Top

ಭಾರತ-ಇಂಗ್ಲೆಂಡ್ 5ನೇ ಟೆಸ್ಟ್​: ಕಾದಿವೆ ಹಲವು ದಾಖಲೆಗಳು!

ಭಾರತ-ಇಂಗ್ಲೆಂಡ್ 5ನೇ ಟೆಸ್ಟ್​: ಕಾದಿವೆ ಹಲವು ದಾಖಲೆಗಳು!
X

ಓವೆಲ್: ಆತಿಥೇಯ ಇಂಗ್ಲೆಂಡ್ ಟೀಂ ಇಂಡಿಯಾ ವಿರುದ್ಧ 3-1 ಅಂತರದಿಂದ ಟೆಸ್ಟ್ ಸರಣಿಯನ್ನ ಗೆದ್ದುಕೊಂಡಿದೆ. ಒವೆಲ್‍ನಲ್ಲಿ ನಾಳೆಯಿಂದ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ನಡೆಯಲಿದೆ.

ಕೊನೆಯ ಟೆಸ್ಟ್ ಪಂದ್ಯವನ್ನ ಗೆಲ್ಲಲು ಉಭಯ ತಂಡಗಳು ಪಣತೊಟ್ಟಿವೆ. ಕೊನೆಯ ಟೆಸ್ಟ್ ಪಂದ್ಯವನ್ನ ಆಡುವ ಮೂಲಕ ಆಲೆಸ್ಟರ್ ಕುಕ್ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಲಿದ್ದಾರೆ. ಒವೆಲ್‍ನಲ್ಲಿ ನಡೆಯುವ ಪಂದ್ಯಕ್ಕೂ ಮುನ್ನ ಅಂಕಿ ಅಂಶಗಳು ಗಮನ ಸೆಳೆಯುತ್ತವೆ.

