ಸೆ.7ಕ್ಕೆ ಮುರಿದು ಬೀಳುತ್ತಾ ಸಮ್ಮಿಶ್ರ ಸರ್ಕಾರ..?

ಬೆಳಗಾವಿ: ಕೆಲ ದಿನಗಳ ಹಿಂದಷ್ಟೇ ಸಮ್ಮಿಶ್ರ ಸರ್ಕಾರ ಸೆಪ್ಟೆಂಬರ್ 7ಕ್ಕೆ ಮುರಿದು ಬೀಳಲಿದೆ ಎಂಬ ಮಾತು ಕೇಳಿಬಂದಿತ್ತು. ರಾಜ್ಯರಾಜಕೀಯದಲ್ಲಿ ಸದ್ಯ ಏರುಪೇರು ಉಂಟಾಗಿದ್ದು, ಇದಕ್ಕೆ ಪೂರಕವಾಗುವಂತೆ ಬೆಳಗಾವಿ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಶುರುವಾಗಿದೆ.
ಸಹಕಾರಿ ಬ್ಯಾಂಕ್ ವಾರ್ನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಮೇಲುಗೈ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಳಗಾವಿಯಲ್ಲಿ ಹೇಳಿಕೆ ನೀಡಿದ ಸತೀಶ್ ಜಾರಕಿಹೊಳಿ, ಪಿಎಲ್ಡಿ ಬ್ಯಾಂಕ್ ಚುನಾವಣೆ ಮುನ್ನವೇ ಏನನ್ನು ಹೇಳಲಾಗುವುದಿಲ್ಲ. ಚುನಾವಣೆ ಫಲಿತಾಂಶ ಬಂದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಪ್ರತಿಷ್ಠೆಯಾಗಿದೆ. ಇವತ್ತು ಅಥವಾ ನಾಳೆ ಚುನಾವಣೆ ನಡೆಯಬೇಕಾಗಿತ್ತು. ಇದೀಗ ಚುನಾವಣೆ ನಡೆಸುವಂತೆ ಹೈಕೋರ್ಟ್ ಆದೇಶಿಸಿದೆ. ಮೊದಲು ಬ್ಯಾಂಕ್ ಚುನಾವಣೆ ಫಲಿತಾಂಶ ಬರಲಿ. ಫಲಿತಾಂಶ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ಗೆ ಟಾಂಗ್ ನೀಡಿದ್ದಾರೆ.