Top

ಮೈತ್ರಿ ಪಕ್ಷದ ವಿರುದ್ದವೇ ಟೀಕೆ ಮಾಡಿದ ಜೆಡಿಎಸ್ ಸಚಿವ

ಮೈತ್ರಿ ಪಕ್ಷದ ವಿರುದ್ದವೇ ಟೀಕೆ ಮಾಡಿದ ಜೆಡಿಎಸ್ ಸಚಿವ
X

ಕಲಬುರಗಿ: ಮೈತ್ರಿ ಪಕ್ಷ ಕಾಂಗ್ರೆಸ್ ವಿರುದ್ಧವೇ ಜೆಡಿಎಸ್ ಸಚಿವ ಬಂಡೆಪ್ಪ ಕಾಶಂಪುರ್ ಟೀಕೆ ಮಾಡಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.

ಹಿಂದಿನ ಸರ್ಕಾರ 5 ವರ್ಷಗಳಲ್ಲಿ ಹೈದರಾಬಾದ್-ಕರ್ನಾಟಕ ಭಾಗಕ್ಕೆ ಏನೂ ಮಾಡಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ನಾನಂತೂ ಒಂದು ಹಳ್ಳಿಯಲ್ಲಿ ಒಂದು ಶಾಲೆ ನೋಡಿಲ್ಲ. ಒಂದು ಕಡೆ ಒಂದೊಳ್ಳೆ ಆರೋಗ್ಯ ಕೇಂದ್ರ ನೋಡಿಲ್ಲ. ಇದೀಗ ಹೆಚ್ಚಿನ ಒತ್ತು ಕೊಟ್ಟು ನಾವು ಅಭಿವೃದ್ಧಿ ಮಾಡ್ತೀವಿ ಎಂದರು.

ಅಲ್ಲದೇ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ ಐದು ವರ್ಷ ಪೂರೈಸಲಿದ್ದು, ಕುಮಾರಸ್ವಾಮಿಯವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ಬಂಡೆಪ್ಪ ಕಾಶಂಪುರ್, ಕಲಬುರಗಿಯಲ್ಲಿ ತಿಳಿಸಿದರು.

Next Story

RELATED STORIES