Top

ಅಚ್ಚರಿಯ ರೀತಿಯಲ್ಲಿ ಕೃಷ್ಣಮಠಕ್ಕೆ ಭೇಟಿ ನೀಡಿದ ಸಿಎಂ ಕುಮಾರಸ್ವಾಮಿ

ಅಚ್ಚರಿಯ ರೀತಿಯಲ್ಲಿ ಕೃಷ್ಣಮಠಕ್ಕೆ ಭೇಟಿ ನೀಡಿದ ಸಿಎಂ ಕುಮಾರಸ್ವಾಮಿ
X

ಉಡುಪಿ : ಮುಖ್ಯಮಂತ್ರಿ ಆದ ಬಳಿಕ ಮೊದಲ ಬಾರಿ ಜಿಲ್ಲೆಗೆ ಭೇಟಿ ನೀಡಿದ ಕುಮಾರಸ್ವಾಮಿ ಉಡುಪಿ ಜನತೆ ಸಮಸ್ಯೆಗೆ ಸ್ಪಂದಿಸೋ ಭರವಸೆ ನೀಡಿದ್ದಾರೆ. ಮೀನುಗಾರ ಸಮುದಾಯಕ್ಕೆ ಬಜೆಟ್ ನಲ್ಲಾದ ಅನ್ಯಾಯವನ್ನು ಸರಿದೂಗಿಸಲು ಸಿಎಂ ಹೊಸ ಯೋಜನೆ ಜಾರಿ ಬಗ್ಗೆ ಮಾತಾಡಿದ್ದಾರೆ. ಕೆಡಿಪಿ ಸಭೆಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳ ಬೇಡಿಕೆಗೆ ಅನುಗುಣವಾಗಿ ಸ್ಪಂದಿಸಿದ್ದಾರೆ. ಜೊತೆಗೆ ಕೃಷ್ಣ ಮಠಕ್ಕೆ ಭೇಟಿ ನೀಡುವ ಮೂಲಕ ವಿವಾದಕ್ಕೆ ಸಿಲುಕದಂತೆ ಜಾಗೃತೆನೂ ವಹಿಸಿಕೊಂಡ್ರು.

ಉಡುಪಿಯ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕೆಡಿಪಿ ಸಭೆ ಆಗಮಿಸಿದ ಸಿಎಂ ಕುಮಾರಸ್ವಾಮಿ ಅಧಿಕಾರಿಗಳು, ಜನಪ್ರತಿನಿಧಿಗಳ ಜೊತೆ ಬರೋಬ್ಬರಿ ಮೂರು ಗಂಟೆಗೂ ಮಿಕ್ಕಿ ಸುದೀರ್ಘ ಚರ್ಚೆ ನಡೆಸಿದ್ರು.

ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲ ಸಹಿತ ಜಿಲ್ಲೆಯ ಐವರು ಶಾಸಕರು, ವಿಧಾನಪರಿಷತ್ ಸದಸ್ಯರು ಸಭೆಯಲ್ಲಿದ್ದು ಹಲವಾರು ಸಮಸ್ಯೆಗಳ ಬಗ್ಗೆ ಸಿಎಂ ಗಮನಸೆಳೆದ್ರು. ಪ್ರಕೃತಿ ವಿಕೋಪದಿಂದಾದ 141 ಕೋಟಿ ರೂಪಾಯಿ ಅನುದಾನವನ್ನು ನೀಡುವುದಾಗಿ ಜಿಲ್ಲೆಯ ಜನತೆಗೆ ಸಿಎಂ ಭರವಸೆ ನೀಡಿದ್ರು.

ಅಲ್ಲದೇ ಜಿಲ್ಲೆಯ ಹಲವು ಸಮಸ್ಯೆಗಳಿಗೆ ಸಕರಾತ್ಮಕವಾಗಿ ಸ್ಪಂದಿಸೋ ಬಗ್ಗೆ ಮಾತನಾಡಿದ್ರು. ಮರಳುಗಾರಿಕೆಯಿಂದಾದ ಸಮಸ್ಯೆ ಪರಿಹರಿಸಲು ಹತ್ತು ದಿನಗಳ ಒಳಗಾಗಿ ಅಧಿಕಾರಿಗಳ ಸಭೆಯನ್ನು ಬೆಂಗಳೂರಿನಲ್ಲಿ ಕರೆಯುವುದಾಗಿ ತಿಳಿಸಿದ್ರು.