  1. 1971ರಲ್ಲಿ ಆಂಗ್ಲರ ನೆಲದಲ್ಲಿ ಮೊದಲ ಟೆಸ್ಟ್ ಅಡಿದ ಟೀಂ ಇಂಡಿಯಾ ಒವೆಲ್‍ನಲ್ಲಿ ಮೊದಲ ಬಾರಿಗೆ ಗೆದ್ದಿತ್ತು. ಇದುವರೆಗೂ ಒವೆಲ್‍ನಲ್ಲಿ ಭಾರತ 1 ಗೆಲುವು 4 ಸೋಲುಗಳನ್ನ ಕಂಡಿದೆ. ಲಾಡ್ರ್ಸ್, ಹೆಡಿಂಗ್ಲಿ, ಟ್ರೆಂಟ್ ಬ್ರಿಡ್ಜ್‍ನಲ್ಲಿ ಎರಡು ಬಾರಿ ಗೆದ್ದುಕೊಂಡಿದೆ. ಎಜ್‍ಬಾಸ್ಟನ್, ಓಲ್ಡ್ ಟ್ರಾಫಾರ್ಡ್ ಮತ್ತು ರೋಸ್‍ಬೌಲ್‍ನಲ್ಲಿ ಒಂದೇ ಗೆಲುವನ್ನ ಭಾರತ ಕಂಡಿಲ್ಲ.
  2. ವಿದೇಶದಲ್ಲಿ ಟೀಂ ಇಂಡಿಯಾ ಒಂದೇ ಸರಣಿಯಲ್ಲಿ 2 ಅಥವಾ ಇದಕ್ಕಿಂತ ಹೆಚ್ಚು ಬಾರಿ 10 ಬಾರಿ ಗೆದ್ದಿದೆ. ಒವೆಲ್‍ನಲ್ಲಿ ಆಂಗ್ಲರ ವಿರುದ್ಧ ಕೊಹ್ಲಿ ಪಡೆ ಗೆದ್ದರೆ 11ನೇ ಬಾರಿ ಗೆದ್ದ ಸಾಧನೆ ಮಾಡಲಿದೆ. ಇದರಲ್ಲಿ ಎರಡು ಬಾರಿ ಇಂಗ್ಲೆಂಡ್ ವಿರುದ್ಧ ಸಾಧನೆಯಾಗಲಿದೆ.
  3. ಟೀಂ ಇಂಡಿಯಾದ ಮಿಸ್ಟರ್ ಕನ್ಸಿಸ್ಟೆಂಟ್ ಅಜಿಂಕ್ಯ ರಹಾನೆ ಒವೆಲ್‍ನಲ್ಲಿ ಆಡುವ ಮೂಲಕ ಟೆಸ್ಟ್‍ನಲ್ಲಿ 50ನೇ ಟೆಸ್ಟ್ ಪಂದ್ಯ ಅಡಿದ ಸಾಧನೆ ಮಾಡಲಿದ್ದಾರೆ. 50ನೇ ಟೆಸ್ಟ್ ಆಡುವ 32ನೇ ಮತ್ತು ವಿಶ್ವ ಕ್ರಿಕೆಟ್‍ನ 280ನೇ ಬ್ಯಾಟ್ಸ್‍ಮನ್ ಎಂಬ ಗೌರವಕ್ಕೆ ಪಾತ್ರರಾಗಲಿದ್ದಾರೆ.
  4. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ (504 ರನ್) ಇನ್ನು 59 ರನ್ ಗಳಿಸಿದರೆ ಆಂಗ್ಲರ ನೆಲದಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಭಾರತ ಬ್ಯಾಟ್ಸ್‍ಮನ್ ಎಂಬ ಗೌರವಕ್ಕೆ ಪಾತ್ರರಾಗಲಿದ್ದಾರೆ. ಇದರೊಂದಿಗೆ ಮಾಜಿ ನಾಯಕ ರಾಹುಲ್ ದ್ರಾವಿಡ್ 2002ರಲ್ಲಿ 602 ರನ್ ಬಾರಿಸಿ ದಾಖಲೆ ಬರೆದಿದ್ದರು.
  5. 147 : ಇಂಗ್ಲೆಂಡ್ ತಂಡದ ಮಾಜಿ ನಾಯಕ ಆಲೆಸ್ಟರ್‍ಕುಕ್ (12,254 ರನ್) ಇನ್ನು 147 ರನ್ ಆಲ್ ಟೈಮ್ ರನ್ ಸ್ಕೋರರ್ ವಿಭಾಗದಲ್ಲಿ ಶ್ರೀಲಂಕಾ ತಂಡದ ಮಾಜಿ ನಾಯಕ ಕುಮಾರ ಸಂಗಕ್ಕಾರ ಅವರನ್ನ ಹಿಂದಿಕ್ಕಿ ಐದನೇ ಸ್ಥಾನ ಪಡೆಯಲಿದ್ದಾರೆ.
  6. ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ (431 ವಿಕೆಟ್) ಇನ್ನು ಒಂದು ವಿಕೆಟ್ ಪಡೆದರೆ ಆಲ್ ಟೈಮ್ ವಿಕೆಟ್ ಪಡೆದ ವಿಭಾಗದಲ್ಲಿ ಮಾಜಿ ವೇಗಿ ರಿಚರ್ಡ್ ಹ್ಯಾಡ್ಲಿ ಅವರನ್ನ ಹಿಂದಿಕ್ಕಿ 8ನೇಸ್ಥಾನ ಪಡೆಯಲಿದ್ದಾರೆ.
  7. ಆಲೆಸ್ಟರ್ ಕುಕ್(999) ಇನ್ನು ಒಂದು ರನ್ ಬಾರಿಸಿದರೆ ಒವೆಲ್ ಅಂಗಳದಲ್ಲಿ ಕುಕ್ ಸಾವಿರ ರನ್ ಪೂರೈಸಲಿದ್ದಾರೆ. ಈ ಹಿಂದೆ ಈ ಅಂಗಳದಲ್ಲಿ ಲೆನ್ ಹಟನ್(1,521) ಮತ್ತು ಗ್ರಾಹಂ ಗೂಚ್ (1,097) ರನ್ ಬಾರಿಸಿದ್ದರು.
  8. ಒವೆಲ್ ಟೆಸ್ಟ ನಲ್ಲಿ ಇನ್ನು 2 ಕ್ಯಾಚ್ ಹಿಡಿದರೆ ಆಲೆಸ್ಟರ್ ಕುಕ್ ಮತ್ತು ಕೆ.ಎಲ್. ರಾಹುಲ್ ಇಂಡಿಯಾ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿಗಳಲ್ಲಿ ಅತಿ ಹೆಚ್ಚು ಕ್ಯಾಚ್‍ಗಳ್ಳನ್ನ ಹಿಡಿದ ಫೀಲ್ಡರ್‍ಗಳೆಂಬ ಗೌರವಕ್ಕೆ ಪಾತ್ರರಾಗಲಿದ್ದಾರೆ.

Next Story

RELATED STORIES