Top

ರಾಧಿಕೆಗೆ ಕಿಚ್ಚ, ಯಶ್, ಅಪ್ಪು ಜೊತೆ ನಟಿಸೋ ಕನಸು.!?

ರಾಧಿಕೆಗೆ ಕಿಚ್ಚ, ಯಶ್, ಅಪ್ಪು ಜೊತೆ ನಟಿಸೋ ಕನಸು.!?
X

ಸಾಮಾನ್ಯವಾಗಿ ನಟಿಮಣಿಯರಿಗೆ ವಯಸ್ಸಾದಂಗೆ ಚೆಲುವು, ಕೆಲಸದ ಮೇಲಿನ ಒಲವು ಕಡಿಮೆ ಆಗುತ್ತೆ. ಆದ್ರೆ ರಾಧಿಕಾ ಕುಮಾರಸ್ವಾಮಿಯವರ ವಿಚಾರದಲ್ಲಿ ಕೊಂಚ ಭಿನ್ನ.

ಮೊದಲ ಚಿತ್ರದಲ್ಲಿಯೇ ಕರುನಾಡಿನ ಮನೆಮಗಳಾದ ಈ ರಾ ಸುಂದರಿ ಮದ್ವೆ ನಂತ್ರ ಕೂಡ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಳ್ತಿದ್ದಾರೆ. ಇಷ್ಟೆಲ್ಲಾ ಆದ್ರೂ ಸ್ಯಾಂಡಲ್​ವುಡ್ ರಾಧಿಕೆಯ ಒಂದಷ್ಟು ಕನಸು ಕನಸಾಗಿಯೇ ಉಳಿದಿದೆ. ಆ ಸ್ವೀಟಿಯ ಸಹಿ ಸಿಹಿ ಕಹಾನಿ ಮುಂದೆ ಓದಿ.

ಟಾಲಿವುಡ್​ನಲ್ಲಿ ಮಹಾನಟಿ ಈ ವರ್ಷ ಸೂಪರ್ ಹಿಟ್ ಆಯ್ತು. ಅದೇ ರೀತಿ ನಮ್ಮ ಕನ್ನಡಲ್ಲಿಯೂ ಮಹಾನಟಿ ರೇಂಜ್​ನಲ್ಲಿ, ಯಾರಾದ್ರು ಇದ್ದಾರ ಅಂತ ದುರ್ಬಿನ್ ಹಾಕಿ ಹುಡ್ಕಿದಾಗ ಸಿಗೋದೆ ರಾಧಿಕಾ ಕುಮಾರಸ್ವಾಮಿ.

2002ರಲ್ಲಿ ನಿನಗಾಗಿ ಚಿತ್ರದ ಮೂಲಕ ನಾಯಕಿಯಾಗಿ ಬಂದವರು ಇಂದಿಗೂ ನಾಯಕಿಯೇ. ಒಂದು ಚುರು ಹೆಚ್ಚು ಕಮ್ಮಿ ಆಗಿಲ್ಲ. ಇವತ್ತಿಗೂ ಪ್ರೋಡ್ಯೂಸರ್ಸ್ ರಾಧಿಕೆಯ ಕಾಲ್​ ಶೀಟ್​ಗಾಗಿ ಗಾಳ ಹಾಕುತ್ತಿದ್ದಾರೆ.

https://www.youtube.com/watch?v=eCJoGmruhms&list=PLmylWU4EY3N96eeIR5P1mW5bqY0oj2XJh&index=22

ರುದ್ರಾತಾಂಡವ ಚಿತ್ರದ ನಂತರ ರಾಧಿಕಾ ನಟನೆಯ ಯಾವುದೆ ಸಿನಿಮಾ ರಿಲೀಸ್ ಆಗಿಲ್ಲ. ಕಿರುತೆರೆಯ ರಿಯಲಿಟಿ ಶೋ, ಹಾಗೂ ಸಿನಿಮಾ ನಟನೆ, ಫ್ಯಾಮಿಲಿ ಅಂತ ಬ್ಯುಸಿಯಾಗಿ ಬಿಟ್ರು. ಈಗ ಕೊಂಚ ಗ್ಯಾಪ್​ ​ನಂತರ ಜ್ಯುವೇಲ್ಸ್ ಆಫ್ ಇಂಡಿಯಾಗೆ ಬ್ರ್ಯಾಂಡ್ ಅಂಬಾಸೆಟರ್ ಆಗಿ, ಬಂಗಾರ ಬೊಂಬೆಯಂತೆ ಕಂಗೊಳಿಸುತ್ತಿದ್ದಾರೆ.. ಈ ಸಂದರ್ಭದಲ್ಲಿ ಸಾಕಷ್ಟು ಇಂಟ್ರಸ್ಟಿಂಗ್ ವಿಚಾರದ ಜೊತೆಗೆ ಟಿವಿ5 ಜೊತೆ ಮಾತನಾಡಿದ್ದಾರೆ.

