ರಸ್ತೆ ಬದಿಯಲ್ಲಿ ಚಹಾ ಮಾರುತ್ತಿರುವ ಏಷ್ಯನ್ ಗೇಮ್ಸ್ ಪದಕ ವಿಜೇತ!

ಏಷ್ಯನ್ ಗೇಮ್ಸ್ ನಲ್ಲಿ ಕಂಚಿನ ಪದಕ ಗೆದ್ದ ಸಾಧಕ ಈಗ ಜೀವನ ನಡೆಸಲು ತಂದೆಯ ಜೊತೆ ಟೀ ಮಾರಿ ಮಾರುತ್ತಿದ್ದಾರೆ..! ಇಂತಹ ವಿಪರ್ಯಾಸ ಬಹುಶಃ ಭಾರತದಲ್ಲಿ ಬಿಟ್ಟು ಬೇರಾವ ದೇಶದಲ್ಲೂ ನಡೆಯುವ ಸಾಧ್ಯತೆ ಇಲ್ಲವೇನೋ!!

ದೆಹಲಿಯಲ್ಲಿ ಆಟೋರಿಕ್ಷಾ ಚಾಲಕನ ಮಗನಾದ ಹರೀಶ್ ಕುಮಾರ್ ಇತ್ತೀಚೆಗಷ್ಟೇ ಇಂಡೋನೇಷ್ಯಾದ ಜಕಾರ್ತದಲ್ಲಿ ಮುಕ್ತಾಯಗೊಂಡ ಏಷ್ಯನ್ ಗೇಮ್ಸ್-2018ರಲ್ಲಿ ಕಂಚಿನ ಪದಕ ಗೆದ್ದ ಭಾರತದ ಸೆಪೆಕ್ ಟ್ಯಾಕ್ರಾ (ಕಾಲಿನಲ್ಲಿ ಚೆಂಡನ್ನು ಹೊಡೆಯುವ ನೆಟ್ ಬಾಲ್ ಮಾದರಿ ಆಟ) ತಂಡವನ್ನು ಪ್ರತಿನಿಧಿಸಿದ್ದರು.

ಭಾರತ ತಂಡದಲ್ಲಿನ ಅತ್ಯಂತ ಕಿರಿಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಹರೀಶ್ ಕುಮಾರ್ ಪದಕ ಗೆದ್ದು ಸಾಧನೆ ಮಾಡಿದರೂ ಬದುಕು ಮಾತ್ರ ಬದಲಾಗಿಲ್ಲ. ಇದೀಗ ತಂದೆಯ ಜೊತೆ ಅಂಗಡಿಯಲ್ಲಿ ಟೀ ಮಾಡಿ ಮಾರುತ್ತಾ ಜೀವನ ಸಾಗಿಸುತ್ತಿದ್ದಾರೆ.

ಏಷ್ಯನ್ ಗೇಮ್ಸ್ ನ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಉದ್ದೇಶದಿಂದ ಪ್ರತಿದಿನ ಅಂಗಡಿಯಲ್ಲಿ ಕೆಲಸ ಮಾಡಿದ ನಂತರ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದ ಹರೀಶ್ ಕುಮಾರ್, ತಂಡದಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿದ್ದು ಮಾತ್ರವಲ್ಲ, ಪದಕ ಗೆದ್ದು ದೇಶದ ಗೌರವ ಹೆಚ್ಚಿಸಿದ್ದಾರೆ.

ನಮ್ಮದು ದೊಡ್ಡ ಕುಟುಂಬ. ಕುಟುಂಬ ಸಾಕಲು ನಾನು ಕೆಲಸ ಮಾಡುತ್ತಿದ್ದೇನೆ. ಆದರೆ ಭವಿಷ್ಯದ ದೃಷ್ಟಿಯಿಂದ ಪ್ರತಿದಿನ ಮಧ್ಯಾಹ್ನ 2ರಿಂದ 6 ಗಂಟೆ ಅಭ್ಯಾಸಕ್ಕಾಗಿ ಮೀಸಲಿಡುತ್ತಿದ್ದೇನೆ. ಒಂದು ಒಳ್ಳೆಯ ಕೆಲಸ ಸಿಕ್ಕರೆ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬಹುದು ಎಂದು ಹರೀಶ್ ಕುಮಾರ್ ಹೇಳುತ್ತಾರೆ.