Top

ಮೋಸ್ಟ್‌ ವಾಂಟೆಡ್ ಮಂಗಳಮುಖಿಯಿಂದ ಗೂಂಡಾಗಿರಿ

ಮೋಸ್ಟ್‌ ವಾಂಟೆಡ್ ಮಂಗಳಮುಖಿಯಿಂದ ಗೂಂಡಾಗಿರಿ
X

ಬೆಂಗಳೂರು: ಮೋಸ್ಟ್ ವಾಂಟೆಡ್ ಮಂಗಳಮುಖಿ ಅಂತಾನೆ ಕರೆಸಿಕೊಳ್ಳೋ ಆಪರೇಷನ್ ಆನಂದಿಯ ರೌಡಿಸಂ ಮೇರೆ ಮೀರಿದೆ. ಬೆಂಗಳೂರಿನ ಬಾಣಸವಾಡಿಯ ಕೆಎಚ್ ಬಿ ಕ್ವಾಟ್ರಸ್ ಬಳಿ ಮಂಗಳಮುಖಿ ಆನಂದಿ ಹಾಗೂ ಆಕೆಯ ಚೇಲಾಗಳು ಇಬ್ಬರು ಮಂಗಳಮುಖಿಯರ ಮೇಲೆ ಲಾಂಗು-ಮಚ್ಚುಗಳಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

https://www.youtube.com/watch?v=Wrh0vjMVWek&feature=youtu.be

ಮಂಗಳಮುಖಿಯರಾದ ಚಿತ್ರ ಹಾಗೂ ಸತ್ಯ ಆರೋಪಿ ಆನಂದಿಯಿಂದ ಮಾರಣಾಂತಿಕ ಹಲ್ಲೆಗೊಳಗಾದವರು. ಆಪರೇಷನ್ ಆನಂದಿ ಕಳೆದೆರಡು ವರ್ಷದ ಹಿಂದೆ ಬಾಲಕನೊಬ್ಬನಿಗೆ ಚಿತ್ರಹಿಂಸೆ ನೀಡಿ ಲಿಂಗಪರಿವರ್ತನೆ ಮಾಡಿಸಿದ್ದಳು. ಅದೇ ಕೇಸಲ್ಲಿ ಆನಂದಿ ಹಾಗೂ ಆಕೆಯ ಖತರ್ನಾಕ್ ಟೀಂ ಅರೆಸ್ಟ್ ಕೂಡ ಆಗಿತ್ತು. ಕಳೆದ ಆರು ತಿಂಗಳ ಹಿಂದೆ ಜಾಮೀನನ ಮೂಲಕ ಜೈಲಿನಿಂದ ಹೊರಬಂದಿದ್ದ ಆನಂದಿ ತನ್ನ ಗಾಂಜಾ ಟೀಂನಿಂದ ಉಳಿದ ಮಂಗಳಮುಖಿಯರಿಂದ ಹಫ್ತಾ ವಸೂಲಿ ಮಾಡ್ತಿದ್ದಳು.

ಅಲ್ಲದೇ ಕೆಲ ಮಂಗಳಮುಖಿಯರಿಗೆ ಬಲವಂತವಾಗಿ ಭಿಕ್ಷಾಟನೆ ಹಾಗೂ ಲೈಂಗಿಕ ಕಾರ್ಯಕರ್ತರಾಗುವಂತೆ ಪ್ರಚೋದಿಸುತ್ತಿದ್ದಳು. ಆನಂದಿಯ ಈ ನಡೆಯನ್ನ ಮಂಗಳಮುಖಿಯರಾದ ಚಿತ್ರ ಹಾಗೂ ಸತ್ಯ ಪ್ರಶ್ನಿಸಿದ್ದಷ್ಟೇ, ಆನಂದಿ ಹಾಗೂ ಆಕೆಯ ಗ್ಯಾಂಗ್ ದಾಂಗುಡಿ ಇಟ್ಟು ಮಾರಣಾಂತಿಕ ಹಲ್ಲೆ ನಡೆಸಿದೆ. ಸದ್ಯ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸ್ರು ಆನಂದಿಯ ಬೇಟೆಗಾಗಿ ಕಾದುಕುಳಿತಿದ್ದಾರೆ.

Next Story

RELATED STORIES