Top

ಮಂಡ್ಯ ಲೋಕಸಭೆಯಿಂದ ಕಣಕ್ಕಿಳಿತಾರಾ ಯದುವೀರ್..?

ಮಂಡ್ಯ ಲೋಕಸಭೆಯಿಂದ ಕಣಕ್ಕಿಳಿತಾರಾ ಯದುವೀರ್..?
X

ಮಂಡ್ಯ: ಮಂಡ್ಯದಿಂದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ರನ್ನು ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ. ಈ ಬಾರಿ ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಕಣಕ್ಕಿಳಿಯದ ಕಾರಣ, ಜೆಡಿಎಸ್- ಬಿಜೆಪಿ ನಡುವೆ ನೇರ ಹಣಾಹಣಿ ನಡೆಯಲಿದೆ.

ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್ ಹೆಚ್ಚಿನ ಪ್ರಾಬಲ್ಯವಿದ್ದು, ಕಾಂಗ್ರೆಸ್ ಜೆಡಿಎಸ್‌ಗೆ ಮಂಡ್ಯ ಲೋಕಸಭಾ ಕ್ಷೇತ್ರ ಬಿಟ್ಟುಕೊಟ್ಟಿದೆ. ಜೆಡಿಎಸ್ ಅಭ್ಯರ್ಥಿ ಎದುರು ಗೆಲ್ಲಲು ಯದುವೀರ್ ಸೂಕ್ತ ಅಭ್ಯರ್ಥಿ ಎಂಬುದು ಬಿಜೆಪಿ ವಾದ. ಬಿಜೆಪಿಗೆ ಅಸ್ತಿತ್ವ ಇಲ್ಲದಿದ್ದರೂ ರಾಜಮನೆತನದ ಗೌರವದ ಮೇಲೆ ಯದುವೀರ್ ಗೆಲ್ಲಬಹುದೆಂದು ಬಿಜೆಪಿ ಲೆಕ್ಕಾಚಾರ ಹಾಕಿದೆ.

ಮೈಸೂರು ರಾಜಮನೆತನದ ಮೇಲೆ ಮಂಡ್ಯ ಜಿಲ್ಲೆಯ ಜನಕ್ಕೆ ವಿಶೇಷ ಗೌರವವಿದೆ. ಯದುವೀರ್ ತಾತ ನಾಲ್ವಡಿ ಕೃಷ್ಣರಾಜ ಒಡೆಯರ್ ಪರಿಶ್ರಮದಿಂದ ಮಂಡ್ಯದಲ್ಲಿ ಕೆ.ಆರ್.ಎಸ್. ಅಣೆಕಟ್ಟೆ ನಿರ್ಮಾಣವಾಗಿತ್ತು. ಮಂಡ್ಯ ಜಿಲ್ಲೆ ಕೃಷಿಯಲ್ಲಿ ಪ್ರಭುತ್ವ ಸಾಧಿಸಲು ನಾಲ್ವಡಿ ಕಾರಣರಾಗಿದ್ದಾರೆ. ಅಲ್ಲದೇ ನಾಲ್ವಡಿ ಮಹಾರಾಜರು ಮಂಡ್ಯ ಜಿಲ್ಲೆಗೆ ನೂರಾರು ಕೊಡುಗೆ ನೀಡಿದ್ದಾರೆ.

ಇನ್ನು ಇಲ್ಲಿನ ಪ್ರತಿ ಮನೆಯಲ್ಲೂ ನಾಲ್ವಡಿ ಕೃಷ್ಣರಾಜ ಒಡೆಯರ್ ಫೋಟೋ ಇದೆ. ಈ ಕಾರಣಕ್ಕಾದರೂ ಮಂಡ್ಯ ಜನತೆ, ಯದುವೀರ್‌ರನ್ನ ಗೆಲ್ಲಿಸಿಕೊಡಬಹುದೆಂಬ ಭರವಸೆಯಿಂದ ಬಿಜೆಪಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಯದುವೀರ್‌ರನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ. ಇನ್ನು ಯದುವೀರ್ ಒಪ್ಪಿಗೆ ನೀಡಿದರೆ. ಅವರನ್ನು ಕಣಕ್ಕಿಳಿಸುವುದು ಖಚಿತವಾಗಿದೆ.

Next Story

RELATED STORIES