Top

ದೇವಿ ಹುಂಡಿಯಲ್ಲಿ ಚೀಟಿ ಪತ್ತೆ : ಆ ಪತ್ರದಲ್ಲಿ ಏನಿತ್ತು ಗೊತ್ತಾ.?

ದೇವಿ ಹುಂಡಿಯಲ್ಲಿ ಚೀಟಿ ಪತ್ತೆ : ಆ ಪತ್ರದಲ್ಲಿ ಏನಿತ್ತು ಗೊತ್ತಾ.?
X

ದಾವಣಗೆರೆ : ಈ ನಡುವೆ ಯಾಕೋ ದೇವರಿಗೆ ಪತ್ರ ಬರೆಯುವವರ ಸಂಖ್ಯೆ ಹೆಚ್ಚಾಗ್ತಾ ಇದೆ. ಅದರಲ್ಲೂ ದೇವರ ಹುಂಡಿಗೆ ಹರಕೆ ತೀರಿಸುವಂತೆ ಕೋರಿಕೊಳ್ಳುವವರ ಸಂಖ್ಯೆ ಏರಿಕೆ ಆಗ್ತಾ ಇದೆ.

ಇದಕ್ಕೆ ಸಾಕ್ಷಿ ಎಂಬಂತೆ ಕಳೆದ ಹಲವು ದಿನಗಳ ಹಿಂದೆ, ಮಲೆಯಮಹಾದೇಶ್ವರನ ಹುಂಡಿಯಲ್ಲಿ ಹುಡುಗಿಯ ಪೋಟೋ ಲಭ್ಯವಾಗಿತ್ತು. ಈ ಮೂಲಕ ತಾನು ಪ್ರೀತಿಸುತ್ತಿರುವ ಹುಡುಗಿ ಸಿಗಲೆಂದೇ ಕೋರಿಕೊಂಡಿರುವಂತೆ ತಿಳಿದು ಬಂದಿತ್ತು.

ಇದಾದ ಬಳಿಕ ಈಗ, ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಮಾರಿಕೊಪ್ಪದ ಹಳದಮ್ಮ ದೇವಿಯ ಹುಂಡಿಯಲ್ಲಿನ ಹಣವನ್ನು ಏಣಿಸುವ ಸಂದರ್ಭದಲ್ಲಿ ಚೀಟಿ ಪತ್ತೆಯಾಗಿದೆ.

ಮಾರಿಕೊಪ್ಪದ ಹಳದಮ್ಮ ದೇವಿಯ ಹುಂಡಿಯಲ್ಲಿ ದೊರೆತ ಚೀಟಿಯಲ್ಲಿ, ಎಲ್‌ ಎಲ್‌ ಬಿ ಪಾಸ್‌ ಆಗಿಲ್ಲ. ಪಾಸು ಮಾಡು ಹಳದಮ್ಮ ದೇವಿ ಎಂಬುದಾಗಿ ಬರೆದು ಭಕ್ತನೊಬ್ಬ, ತನ್ನ ಕೋರಿಕೆಯನ್ನು ಈಡೇರಿಸುವಂತೆ ಕೋರಿಕೊಂಡಿದ್ದಾರೆ.

ಹುಂಡಿಯಲ್ಲಿ ದೊರೆತ ಪತ್ರದಲ್ಲಿ ಏನಿದೆ..?

"ಓಂ ಹಳದಮ್ಮ ನಮ:

ಓಂ ಹಳದ ಕೆಂಚಮ್ಮಯ: ನಮ:

ಓಂ ಸರ್ವ ಮಂಗಳ ಮಾಂಗಲ್ಯೇ ಶರಣ್ಯೇ ತ್ರಯಂಬಕೆ ಗೌರಿ, ನಾರಾಯಣಿ ನಮೋಸ್ತುತೆ

ದೇವರೇ..., LLB ಎಲ್ಲ ಪರೀಕ್ಷೆಯು ಪಾಸ್‌ ಆಗಿಲ್ಲ. ನೀನೆ ಪಾಸ್‌ ಮಾಡಮ್ಮ. ಪಾಸ್‌ ಆಗಬೇಕು. ನೀನು ಮಾಡಿದರೇ ಆಗುತ್ತೆ ಮಾಡು ತಾಯಿ. ನನ್ನಾಸೆಯಂತೆ ಕಾರ್ಯ ನಡೆಸಮ್ಮ" ಎಂದು ಬರೆಯಲಾಗಿದೆ.

ಈ ಪತ್ರ ಬರೆದಿರುವುದನ್ನು ಗಮನಿಸಿದರೇ, ಯಾರೋ ಎಲ್‌ ಎಲ್‌ ಬಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯೋರ್ವ, ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳು ಪಾಸ್‌ ಆಗದ ಕಾರಣ, ಪಾಸ್‌ ಆಗುವಂತೆ ಹರಕೆ ತೀರಿಸು ತಾಯಿ ಎಂದು ಕೋರಿಕೊಂಡಂತೆ ಕಂಡುಬರುತ್ತದೆ.

ಒಟ್ಟಾರೆಯಾಗಿ, ಹಳದಮ್ಮ ದೇವಿಯ ಹುಂಡಿಯಲ್ಲಿನ ಹಣ ಏಣಿಕೆ ಕಾರ್ಯದಲ್ಲಿ, 9 ಲಕ್ಷದ 61 ಸಾವಿರದ 400 ರೂಪಾಯಿ ನಗದು, 10 ಲಕ್ಷ ಮೌಲ್ಯದ ಬಂಗಾರ, 10 ಸಾವಿರ ಮೌಲ್ಯದ ಬೆಳ್ಳಿ ಆಭರಣಗಳ ಜೊತೆಗೆ, ಎಲ್‌ ಎಲ್‌ ಬಿ ವಿದ್ಯಾರ್ಥಿ ಬರದೆ ಚೀಟಿ ಸಿಕ್ಕು ಗಮನ ಸೆಳೆಯಿತು.

Next Story

RELATED STORIES