Top

ಅಂಬಾರಿ ಹೊರಲಿರುವ ಅರ್ಜುನ ಭಲೇ ಭಾರ!

ಅಂಬಾರಿ ಹೊರಲಿರುವ ಅರ್ಜುನ ಭಲೇ ಭಾರ!
X

ಈ ಬಾರಿ ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿರುವ ಗಜಪಡೆಗಳ ಪೈಕಿ ಅಂಬಾರಿ ಹೊರಲಿರುವ ಅರ್ಜುನ ಇತರ ಎಲ್ಲಾ ಆನೆಗಳಿಗಿಂತ ಒಂದು ತೂಕ ಜಾಸ್ತಿನೇ!

ಗಜಪಡೆಯಲ್ಲಿ ಪಾಲ್ಗೊಳ್ಳಲಿರುವ ಆನೆಗಳ ತೂಕ ಪ್ರತಿ ವರ್ಷದಂತೆ ಈ ಬಾರಿಯೂ ಮಾಡಲಾಯಿತು. ಮೈಸೂರಿನ ಸಾಯಿರಾಂ ವೇ ಬ್ರಿಡ್ಜ್‌ನಲ್ಲಿ ತೂಕ ಪರೀಕ್ಷೆ ಮಾಡಿಸಲಾಯಿತು. ಇದರಲ್ಲಿ ಅಂಬಾರಿ ಹೊರಲಿರುವ ಅರ್ಜುನನ ತೂಕ 5650 ಕೆಜಿ. ಆಗಿದೆ. ಇದು ಕಳೆದ ವರ್ಷ (5250ಕೆಜಿ)ಗಿಂತ ಹೆಚ್ಚಾಗಿದೆ.

ಉಳಿದಂತೆ ವರಲಕ್ಷ್ಮಿ 3120 ಕೆಜಿ, ವಿಕ್ರಮ 3985 ಕೆಜಿ, ಧನಂಜಯ 4045 ಕೆಜಿ, ಗೋಪಿ 4435 ಕೆಜಿ, ಚೈತ್ರ 920 ಕೆಜಿ ತೂಕ ಹೊಂದಿದೆ.

ಇದೇ ಮೊದಲ ಬಾರಿಗೆ ತೂಕ ಹಾಕಿಸಿಕೊಂಡ ಧನಂಜಯ ಸೇರಿ ಎಲ್ಲ ಆನೆಗಳು ಆರೋಗ್ಯವಾಗಿದ್ದು, ಆನೆಗಳ ತೂಕ ಹೆಚ್ಚಿಸಿ, ದಸರಾ ಜಂಬೂ ಸವಾರಿಗೆ ಸಿದ್ದತೆ ಮಾಡುತ್ತಿದ್ದೇವೆ. ಅಲ್ಲದೆ ಶೀಘ್ರವಾಗಿ ಎರಡನೇ ತಂಡದ ಗಜಪಡೆಯು ಮೈಸೂರಿಗೆ ಆಗಮಿಸುವ ಸಲುವಾಗಿ ಮಾತುಕತೆಯು ನಡೆಯಲಿದೆ ಎಂದು ವೈದ್ಯ ನಾಗರಾಜು ತಿಳಿಸಿದ್ದಾರೆ.

Next Story

RELATED STORIES