Top

ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಮಂಜಿನ ಗಿರಿ ಶಿವಗಂಗೆ

ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಮಂಜಿನ ಗಿರಿ ಶಿವಗಂಗೆ
X

ನೆಲಮಂಗಲ: ಬೆಂಗಳೂರಿನ ಸುತ್ತಮುತ್ತಲಿರುವ ಪ್ರವಾಸಿ ತಾಣಗಳಲ್ಲಿ ಒಂದು ಶಿವಗಂಗೆ ಬೆಟ್ಟ. ದಕ್ಷಿಣ ಕಾಶಿ ಎಂದೇ ಕರೆಯಲ್ಪಡುವ ಶಿವಗಂಗೆ ಗಿರಿ ಇದೀಗ ಮಂಜಿನ ಗಿರಿಯಾಗಿ, ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ.

ಕೆಲದಿನಗಳ ಹಿಂದೆ ತನ್ನ ರೌದ್ರನರ್ತನ ತೋರಿದ್ದ ವರುಣ, ಸದ್ಯ ಕೊಂಚ ಸಮಾಧಾನವಾಗಿದ್ದಾನೆ. ವೀಕೆಂಡ್ ಬಂದರೆ ಸಾಕು, ಪ್ರವಾಸಕ್ಕೋ, ಸುತ್ತಾಡಕ್ಕೋ ಹೋಗೋಣ ಎನ್ನುತ್ತಿದ್ದ ಜನ ಮಳೆಕಾಟಕ್ಕೆ ಮನೆ ಸೇರಿದ್ದರು.

ಆದ್ರೆ ಇದೀಗ ವಾತಾವರಣದಲ್ಲಿ ಕೊಂಚ ಬದಲಾವಣೆ ಕಂಡಿದ್ದು, ಮಳೆ ಕಡಿಮೆಯಾಗಿದೆ. ಪ್ರವಾಸಕ್ಕೆ ಹೋಗಲು ಅನುಕೂಲಕರವಾದ ವಾತವರಣ ಸಿಕ್ಕಿದೆ.

ಚಾರಣಕ್ಕೋ, ಪ್ರವಾಸಕ್ಕೋ ಹೋಗಲು ನೀವು ರೆಡಿಯಾಗಿದ್ರೆ, ಒಮ್ಮೆ ಶಿವಗಂಗೆ ಬೆಟ್ಟಕ್ಕೆ ಬನ್ನಿ. ಹಲವು ಬಾರಿ ಅಲ್ಲಿ ಪ್ರವಾಸ, ಚಾರಣಕ್ಕೆ ಹೋಗಿದ್ದರೂ, ಈ ಬಾರಿಯ ಪ್ರವಾಸ ನಿಮಗೆ ವಿಶೇಷವಾಗಲಿದೆ.

ದಕ್ಷಿಣ ಕಾಶಿ ಎಂದೆ ಪ್ರಸಿದ್ದವಾಗಿರುವ, ಗಿರಿ ಕ್ಷೇತ್ರ ಶಿವಗಂಗೆ ಸಂಪೂರ್ಣ ಚುಮುಚುಮು ಚಳಿಯ, ಮಂಜಿನಿಂದ ಆವೃತ್ತವಾಗಿದ್ದು ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ.

ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಇತಿಹಾಸ ಪ್ರಸಿದ್ದ, ದಕ್ಷಿಣ ಕಾಶಿ ಶಿವಗಂಗೆ ಬೆಟ್ಟದಲ್ಲಿ ಮಂಜಿನ ಮಳೆಯಂತೆ ಆವೃತ್ತವಾಗಿರುವ ದೃಶ್ಯ ಸೆರೆಯಾಗಿದೆ.

ಗಿರಿಯ ತುತ್ತತುದಿ ಮಂಜಿನಿಂದ ಸ್ನಾನ ಮಾಡಿಸಿದ ರೀತಿ, ಗಿರಿಯ ವಿಹಂಗಮ ನೋಟ ಕಂಡುಬಂದಿದೆ. ಇನ್ನೂ ಆಕರ್ಷಕವಾದ ಗಿರಿಯ ಮೇಲ್ಭಾಗದಲ್ಲಿ ಮಲೆನಾಡಿನ ವಾತಾವರಣ ಸೃಷ್ಟಿಯಾಗಿದ್ದು, ಚಾರಣಿಗರಿಗೆ ಮಲೆನಾಡಿನ ಅನುಭವ ಶಿವಗಂಗೆ ಬೆಟ್ಟದಲ್ಲಿ ಸಿಗುವುದರಿಂದ ಪ್ರವಾಸಿಗರನ್ನ ತನ್ನತ್ತ ಸೆಳೆಯುತ್ತಿದೆ.

Next Story

RELATED STORIES