335ಕ್ಕೆ ಇಂಗ್ಲೆಂಡ್ ಮೊತ್ತ ವಿಸ್ತರಿಸಿದ ಬಟ್ಲರ್

X
TV5 Kannada8 Sep 2018 1:47 PM GMT
ಕೆಳ ಕ್ರಮಾಂಕದಲ್ಲಿ ಅರ್ಧಶತಕ ಬಾರಿಸಿದ ಜೋಸ್ ಬಟ್ಲರ್ ಬಾಲಂಗೋಚಿಗಳ ನೆರವಿನಿಂದ ಮೊದಲ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ ತಂಡದ ಮೊತ್ತವನ್ನು 332ಕ್ಕೆ ವಿಸ್ತರಿಸಿದರು.
ಓವಲ್ನಲ್ಲಿ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದ ಎರಡನೇ ದಿನವಾದ ಶನಿವಾರ 7 ವಿಕೆಟ್ಗೆ 198 ರನ್ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್ 332 ರನ್ಗಳಿಗೆ ಆಲೌಟಾಯಿತು.
ಜೋಸ್ ಬಟ್ಲರ್ 133 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 89 ರನ್ ಬಾರಿಸಿ ಔಟಾಗುತ್ತಿದ್ಧಂತೆ ಇಂಗ್ಲೆಂಡ್ ಹೋರಾಟಕ್ಕೆ ತೆರೆಬಿದ್ದಿತು. ಬಟ್ಲರ್ಗೆ ಉತ್ತಮ ಬೆಂಬಲ ನೀಡಿದ ರಶೀದ್ (15) ಮತ್ತು ಸ್ಟುವರ್ಟ್ ಬ್ರಾಡ್ (38 ರನ್, 59 ಎಸೆತ, ಬೌಂಡರಿ) ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು.
ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್ ಮೊದಲ ಇನಿಂಗ್ಸ್ 332 (ಜೋಸ್ ಬಟ್ಲರ್ 89, ಕುಕ್ 71, ಮೊಯಿನ್ 50, ಬ್ರಾಡ್ 38, ಜಡೇಜಾ 79/4, ಇಶಾಂತ್ 62/2, ಬುಮ್ರಾ 83/2).
Next Story