವ ಚಹಾ ತೋಟ, ಬೈಗು-ಬೆಳಗಿನ ವ್ಯತ್ಯಸವಿಲ್ಲದೆ ಬೀಸುವ ಚಳಿಗಾಳಿ ಅಬ್ಬ… ಊಟಿಯ ಎಂತಹ ಸೊಗಸು ಇಲ್ಲಿನ ಸೌಂದರ್ಯ ರಾಶಿ..

ಊಟಿಯ ಐತಿಹಾಸಿಕ ಹಿನ್ನಲೆ..

ಊಟಿಯನ್ನ ಉದಕ ಮಂಡಲ ಎಂಬ ಮತ್ತೊಂದು ಹೆಸರಿನಿಂದಲೂ ಕರೆಯುತ್ತಾರೆ. ಈ ಹೆಸರಿನಲ್ಲೇ ಅದೆಷ್ಟೋ ಹೃದಯಗಳನ್ನ ಸಂಚಲನ ಗೈಯುವ ಶಕ್ತಿ ಇದೆ. ಹಾಗೆಯೇ ಅದೆಷ್ಟೋ ಹೃದಯಗಳ ಮಧುವನಕ್ಕೆ ಇದೇ ಊಟಿ ರುಜು ಹಾಕಿದೆ. ಭಾರತದಲ್ಲಿನ ದಕ್ಷಿಣ ಭಾರತದ ಪ್ರಣಯ ಪಕ್ಷಿಗಳಿಗೆ ಇದು ಮಧುರ ಮಿಲನದ ಸವಿರಾಶಿಯೇ ಸರಿ..

ಮೂಲತಹ ಈ ಊಟಿ ಬುಡಕಟ್ಟು ಜನಾಂಗಗಳಿಂದ ಕೂಡಿರುವ ಪ್ರದೇಶ. ಟೋಡ ಎನ್ನುವ ಜನಾಂಗ ಇಲ್ಲಿ ವಾಸಿಸುತ್ತಾ ಇದ್ದಾರೆ. ಈ ಜನಾಂಗದವರು ಊಟಿಯನ್ನ ಕೊಯಮತ್ತೂರಿನ ಆಗಿನ ಗವರ್ನರ್ ಅಗಿದ್ದಂತ ಜಾನ್ ಸುವಲ್ಲಿವನ್ ಗೆ ಒಪ್ಪಿಸುತ್ತಾರೆ. ಜಾನ್ ಸುವಲ್ಲಿವನ್ ಇಷ್ಟೊಂದು ಪ್ರಸಿದ್ದ ಈ ಊಟಿಯನ್ನ ಅಭಿವೃದ್ದಿಪಡಿಸಿದನಂತೆ, ಹಾಗೆಯೇ ಇಲ್ಲಿ ಚಹಾ, ಚಿಂಕೋನ ಮತ್ತು ತೇಗದ ಮರಗಳನ್ನ ನೆಟ್ಟು ಬೆಳೆಸಿದ ಎಂದು ಇತಿಹಾಸದಿಂದ ತಿಳಿದು ಬರುತ್ತದೆ.

ನೀಲಗಿರಿ ಮೌಂಟ್ ರೈಲು

ಅಂದಹಾಗೇ ಮೆಟ್ಟುಪಾಲಯಂ ನಿಂದ ಊಟಿಯ ಈ ಬೆಟ್ಟಕ್ಕೆ ಕರೆದೊಯ್ಯಲು ನೀಲಗಿರಿ ಪ್ಯಾಸೆಂಜರ್ ರೈಲ್ವೆ ವ್ಯವಸ್ಥೆ ಮಾಡಲಾಗಿದೆ. ನೀಲಗಿರಿ ಬೆಟ್ಟಸಾಲುಗಳ ಸೌಂದರ್ಯವನ್ನ ಸವಿಯುತ್ತಾ ನೀವು ಸಾಗುವಾಗ ನೋಡಿದಷ್ಟು ಮತ್ತೆ ಮತ್ತೆ ನೋಡಬೇಕು ಎನಿಸುವಂತ ಪ್ರಕೃತಿಯ ರಮಣೀಯತೆ ಎತ್ತನೋಡಿದರತ್ತ ಕಂಡುಬರುತ್ತದೆ. ಈ ನೀಲಗಿರಿ ಮೌಂಟೆನ್ ರೈಲು ಭಾರತದಲ್ಲಿಯೇ ಅತಿ ಪುರಾತನ ಬೆಟ್ಟ ರೆಲು ವ್ಯವಸ್ಥೆ ಎಂದು ಕರೆಸಿಕೊಂಡಿದೆ. ಹಾಗೆಯೇ 2005ರಲ್ಲಿ ಇದನ್ನ ಯುನೆಸ್ಕೋ ಪ್ರಪಂಚದ ಪಿತ್ರಾರ್ಜಿತ ಆಸ್ತಿ ಎಂದು ಘೋಷಿಸಿದೆ.

