Top

ಜೋರಾಗಿದೆ ಜಗ್ಗೇಶ್ 8MM ಬುಲೆಟ್ ಸೌಂಡ್

ಜೋರಾಗಿದೆ ಜಗ್ಗೇಶ್ 8MM ಬುಲೆಟ್ ಸೌಂಡ್
X

ಸ್ಯಾಂಡಲ್​ವುಡ್​ನ ನವರಸ ನಾಯಕ ಜಗ್ಗೇಶ್​ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ತಿರೋ ಸಿನಿಮಾ 8ಎಂಎಂ.. ಇಷ್ಟು ದಿನ ಟೀಸರ್​ ಮೂಲಕವೇ ಸೌಂಡ್​ ಮಾಡ್ತಿದ್ದ 8ಎಂಎಂ ಚಿತ್ರ, ಇದೀಗ ಆಡಿಯೋ ಬಿಡುಗಡೆ ಮಾಡಿದೆ.. ಅದ್ರಲ್ಲೂ ನವರಸ ನಾಯಕ ಜಗ್ಗೇಶ್ ಬರೆದಿರೋ ಹಾಡು ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಸೌಂಡ್​ ಮಾಡ್ತಿದೆ..

ನೀರ್​ದೋಸೆ ಸಿನಿಮಾ ನಂತ್ರ ನವರಸನಾಯಕ ಜಗ್ಗೇಶ್​ ಹೊಸ ಇನ್ನಿಂಗ್ಸ್​ ಆರಂಭಿಸಿದಂತೆ ಕಾಣ್ತಿದೆ.. ನಾರ್ಮಲ್​, ಕಮರ್ಷಿಯಲ್​ ಸಿನಿಮಾಗಳನ್ನ ಹೊರತು ಪಡಿಸಿ, ವಿಭೀನ್ನ ಸ್ಟೋರಿಲೈನ್​ ಮತ್ತು ವಿಭಿನ್ನ ಪಾತ್ರಗಳನ್ನ ಅರಸಿ ಹೊರ್ಟಿದ್ದಾರೆ.. ಅದೇ ಹಾದಿಯಲ್ಲಿ ರೆಡಿಯಾಗಿರೋ ಸಿನಿಮಾ 8ಎಂಎಂ.

ಈಗಾಗ್ಲೇ 8ಎಂಎಂ ಮೋಶನ್​ ಪೋಸ್ಟರ್ ಮತ್ತು ಟೀಸರ್​ ಸಿನಿಮಾ ಮೇಲೆ ಸಾಕಷ್ಟು ಭರವಸೆ ಮೂಡಿಸಿದೆ.. ಚಿತ್ರದ ಆಡಿಯೋ ರಿಲೀಸ್​ ಆಗಿದ್ದು, ಜುಡಾ ಸ್ಯಾಂಡಿ ಟ್ಯೂನ್​​ವೊಂದಕ್ಕೆ ಸ್ವತ: ನವರಸ ನಾಯಕ ಜಗ್ಗೇಶ್ ಸಾಹಿತ್ಯ ಬರೆದಿದ್ದಾರೆ.. ಕಂಚಿನ ಕಂಠದ ನಟ ವಸಿಷ್ಠ ಸಿಂಹ ‘ಜಗವೇ ಘೋರ, ಹೃದಯ ಭಾರ’ ಅಂತ ಶುರುವಾಗೋ ಈ ಹಾಡನ್ನ ಹಾಡಿದ್ದಾರೆ..

ಅಂದ್ಹಾಗೇ ಇದು ಇನ್ಸ್​ಪಿರೇಶನ್​ ಸಾಂಗ್​ ಆಗಿದ್ದು, ಚಿತ್ರದಲ್ಲಿ ನವರಸ ನಾಯಕ ತಮ್ಮ ನೋವನ್ನ ಹೊರಹಾಕುವ ಹಾಡು ಇದಾಗಿದೆ.. ಅಂದ್ಹಾಗೇ ಈ ಹಾಡಿಗೆ ದನಿಯಾಗಿರೋದು ನಾಯಕ ವಸಿಷ್ಟ ಸಿಂಹ..

ಇನ್ನು ಚಿತ್ರದಲ್ಲಿ ವಸಿಷ್ಟ ಸಿಂಹ, ಪೊಲೀಸ್​ ಕಾಪ್​ ಪಾತ್ರದಲ್ಲಿ ಮಿಂಚಿದ್ದು, ವಸಿಷ್ಟಗೆ ಜೋಡಿಯಾಗಿ ನಟಿ ಮಯೂರಿ ಕಾಣಿಸಿಕೊಂಡಿದ್ದಾರೆ.. ಚಿತ್ರದಲ್ಲಿ ಮಯೂರಿ ಜರ್ನಲಿಸ್ಟ್​ ಪಾತ್ರದಲ್ಲಿ ಜೊತೆಯಾಗಿದ್ದಾರೆ.

8ಎಂಎಂ ಚಿತ್ರದಲ್ಲಿ ನವರಸನಾಯಕ, ಮಧ್ಯಮ ವರ್ಗದ, ಕೆಲಸದಿಂದ ನಿವೃತ್ತಿ ಹೊಂದಿರುವ ಒಬ್ಬ ಸಾಮಾನ್ಯನ ಪಾತ್ರ ನಿರ್ವಹಿಸ್ತಾ ಇದ್ದು, ಆ ವಯಸ್ಸಿನಲ್ಲಿ, ಆತನ ಮನಸ್ಥಿತಿ, ನೋವು, ಹಾಗೂ ಅದೆಲ್ಲವೂ ಮಿತಿಮೀರಿದಾಗ ಆತ ಹೇಗೆ ಬದಲಾಗ್ತಾನೆ ಅನ್ನೋದನ್ನ ತಮ್ಮ ಪಾತ್ರದ ಮೂಲಕ ಪ್ರೆಸೆಂಟ್ ಮಾಡಿದ್ದಾರೆ. ಚಿತ್ರದಲ್ಲಿ ಪ್ರತಿಯೊಬ್ಬರ ಪಾತ್ರವೂ ವಿಭಿನ್ನವಾಗಿದ್ದು, ರಾಕ್​ಲೈನ್​ ವೆಂಕಟೇಶ್​ ಕೂಡ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.. ಅಂದ್ಹಾಗೇ ಚಿತ್ರಕ್ಕೆ ಮೊದಲ ಬಾರಿಗೆ ಹರಿಕೃಷ್ಣ ಆ್ಯಕ್ಷನ್​ ಕಟ್ ಹೇಳಿದ್ದಾರೆ.

8ಎಂಎಂ ಸದ್ಯ ಹಾಡುಗಳ ಮೂಲಕ ಮತ್ತೆ ಸುದ್ದಿ ಮಾಡ್ತಿದ್ದು, ನವರಸನಾಯಕ ಸಿನಿಕರಿಯರ್​ನಲ್ಲಿ ಇದೊಂದು ವಿಭಿನ್ನ ಸಿನಿಮಾ ಆಗೋದ್ರಲ್ಲಿ ನೋ ಡೌಟ್​. ಎಲ್ಲಾ ಅಂದುಕೊಂಡಂತೆ ಆದ್ರೆ ಮುಂದಿನ ತಿಂಗಳು ಸಿನಿಮಾ ತೆರೆಗೆ ಬರ್ಲಿದೆ.

ವರದಿ : ಅರ್ಚನಾಶರ್ಮಾ, ಎಂಟರ್​ಟೈನ್ಮೆಂಟ್ ಬ್ಯುರೋ, ಟಿವಿ5

Next Story

RELATED STORIES