Top

ಸೆ.10ಕ್ಕೆ ಶಾಂತಿಯುತ ಬಂದ್‌ಗೆ ಕರೆ : ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

ಸೆ.10ಕ್ಕೆ ಶಾಂತಿಯುತ ಬಂದ್‌ಗೆ ಕರೆ : ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್
X

ಬೆಂಗಳೂರು : ಕೇಂದ್ರ ಸರ್ಕಾರದ ಜನವಿರೋಧಿ ನೀತಿ, ಬಡವರ ಮೇಲಾಗಿರುವ ಆರ್ಥಿಕ ಹೊರೆ ಆಗುತ್ತಿರುವುದನ್ನು ಖಂಡಿಸಿ ಅನಿವಾರ್ಯವಾಗಿ ಸೆ.10 ರಂದು ಭಾರತ್ ಬಂದ್ ನಡೆಸಲು ಮುಂದಾಗಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಿದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಕೇಂದ್ರದ ಬಿಜೆಪಿ ಸರ್ಕಾರ ಅತ್ಯಂತ ಭ್ರಷ್ಠ, ನೀತಿಗೆಟ್ಟ ಸರ್ಕಾರ. ಇದನ್ನು ಬಿಟ್ಟು ಇನ್ನೊಂದಿಲ್ಲ. ತಮ್ಮ ತತ್ವ ಸಿದ್ಧಾಂತಕ್ಕೆ ಬದ್ಧವಲ್ಲದ ಎಲ್ಲಾ ವರ್ಗದ ಜನರಿಗೂ ಕಿರುಕುಳ ನೀಡುವ, ದಬ್ಬಾಳಿಕೆ ಮಾಡುವ ಕಾರ್ಯ ಮಾಡುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಯಾವ ಭರವಸೆಯನ್ನೂ ಈಡೇರಿಸದೇ ರಾಜಕೀಯ ಹುನ್ನಾರ, ಷಡ್ಯಂತ್ರ ನಡೆದಿ ಹತ್ತಿಕ್ಕುವ ಕಾರ್ಯ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಸೋಮವಾರ ರಾಜ್ಯಾದ್ಯಂತ ಬಂದ್‌ಗೆ ಬೆಳಗ್ಗೆ 6 ರಿಂದ ಸಂಜೆ 3 ಗಂಟೆಯವರೆಗೆ ನಡೆಸಲು ಕರೆ ಕೊಟ್ಟಿದ್ದೇವೆ. ಈ ಬಂದ್‌ಗೆ ಅನೇಕ ಸಂಘಟನೆಗಳು, ಎಡಪಕ್ಷ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಬೆಂಬಲ ನೀಡಿವೆ ಎಂದರು.

ಮೋದಿ ಸರ್ಕಾರದ ವಿರುದ್ಧ ಆಕ್ರೋಶ

ಮೋದಿ ಸರ್ಕಾರ 11 ಲಕ್ಷ ಕೋಟಿ ರೂಪಾಯಿಗಳನ್ನು ಲೂಟಿ ಮಾಡಿರುವುದಲ್ಲದೆ ಪೆಟ್ರೋಲ್ ಮತ್ತು ಡೀಸೆಲ್‌ಗಳಿಗೆ ತೆರಿಗೆ ಏನು ವಿಧಿಸುತ್ತಿದೆ. ಕಳೆದ 52 ತಿಂಗಳಲ್ಲಿ ಈ ಮೊತ್ತದ ತೆರಿಗೆಯನ್ನು ಸಂಗ್ರಹಿಸಿ ಜನರ ಜನಸಾಮಾನ್ಯರನ್ನು ಘಾಸಿಗೊಳಿಸಲಾಗಿದೆ.

2014 ರ ಮೇ 16 ರಂದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಒಂದು ಬ್ಯಾರೆಲ್ ಗೆ 107.09 ಡಾಲರ್ ಇತ್ತು. ಈಗ 73 ಡಾಲರ್ ಗೆ ಇಳಿದಿದೆ. ಅಂದರೆ ಶೇ.40ರಷ್ಟು ಕಡಿಮೆಯಾದರೂ ಕೂಡ ಮೋದಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಸುತ್ತಲೇ ಬಂದಿದೆ.

ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಅಂದರೆ 2014 ಮೇ 16 ರಂದು ಪೆಟ್ರೋಲ್ ಬೆಲೆ 71.41 ಡಾಲರ್ ಇತ್ತು. 2018 ರ ಸೆಪ್ಟೆಂಬರ್ 6 ಕ್ಕೆ ಇದು 79.51 ಡಾಲರ್ ಆಗಿದೆ. ಅಲ್ಲಿಗೆ ಕೇವಲ 8.1 ಡಾಲರ್ ನಷ್ಟು ಮಾತ್ರ ಏರಿಕೆ ಆಗಿದೆ. ಆದರೆ ಇಂದು ಪೆಟ್ರೋಲ್ ಬೆಲೆ 82 ರುಪಾಯಿ ಮೀರಿದೆ. ಇದು ಕೇವಲ 52 ತಿಂಗಳಲ್ಲಿನ ಬೆಲೆ ವ್ಯತ್ಯಾಸ.