ಸಾಲು ಸಾಲು ಸಿನಿಮಾಗಳಲ್ಲಿ ಸ್ವೀಟಿ ಬಲು ಸೊಗಸು..!

ಕನಸು ಕೊನೆ ಉಸಿರನವರೆಗೂ ಕಾಣುತ್ತಲೇ ಇರಬೇಕು. ಹಂಗೆ ಸ್ಯಾಂಡಲ್​ವುಡ್ ಸ್ವೀಟಿ ರಾಧಿಕೆಗೆ ಸಿನಿಮಾ ಕನಸು ಇಂದಿಗೂ ಕಡಿಮೆಯಾಗಿಲ್ಲ. ಒಬ್ಬ ಕಲಾವಿದೆಗೆ ಇರುವ ಹಸಿವು, ಸಿನಿಮಾ ಮೇಲಿನ ಒಲವು, ಇಂದಿಗೂ ಹಂಗೆ ಇದೆ. ಮತ್ತೊಮ್ಮೆ ಸ್ಟಾರ್ ನಟರ ಜೊತೆ ನಟಿಸುವ ಆಸೆಯ ಜೊತೆಗೆ ಪುನೀತ್ ರಾಜ್​​ ಕುಮಾರ್, ಕಿಚ್ಚ ಸುದೀಪ್ , ಯಶ್​ ಜೊತೆ ನಟಿಸುವ ಇಚ್ಛೆ ಇದೆಯಂತೆ.

ನಾಲ್ಕು ಬಿಗ್ ಸಿನಿಮಾಗಳಲ್ಲಿ ರಾಧಿಕಾ ಬ್ಯುಸಿ..!!

ಕನ್ನಡ,ತೆಲುಗು,ತಮಿಳು ಭಾಷೆಗಳಲ್ಲಿ ಭೈರಾ ದೇವಿ..!

ಇನ್ನು ರಾಧಿಕಾ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದಾರೆ ಮತ್ತು ನಟಿಸುತ್ತಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆಗೆ ರಾಜೇಂದ್ರ ಪೊನ್ನಪ್ಪ, ಅರ್ಜುನ್ ಸರ್ಜಾ ಜೊತೆಗೆ ಕಾಂಟ್ರ್ಯಾಕ್ಟ್​, ಅವರದೇ ಬ್ಯಾನರ್​ನ ಭೈರಾದೇವಿ, ಧಮಯಂತಿ ಹೀಗೆ ಲಿಸ್ಟ್ ಬೆಳೀತಾ ಹೋಗ್ತಿದೆ.

ನಟನೆ ಮತ್ತು ನಿರ್ಮಾಣದ ಜೊತೆಗೆ ಫ್ಯಾಮಿಲಿಯನ್ನು ಸರಿ ಸಮಾನವಾಗಿ ನಿರ್ವಹಿಸುತ್ತಿದ್ದಾರೆ. ಹೀಗೆ ಮತ್ತಷ್ಟು ಸಿನಿಮಾಗಳನ್ನು ರಾಧಿಕಾ ಮಾಡಲಿ.. ಅವ್ರ ಕನಸುಗಳೆಲ್ಲ ಈಡೇರಲಿ.. ಆಲ್ ಬೆಸ್ಟ್ ರಾಧಿಕಾ ಕುಮಾರಸ್ವಾಮಿ..

ಎಂಟರ್​ಟೈನ್ಮೆಂಟ್ ಬ್ಯೂರೋ TV5

Next Story

RELATED STORIES