ಎತ್ತ ನೋಡಿರೂ ಕಣ್ಣಾಯಿಸಿದಷ್ಟು ದೂರದ ಗಿರಿ ಶೃಂಗ. ಬೆಟ್ಟ, ಬಯಲು, ಆಕಾಶ, ಹಸಿರ ದೃಶ್ಯ ವೈಭವ. ಇಂತಹ ಸೊಬಗಿನ ಸಿರಿಯನ್ನ ಕಣ್ ತುಂಬಿಕೊಳ್ಳುವುದೇ ಒಂದು ಸೊಗಸು. ಹಸಿರ ಹಾದಿಯ ನಡುವೆ ಸಾಗುತ್ತಾ ಹೋದರೇ, ಬೇರೊಂದು ಲೋಕದಲ್ಲಿ ನಾವಿದ್ದೇವೆ ಎಂಬ ಅನುಭವ. ಯಾವುದಪ್ಪೋ ಇಂತಹ ತಿರುಗಾಟದ ಪ್ರವಾಸಿ ಸ್ಥಳ ಅಂತ ಯೋಚಿಸ್ಬೇಡಿ. ಆ ಪ್ರದೇಶ ಮತ್ತಾವುದೂ ಅಲ್ಲ. ಅದೇ ಹಿಮಾಲಯದ ಸೆರಗಿನಲ್ಲಿರುವ ನೀಲಗಿರಿ ತಪ್ಪಲು.

ನೀಲಗಿರಿ ಬೆಟ್ಟ ಸಾಲು

ಊಟಿಯಲ್ಲಿ ಅತ್ಯಂತ ಹೆಚ್ಚು ಎತ್ತರವಾದ ಶಿಖರ ನೀಲಗಿರಿ ಬೆಟ್ಟ. ಸಮುದ್ರ ಮಟ್ಟದಿಂದ ಸುಮಾರು 2 ಸಾವಿರದ 623 ಮೀಟರ್ ಎತ್ತರದಲ್ಲಿರುವ ಇದು, ಊಟಿಯಿಂದ 10 ಕಿ.ಮೀ. ದೂರದಲ್ಲಿದೆ. ಪಶ್ಚಿಮ ಹಾಗೂ ಪೂರ್ವ ಘಟ್ಟಗಳ ಸಾಲಿನ ಸಂದಿನಲ್ಲಿರುವ ಇದು, ಪ್ರವಾಸಿಗರನ್ನ ಆಕರ್ಷಿಸುವ ಸ್ವರ್ಗ ತಾಣ. ಈ ನೀಲಗಿರಿ ಬೆಟ್ಟ ಶ್ರೇಣಿಯ ದೃಶ್ಯಾವಳಿಗಳ ವಿಹಂಗಮ ನೋಟ ಸವಿಯಲು, ಪ್ರಕೃತಿಯೇ ಸೃಷ್ಟಿಸಿಕೊಟ್ಟಿರುವ ಜಾಗ.

ಇಲ್ಲಿನ ದೃಶ್ಯ ವೈಭವವನ್ನ ಸವಿದ ನೀವು ಇಲ್ಲಿನ ಗುಲಾಬಿ ಹೂಗಳ ತೋಟ, ಸಸ್ಯೋಧ್ಯಾನ, ಸರೋವರ ಮತ್ತು ದೋಣಿ ಮನೆ, ಸ್ಟೋನ್ ಹೌಸ್, ಟ್ರೈಬಲ್ ಮ್ಯೂಸಿಯಂ, ಚಹಾ ತೋಟಗಳು ನೀವು ನೋಡಲೇ ಬೇಕು. ಜೊತೆಗೆ ಮನೆಯಲ್ಲಿಯೇ ತಯಾರಿಸುವ ಚಾಕೋಲೇಟ್ ಗಳ ಸವಿಯನ್ನ ಸವಿದು ಹಿಂದಿರುಗುವಾಗ ಮನದಲ್ಲಿ ಏನೋ ಬಾರ ಅಡಗಿರುತ್ತೆ.

ಹೋಗೋದು ಹೇಗೆ..?

ಊಟಿ ಬೆಂಗಳೂರಿನಿಂದ 290 ಕಿ.ಮೀ ದೂರದಲ್ಲಿದೆ. ಮೈಸೂರು, ನಂಜನಗೂಡು, ಗುಂಡ್ಲು ಪೇಟೆ ಮಾರ್ಗವಾಗಿ ಬಂಡೀಪುರದ ಮೂಲಕ ಊಟಿಗೆ ಪ್ರವಾಸ ಕೈಗೊಳ್ಳಬಹುದು. ಇಂತಹ ಮನಧಣಿಯುವ ಪ್ರಕೃತಿ ರಮಣೀಯ ತಾಣವನ್ನ ನೀವೊಮ್ಮೆ ನೋಡಿಕೊಂಡು ಬನ್ನಿ.. ಬಟ್ ಟೇಕ್ ಕೇರ್, ಹ್ಯಾಪಿ ಜರ್ನಿ..

ವಸಂತ ಬಿ ಈಶ್ವರಗೆರೆ, ನ್ಯೂಸ್‌ ಡೆಸ್ಕ್‌, ಟಿವಿ5