Top

ಸ್ಥಳೀಯ ಸಂಸ್ಥಗಳ ಮಿಸಲಾತಿ ಪಟ್ಟಿ ಬದಲು.?

ಸ್ಥಳೀಯ ಸಂಸ್ಥಗಳ ಮಿಸಲಾತಿ ಪಟ್ಟಿ ಬದಲು.?
X

ಬೆಂಗಳೂರು : ರಾಜಕಾರಣ ಅಂದರೆನೇ ಹಾಗೆ. ಅಧಿಕಾರಕ್ಕಾಗಿ ರಾಜಕಾರಣಿಗಳು ಉರುಳಿಸೋ ದಾಳಗಳೇ ಡಿಫ್ರೆಂಟ್ ಆಗಿರುತ್ತೆ. ಈಗ ಮೈತ್ರಿ ಸರ್ಕಾರವೂ ಬಿಜೆಪಿಯನ್ನು ಹತ್ತಿಕ್ಕಲು ಹೊಸದೊಂದು ಉಪಾಯ ಮಾಡಿದೆ. ಬಿಜೆಪಿಗೆ ಅಧಿಕಾರ ಸಿಗಬಾರದು ಅಂತ ದೋಸ್ತಿ ಸರ್ಕಾರ ಹುನ್ನಾರ ನಡೆಸಿದೆಯಾ? ಇಂಥದ್ದೊಂದು ಚರ್ಚೆ ಈಗ ರಾಜ್ಯ ರಾಜಕೀಯದಲ್ಲಿ ಆರಂಭವಾಗಿದೆ.

ಅಧಿಕಾರ ಬಿಜೆಪಿ ಪಾಲಾಗಬಾರದು ಎಂದು ದೋಸ್ತಿ ಮಾಡಿಕೊಂಡು ಸರ್ಕಾರ ರಚಿಸಿದ್ದಾಯ್ತು. ಆದರೆ ಈಗ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ದೋಸ್ತಿಗಳು ಭರ್ಜರಿ ದಾಳ ಉರುಳಿಸಿದ್ದಾರೆ. ಸೆಪ್ಟಂಬರ್ 3 ರಂದು ಮೈತ್ರಿಸರ್ಕಾರ ನಗರ ಸ್ಳಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಿತ್ತು.

ಆದರೆ ಏಕಾಏಕಿ ಸೆಪ್ಟಂಬರ್ 6 ರಂದು ಮೀಸಲಾತಿ ಪಟ್ಟಿ ಬದಲಾವಣೆ ಮಾಡಲಾಗಿದೆ. ಇದರ ಹಿಂದೆ ಬಿಜೆಪಿಯನ್ನು ಹಣಿಯುವ ಯತ್ನ ನಡೆದಿದೆಯಾ ಎಂಬ ಅನುಮಾನ ಮೂಡಿದೆ. ತಮಗೆ ಬೇಕಾದಂತೆ ಮೀಸಲಾತಿ ಪಟ್ಟಿ ಬದಲಿಸಿ ಬಿಜೆಪಿ ಕೈಗೆ ಅಧಿಕಾರ ಸಿಗದಂತೆ ಮಾಡುವ ಹುನ್ನಾರ ನಡೆದಿದೆ ಎಂಬ ಚರ್ಚೆಗೆ ಕಾರಣವಾಗಿದೆ.

ಕಾಂಗ್ರೆಸ್‌ಗೆ ಬಹುಮತ ಇರದ 15 ಪುರಸಭೆಗಳಲ್ಲಿ ಮೀಸಲಾತಿ ಪಟ್ಟಿಯಲ್ಲಿ ಬದಲು ಮಾಡಲಾಗಿದೆ. ಒಟ್ಟು 15 ಅಧ್ಯಕ್ಷ 4 ಉಪಾಧ್ಯಕ್ಷ ಮೀಸಲಾತಿಯಲ್ಲಿ ಬದಲಾವಣೆ ಮಾಡಲಾಗಿದೆ.

ಗುರುಮಿಠಕಲ್‌, ಕಾರ್ಕಳ, ಬಂಟ್ವಾಳ, ಕುರುಗೋಡು, ಚನ್ನಗಿರಿ, ಕುಂದಾಪುರ, ರೋಣ, ಮಧುಗಿರಿ, ರಾಮದುರ್ಗ, ಕೋನಪ್ಪನ ಅಗ್ರಹಾರ, ಗಜೇಂದ್ರಗಡ, ನಾಗಮಂಗಲ, ವಿಜಯಪುರ, ಸಕಲೇಶಪುರ, ಮೂಡಬಿದ್ರಿ ಪುರಸಭೆ ಅಧ್ಯಕ್ಷ ಮೀಸಲಾತಿ ಚೇಂಜ್‌ ಮಾಡಲಾಗಿದೆ.

ರಾಮದುರ್ಗ, ಕೋನಪ್ಪನ ಅಗ್ರಹಾರ, ಸಕಲೇಶಪುರ, ಕುರುಗೋಡು ಪುರಸಭೆ ಉಪಾಧ್ಯಕ್ಷ ಮೀಸಲಾತಿ ಬದಲಾವಣೆ ಮಾಡಿ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಅಗತ್ಯ ಇರುವ ಕಡೆ ದೋಸ್ತಿ ಮಾಡಿಕೊಂಡು ಅಧಿಕಾರ ಹಿಡಿದರೆ, ಇನ್ನು ಹಲವು ಕಡೆ ಬಿಜೆಪಿ ಚಳ್ಳೆ ಹಣ್ಣು ತಿನ್ನಿಸಿ ಅಧಿಕಾರದಿಂದ ದೂರ ಇಡುವ ಉದ್ದೇಶದಿಂದ ಮೀಸಲಾತಿ ಬದಲಾವಣೆ ಮಾಡಲಾಗಿದೆ ಎಂದೇ ಹೇಳಲಾಗ್ತಿದೆ.

ಈ ಕುರಿತು ಬಿಜೆಪಿಯ ಕಾರ್ಯಾಲಯದಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್, ದೋಸ್ತಿ ಸರ್ಕಾರದ ಇಂತಹ ಪಟ್ಟಿ ಬದಲಾವಣೆ ಮಾಡಿದ್ದಕ್ಕೆ ಕಾನೂನು ಹೋರಾಟ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

ಪೊಲಿಟಿಕಲ್ ಬ್ಯುರೋ, ಟಿವಿ5 ಕನ್ನಡ

Next Story

RELATED STORIES