Top

13 ವರ್ಷ ಹಿಂದಿನ ರಾಹುಲ್ ದ್ರಾವಿಡ್ ದಾಖಲೆ ಸರಿಗಟ್ಟಿದ ರಾಹುಲ್​

13 ವರ್ಷ ಹಿಂದಿನ ರಾಹುಲ್ ದ್ರಾವಿಡ್ ದಾಖಲೆ ಸರಿಗಟ್ಟಿದ ರಾಹುಲ್​
X

ಕರ್ನಾಟಕದ ಕೆ.ಎಲ್​. ರಾಹುಲ್ ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ 13 ವರ್ಷ ಹಿಂದೆ ರಾಹುಲ್ ದ್ರಾವಿಡ್ ನಿರ್ಮಿಸಿದ್ದ ದಾಖಲೆಯನ್ನು ಸರಗಟ್ಟಿದ್ದಾರೆ.

ಇಂಗ್ಲೆಂಡ್ ವಿರುದ್ಧದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಎರಡನೇ ದಿನವಾದ ಶನಿವಾರ ಕೆ.ಎಲ್. ರಾಹುಲ್, ಸ್ಟುವರ್ಟ್ ಬ್ರಾಡ್ ಅವರ ಕ್ಯಾಚ್ ಪಡೆಯುವ ಮೂಲಕ ಟೆಸ್ಟ್ ಸರಣಿಯಲ್ಲಿ ಒಟ್ಟಾರೆ 13 ಕ್ಯಾಚ್ ಪಡೆದರು. ಈ ಮೂಲಕ ಟೆಸ್ಟ್ ಸರಣಿಯೊಂದರಲ್ಲಿ 13 ಕ್ಯಾಚ್ ಹಿಡಿದ ಭಾರತೀಯ ಆಟಗಾರ ರಾಹುಲ್ ದ್ರಾವಿಡ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಸರಗಟ್ಟಿದರು.

ಸ್ಲಿಪ್​ನಲ್ಲಿ ಜಗತ್ತಿನ ಶ್ರೇಷ್ಠ ಕ್ಯಾಚರ್ ಎಂದು ಹೆಸರು ಪಡೆದಿದ್ದ ರಾಹುಲ್ 2004-05ರಲ್ಲಿ ದ್ರಾವಿಡ್ ಗಾವಸ್ಕರ್- ಬಾರ್ಡರ್ ಸರಣಿಯಲ್ಲಿ 13 ಕ್ಯಾಚ್ ಪಡೆದು ಈ ಸಾಧನೆ ಮಾಡಿದ್ದರು.

ವೆಸ್ಟ್ ಇಂಡೀಸ್​ನ ಬ್ಯಾಟಿಂಗ್ ದೈತ್ಯ ಬ್ರಿಯಾನ್ ಲಾರಾ ಮತ್ತು ಬಾಬ್ ಸಿಮ್ಸನ್ 2 ಸರಣಿಗಳಲ್ಲಿ 13 ಕ್ಯಾಚ್ ಹಿಡಿದ ಸಾಧನೆ ಮಾಡಿದ್ದಾರೆ. ಲಾರಾ 2006ರಲ್ಲಿ ಭಾರತ ವಿರುದ್ಧ ಹಾಗೂ 1997-98ರಲ್ಲಿ ಇಂಗ್ಲೆಂಡ್ ವಿರುದ್ಧ ಎರಡು ಬಾರಿ ಈ ಸಾಧನೆ ಮಾಡಿದ್ದರೆ, ಸಿಮ್ಸನ್ 1957-58ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹಾಗೂ 1060-61ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಈ ಸಾಧನೆ ಮಾಡಿದ್ದಾರೆ.

ಆದರೆ ಟೆಸ್ಟ್ ಇತಿಹಾಸದಲ್ಲಿ 15 ಕ್ಯಾಚ್ ಹಿಡಿದು ವಿಶ್ವದಾಖಲೆಯನ್ನು ತಮ್ಮ ಹೆಸರಿನಲ್ಲಿ ಹೊಂದಿರುವುದು ಆಸ್ಟ್ರೇಲಿಯಾದ ಜ್ಯಾಕ್ ಜಾರ್ಜ್​. 1974-75ರಲ್ಲಿ ಆ್ಯಷಸ್ ಸರಣಿಯಲ್ಲಿ ಅವರು ಈ ಸಾಧನೆ ಮಾಡಿದ್ದು, ಇದನ್ನು ಕೂಡ ಮುರಿಯುವ ಅವಕಾಶವನ್ನು ಕೆ.ಎಲ್. ರಾಹುಲ್ ಹೊಂದಿದ್ದಾರೆ.

Next Story

RELATED STORIES