ಕೇಂದ್ರದ ಬಿಜೆಪಿ ಸರ್ಕಾರ 12 ಬಾರಿ ಅಬಕಾರಿ ಸುಂಕ ಏರಿಕೆ

ಡೀಸೆಲ್ ವಿಚಾರಕ್ಕೆ ಬಂದರೆ 2014 ಮೇ 16 ರಂದು ಡೀಸೆಲ್ ಬೆಲೆ 55.49 ಡಾಲರ್ ಇತ್ತು 2018 ರ ಸೆಪ್ಟೆಂಬರ್ 6 ಕ್ಕೆ ಇದು 71.55 ಡಾಲರ್ ಆಗಿದೆ. ಅಲ್ಲಿಗೆ ಕೇವಲ 16.06 ಡಾಲರ್ ನಷ್ಟು ಮಾತ್ರ ಏರಿಕೆ ಆಗಿದೆ. ಪೆಟ್ರೋಲ್ ಮೇಲಿನ ಅಬಕಾರಿ ತೆರಿಗೆ 2014 ಮೇ ತಿಂಗಳಿಂದ ಶೇಕಡಾ 211.7 ರೂ ಗೆ ಏರಿಕೆಯಾಗಿದೆ. 2014 ಮೇ 14 ರಲ್ಲಿ9.2 ರೂಪಾಯಿ ಪ್ರತಿ ಲೀಟರ್ ಗೆ ಇದ್ದ ತೆರಿಗೆ ಇದೀಗ 19.48 ರೂಪಾಯಿ ಆಗಿದೆ.

ಡೀಸೆಲ್ ಮೇಲಿನ ಅಬಕಾರಿ ತೆರಿಗೆ ಶೇಕಡಾ 443.6 ಆಗಿದೆ. ಡೀಸೆಲ್ ಮೇಲಿನ ಅಬಕಾರಿ ತೆರಿಗೆ ಪ್ರತಿ ಲೀಟರಿಗೆ 3.46ರೂ ಇದ್ದದ್ದು 15.33 ರೂ ಆಗಿದೆ. ಕೇಂದ್ರದ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ 12 ಬಾರಿ ಕೇಂದ್ರ ಅಬಕಾರಿ ತೆರಿಗೆ ಏರಿಸಲಾಗಿದೆ. 2014 ನಲ್ಲಿ ಅಡುಗೆ ಅನಿಲ ಸಿಲಿಂಡರ್ ಬೆಲೆ 414 ಗುರು ಇದ್ದದ್ದು, ಇಂದು 754 ಕ್ಕೆ ಏರಿದೆ. ಪ್ರತಿ ಸಿಲಿಂಡರ್ ಬೆಲೆ 340 ರೂಪಾಯಿ ಹೆಚ್ಚಾಗಿದೆ ಎಂದು ಕಿಡಿಕಾರಿದರು.

ಪೆಟ್ರೋಲ್‌, ಡಿಸೇಲ್‌ ವಿದೇಶಕ್ಕೆ ರಫ್ತು ಬೆಲೆ ಎಷ್ಟು ಗೊತ್ತಾ.?

ಭಾರತೀಯರು ಇಷ್ಟು ದುಬಾರಿ ಬೆಲೆ ಕೊಟ್ಟು ಪೆಟ್ರೋಲ್ ಮತ್ತು ಡೀಸೆಲ್ ಖರೀದಿಸುತ್ತಿದ್ದರೆ, ಮೋದಿ ಸರ್ಕಾರ ಪ್ರತಿ ಲೀಟರಿಗೆ 34 ರೂಪಾಯಿ ನಂತೆ 15 ದೇಶಗಳಿಗೆ ಡೀಸೆಲ್ ಹಾಗೂ 37 ರೂನಂತೆ 29 ರಾಷ್ಟ್ರಗಳಿಗೆ ಪೆಟ್ರೋಲ್ ರಫ್ತು ಮಾಡುತ್ತಿದೆ.

ಯುಪಿಎ ಸರ್ಕಾರ ಹಾಗೂ ಎನ್ಡಿಎ ಸರ್ಕಾರ ನಡುವಿನ ವ್ಯತ್ಯಾಸವನ್ನು ಗಮನಿಸಿದರೆ ಪೆಟ್ರೋಲ್ 70 ರೂ ಇದ್ದು 80 ರೂ ಆಗಿದೆ, ಡೀಸೆಲ್ 55 ರೂ ಇದ್ದದ್ದು 70 ರೂ ಆಗಿದೆ. ಅಡಿಗೆ ಅನಿಲ 400 ರೂ. ಇದ್ದದ್ದು 754 ರೂ ಆಗಿದೆ.

ಅದೇ ರೀತಿ ಹಾಲು ಪ್ರತಿ ಲೀಟರ್ ಗೆ 40 ರೂ ಇದ್ದದ್ದು 52 ರೂ, ಬೇಳೆ 70 ರೂ ಇದ್ದದ್ದು 170 ರೂ, ರೈಲು ದರ 6 ರೂಪಾಯಿ ಪ್ರತಿ ಕಿಮಿಗೆ ಇದ್ದದ್ದು 9 ರೂ. ಹಾಗೂ ಪ್ಲಾಟ್ ಫಾರಂ ಟಿಕೆಟ್ ಮೂರು ರೂಪಾಯಿ ಇದ್ದದ್ದು 20 ರೂ ಮಾಡಲಾಗಿದೆ ಎಂದು ವಿವರಿಸಿದರು.

Next Story

RELATED STORIES