Top

ಸಚಿವ ಪುಟ್ಟರಾಜುಗೆ ಹೊಗಳಿದ ನಟ ಯಶ್

ಸಚಿವ ಪುಟ್ಟರಾಜುಗೆ ಹೊಗಳಿದ ನಟ ಯಶ್
X

ಮಂಡ್ಯ: ಸಣ್ಣ ನೀರಾವರಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರನ್ನು ಖ್ಯಾತ ಚಿತ್ರನಟ ಯಶ್ ಹಾಡಿ ಹೊಗಳಿದ್ದಾರೆ.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹುಲ್ಕೆರೆಕೊಪ್ಪಲು ಗ್ರಾಮದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ನಟ ಯಶ್ ಸಣ್ಣ ನೀರಾವರಿ ಸಚಿವರನ್ನು ಹಾಡಿ ಹೊಗಳಿದ್ರು.

ಪಾಂಡವಪುರ ತಾಲೂಕಿನ ಜನತೆ ಸಿ.ಎಸ್.ಪುಟ್ಟರಾಜು ಅವರನ್ನು ಸರಿಯಾದ ಸಮಯದಲ್ಲಿ ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸಿದ್ದೀರಾ. ನಿಮ್ಮೆಲ್ಲರ ಆಶೀರ್ವಾದದಿಂದ ಸಿ.ಎಸ್.ಪುಟ್ಟರಾಜು ರಾಜ್ಯದ ಸಣ್ಣ ನೀರಾವರಿ ಸಚಿವರಾಗಿದ್ದರೆ. ಅವರು ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲಿದ್ದಾರೆ ಎಂದು ಯಶ್ ಹೇಳಿದರು.

ನಾನು ಪಾಂಡವಪುರ ತಾಲೂಕಿಗೆ ಯಾವಾಗ ಬಂದರೂ ಪುಟ್ಟರಾಜು ಅವರು ನನ್ನನ್ನು ಮನೆಮಗನಂತೆ ನೋಡಿಕೊಳ್ಳುತ್ತಾರೆ ಇಲ್ಲಿನ ಜನತೆಯೂ ಕೂಡ ನನ್ನ ಮೇಲೆ ಅಪಾರವಾದ ಪ್ರೀತಿ ಇಟ್ಟುಕೊಂಡಿದ್ದಾರೆ. ನಿಮ್ಮೆಲ್ಲರ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ ಎಂದು ಯಶ್ ಧನ್ಯವಾದ ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವ ಪುಟ್ಟರಾಜು, ನಟ ಯಶ್ ಅವ್ರನ್ನು ಗುಣಗಾನ ಮಾಡಿದ್ರು. ಯಶ್ ಉತ್ತಮ ನಟ, ಅವ್ರಿಗೆ ಮಂಡ್ಯ ಶೈಲಿಯ ಕಿರಾತಕ ಸಿನಿಮಾ ಬ್ರೇಕ್ ಕೊಡ್ತು. ಇದೀಗ ಅವರ ಕಿರಾತಕ 2 ಸಹ ಮಂಡ್ಯದಲ್ಲಿ ಚಿತ್ರೀಕರಣ ನಡೀತಿದೆ. ಮಂಡ್ಯಗೂ ಯಶ್‌ಗೂ ಅವಿನಾಭಾವ ಸಂಬಂಧ ಎಂದ್ರು. ಇದೇ ವೇಳೆ ನಟ ಯಶ್ ಅವರನ್ನು ಸಚಿವ ಸಿ.ಎಸ್.ಪುಟ್ಟರಾಜು ಅಭಿನಂಧಿಸಿದರು.‌ ಬಳಿಕ ಗ್ರಾಮಸ್ಥರು ಸಚಿವರಿಗೆ ಬೆಳ್ಳಿ ಕಿರೀಟ ಧರಿಸಿ ಅಭಿನಂದಿಸಿದ್ರು.

Next Story

RELATED STORIES