ಕಳೆದ ಬಾರಿ ಕುಮಾರಸ್ವಾಮಿ ಮಂಡಿಸಿದ ಬಜೆಟ್ ನಲ್ಲಿ ಮೀನುಗಾರ ಸಮುದಾಯಕ್ಕೆ ಅನ್ಯಾಯವಾಗಿತ್ತು. ಈ ಬಗ್ಗೆ ಕರಾವಳಿಯಲ್ಲಿ ಪ್ರತಿಭಟನೆಯೂ ನಡೆದಿತ್ತು. ಈ ಹಿನ್ನೆಲೆ ಇಂದು ನಡೆದ ಕೆಡಿಪಿ ಸಭೆಯಲ್ಲೂ ಜಿಲ್ಲೆಯ ಜನಪ್ರತಿನಿಧಿಗಳು ನಾಡದೊರೆಯ ಗಮನಸೆಳೆದರು.

ಮೀನುಗಾರ ಸಮುದಾಯಕ್ಕೆ ಪ್ರಕೃತಿ ವಿಕೋಪದಲ್ಲಾದ ನಷ್ಟವನ್ನು ಭರಿಸಲು ಹೆಚ್ಚಿನ ಪರಿಹಾರ, ಮೀನುಗಾರ ಯುವಕರಿಗೆ ಉದ್ಯೋಗ, ಮನೆ ನಿರ್ಮಾಣದ ಭರವಸೆ ನೀಡಿದ್ದಾರೆ. ಈ ಮೂಲಕ ಕಳೆದ ಬಾರಿ ಬಜೆಟ್ ನಲ್ಲಿ ಮಾಡಿದ ತಪ್ಪನ್ನು ಸಿಎಂ ತಿದ್ದಿಕೊಂಡಂತಾಗಿದೆ.

ಇನ್ನು ಮುಖ್ಯಮಂತ್ರಿ ಆದ ಬಳಿಕ, ಮೊದಲ ಬಾರಿಗೆ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ, ದೇವರ ದರ್ಶನ ಪಡೆದರು. ಕುಮಾರಸ್ವಾಮಿ ಕೃಷ್ಣಮಠ ಭೇಟಿ ನಿರೀಕ್ಷಿತವಾಗಿದ್ದರೂ ಕೊನೆ ಕ್ಷಣದವರೆಗೂ ಭೇಟಿ ನಿಗದಿಯಾಗಿರಲಿಲ್ಲ..

ಮಂಗಳೂರು ವಿಮಾನ ನಿಲ್ದಾಣದಿಂದ ನೇರವಾಗಿ ರಸ್ತೆ ಮಾರ್ಗದಲ್ಲಿ ಆಗಮಿಸಿದ ಸಿಎಂ ಕೃಷ್ಣ ಮಠ ಭೇಟಿ ನೀಡಿಯೇ ಬಳಿಕ ಪ್ರವಾಸ ಮುಂದುವರೆಸಿದ್ರು. ಅಲ್ಲದೇ ಕಳೆದ ಬಾರಿಯ ಅವಧಿಯಲ್ಲಿ ಸಿದ್ದರಾಮಯ್ಯ ಮಾಡಿದ ತಪ್ಪನ್ನು ಮಾಡದಿರಲು ಕುಮಾರಸ್ವಾಮಿ ನಿರ್ಧರಿಸಿದಂತಿತ್ತು. ಉಡುಪಿಯಲ್ಲಿ ಕೆಡಿಪಿ ಸಭೆ ಮುಗಿಸಿ ಹೊರಟ ಸಿಎಂ ಬಳಿಕ ಮತ್ತೆ ಮಂಗಳೂರಿಗೆ ವಾಪಾಸ್ ಆದರು.

ಒಟ್ಟಿನಲ್ಲಿ ಉಡುಪಿಯ ಸಮಗ್ರ ಅಭಿವೃದ್ದಿಗೆ ಅಧಿಕಾರಿಗಳ ಜೊತೆ ಕೂತು ಸುದೀರ್ಘ ಚರ್ಚೆ ನಡೆಸಿರದ ಸಿಎಂ ಕುಮಾರಸ್ವಾಮಿ ನಡೆ ಬಗ್ಗೆ ಸಾರ್ವಜನಿಕ ಮೆಚ್ಚುಗೆ ವ್ಯಕ್ತವಾಯಿತು.

ವರದಿ : ನಾಗರಾಜ್ ವರ್ಕಾಡಿ, ಟಿವಿ5 ಉಡುಪಿ

Next Story

RELATED STORIES