Top

ತಹಶೀಲ್ದಾರ್‌ಗೆ ಅವಾಜ್‌ ಹಾಕಿದ ಕಾರ್ಪೊರೇಟರ್‌ ಹಾಗೂ ಕರವೇ ಮುಖಂಡ.!

ತಹಶೀಲ್ದಾರ್‌ಗೆ ಅವಾಜ್‌ ಹಾಕಿದ ಕಾರ್ಪೊರೇಟರ್‌ ಹಾಗೂ ಕರವೇ ಮುಖಂಡ.!
X

ವಿಜಯಪುರ : ಇತ್ತೀಚಿಗೆ ಭೂ ಮಾಫಿಯದ ಬಲ ಪ್ರದರ್ಶನ ಹೆಚ್ಚಾಗುತ್ತಿದೆ. ಕೆ ಆರ್‌ ಪುರಂನಲ್ಲಿ ಬಿಬಿಎಂಪಿ ಕಚೇರಿಗೆ ತೆರಳಿದ್ದ ನಾರಾಯಣಸ್ವಾಮಿ ಎಂಬುವರು ಕಚೇರಿಗೆ ಪೆಟ್ರೋಲ್‌ ಸುರಿದು ಸುಡುವ ಬೆದರಿಕೆ ಹಾಕಿದ್ದರು. ಈ ಮೂಲಕ ಪೆಟ್ರೋಲ್‌ ನಾರಾಯಣಸ್ವಾಮಿ ಎಂದೇ ಬಿಂಬಿತರಾಗಿದ್ದರು.

ಈ ಘಟನೆ ಮಾಸುವ ಮುನ್ನವೇ, ಇದೀಗ ವಿಜಯಪುರದಲ್ಲಿ ಮತ್ತೊಂದು ಇದೇ ಮಾದರಿಯಲ್ಲಿ ಘಟನೆ ನಡೆದಿದೆ. ಆದರೇ ಸುಡುವ ಬದಲಾಗಿ ನಮ್ಮ ಕಡತ ಪರಿಶೀಲನೆ ಮಾಡದೇ ಸಹಿ ಹಾಕುವಂತೆ ವಿಜಯಪುರ ತಹಶೀಲ್ದಾರರಿಗೆ ಅವಾಜ್‌ ಹಾಕಿರುವ ಘಟನೆ ನಡೆದಿದೆ.

ಸೌರ‌ ವಿದ್ಯುತ್ ತಯಾರಿಕಾ ಘಟಕದ ಭೂ ಪರಿವರ್ತನೆ ಕಡತ ಹಾಗೂ ಸ್ಥಳ ಪರಿಶೀಲನೆಗೆ ಮುಂದಾಗದ ತಹಶೀಲ್ದಾರ್ ಮೇಲೆ ಮಹಾನಗರ ಪಾಲಿಕೆ ಸದಸ್ಯ ಗುಂಡಾ ವರ್ತನೆ ಪ್ರದರ್ಶಿಸಿದ ಘಟನೆ ವಿಜಯಪುರದಲ್ಲಿ‌ ನಡೆದಿದೆ.

ವಿಜಯಪುರ ನಗರದ ಜಿಲ್ಲಾ ಪಂಚಾಯತ್ ಕಚೇರಿ ಬಳಿ ಇರುವ ತಹಶಿಲ್ದಾರ ಕಚೇರಿಗೆ‌ ನುಗ್ಗಿದ ಸದಸ್ಯ ರವೀಂದ್ರ ಲೋಣಿ ಹಾಗೂ ಕರವೇ ಸಂಘಟನೆ ಮುಖಂಡ ಸೋಮಶೇಖರ್ ಗಣಾಚಾರಿ‌ ತಹಶೀಲ್ದಾರ ಅವ್ರ ಮೇಲೆ ಮುಗಿ ಬಿದ್ದು ಗಲಾಟೆ ಮಾಡಿದ್ದಾರೆ.

ವಿಜಯಪುರ ತಾಲೂಕಿನ‌ ತಹಶೀಲ್ದಾರ್ ರವಿಚಂದ್ರ ಮೇಲೆ ಗರಂ ಆಗಿ ಅನುಚಿತವಾಗಿ ವರ್ತಿಸಿದ್ದಾರೆ. ಪಾಲಿಕೆಯ ವಾರ್ಡ್ ನಂಬರ್ 14 ರ ಸದಸ್ಯ ರವೀಂದ್ರ‌ ಲೋಣಿ ಹಾಗೂ ಕರವೇ ಮುಖಂಡ ಸೋಮಶೇಖರ್ ಗಣಾಚಾರಿ, ತಹಶೀಲ್ದಾರ್‌ಗೆ ಅವಾಜ್ ಹಾಕಿದ್ದಾರೆ.

ಈ‌ ಹಿಂದಿನ ತಹಶೀಲ್ದಾರ್ ಕಡತ ಹಾಗೂ ಸ್ಥಳ ಪರಿಶೀಲನೆ ನಡೆಸಿದ್ದಾರೆ ನೀವ್ಯಾಕೆ ಪುನಃ ಪರಿಶೀಲಿಸುತ್ತೀರಿ ಎಂದು ಪ್ರಶ್ನೆ ಮಾಡಿದ ಲೋಣಿ ಹಾಗೂ ಕರವೇ ಮುಖಂಡ ಗಣಾಚಾರಿ, ಅಧಿಕಾರಿ ಮೇಲೆ ದರ್ಪ‌ತೊರಿದ್ದಾರೆ.

ನಾನು ಕರೆ ಮಾಡಿದಾಗ ಪೋನ್ ರಿಸಿವ್ ಮಾಡಿಲ್ಲವೆಂದು‌ ಗರಂ ಆದ ಕಾರ್ಪೊರೇಟರ್ ರವೀಂದ್ರ‌ ಲೋಣಿ, ಸೌರ ವಿದ್ಯುತ ಘಟಕ ಸ್ಥಾಪನೆಗೆ ಪರವಾನಿಗೆ ನೀಡಬೇಕು. ಕಡತ ತಪಾಸಣೆ ಹಾಗೂ ಸ್ಥಳ ಪರಿಶೀಲನೆ ಮಾಡಬಾರದೆಂದು ಒತ್ತಾಯವನ್ನು ಪಾಲಿಕೆ ಸದಸ್ಯ ರವೀಂದ್ರ ಲೋಣಿ ಹಾಗೂ ಕರವೇ ಮುಖಂಡ ಸೋಮಶೇಖರ್ ಗಣಾಚಾರಿ ಮಾಡಿದ್ದಾರೆ.

ಇವರಿಬ್ಬರು ತಹಶಿಲ್ದಾರ ಮೇಲೆ ಅವಾಜ್‌ ಹಾಕಿದ ವಿಡಿಯೋ ಇದೀಗ ವೈರಲ್‌ ಆಗಿದೆ.

ವರದಿ : ಶರಣು ಮಸಳಿ, ಟಿವಿ5 ವಿಜಯಪುರ

Next Story

RELATED STORIES