Top

71 ವರ್ಷ ಕಳೆದರು ಈ ಊರುಗಳಿಗೆ ಸರ್ಕಾರಿ ಬಸ್ ಇಲ್ಲ.!

71 ವರ್ಷ ಕಳೆದರು ಈ ಊರುಗಳಿಗೆ ಸರ್ಕಾರಿ ಬಸ್ ಇಲ್ಲ.!
X

ಚಿಕ್ಕಬಳ್ಳಾಪುರ : 71 ವರ್ಷ ಕಳೆದರು 10 ರಿಂದ 12 ಗ್ರಾಮಗಳಿಗೆ ಬಸ್ ವ್ಯವಸ್ತೆ ಇಲ್ಲ. ಶಾಲಾ ಕಾಲೇಜಿಗೆ ಹೋಗುವ ಮಕ್ಕಳು 6 ರಿಂದ 10 ಕೀಲೋ ಮೀಟರ್ ನಡೆದುಕೊಂಡೇ ಹೋಗುವ ಪರಿಸ್ಥಿತಿ.

ಇನ್ನೂ ಈ ಹಳ್ಳಿಗಳ ಜನತೆ ಅದೇನೂ ಪಾಪ ಮಾಡಿದ್ದಾರೋ ತಿಳಿಯದು ನಿತ್ಯ ಅವರಿವರ ಸಹಾಯದಲ್ಲೆ ತಾಲ್ಲೂಕು ಜಿಲ್ಲಾ ಕೇಂದ್ರಗಳಿಗೆ ಬರಬೇಕು. ಶಾಲಾ ಮಕ್ಕಳೂ ಅನಾರೋಗ್ಯ ಫೀಡಿತರು, ಗರ್ಭಿಣಿಯರು ಕೂಲಿ ಕಾರ್ಮಿಕರು ಬಸ್ ಇಲ್ಲದೇ ಅವರಿವರ ದ್ವಿಚಕ್ರ ವಾಹನದಲ್ಲೆ ಬರುವ ಪರಿಸ್ಥಿತಿ ಎದುರಾಗಿದೆ.

ಹೌದು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕು ಜಂಗಮಕೋಟೆ ಹೋಬಳಿ ಚೀಮಂಗಲ ಪಂಚಾಯಿತಿಗೆ ಸೇರುವ 10ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಹಲವು ವರ್ಷಗಳಿಂದ ಇದೇ ಪರಿಸ್ಥಿತಿ. ಈ ಊರುಗಳಿಗೆ ಸರ್ಕಾರಿ ಬಸ್ ಬರದೇ ಬಸ್ ಬರುವ ನಿರೀಕ್ಷೆಯಲ್ಲೆ ಇದ್ದಾರೆ ಜನ.

ಬಸ್ ಇಲ್ಲದೇ 10 ಕೀಲೋ ಮೀಟರ್ ನಡೆಯದೇ ವಿಧಿ ಇಲ್ಲ

ಚೀಮಂಗಲದಿಂದ ಜಂಗಮಕೋಟೆ ವೃತ್ತ ತಲುಪಲು 10 ಕೀಲೋ ಮೀಟರ್ ಅಂತರವಿದ್ದು ಈ ಮಾರ್ಗದಲ್ಲಿ ಬರುವ ಅರಿಕೆರೆ ಅತ್ತಿಗಾನಹಳ್ಳಿ, ಕೃಷ್ಣಹಳ್ಳಿ, ತಾಟಪರ್ತಿ, ವಲಪನಹಳ್ಳಿ, ಈರೆಬಲ್ಲ,ದೇವಗಾನಹಳ್ಳಿ ಇನ್ನೂ ಸಣ್ಣಪುಟ್ಟ ಹಳ್ಳೀಗಳಿಗೆ ಬಸ್ ಇಲ್ಲ.

ಇಲ್ಲಿನ ಗ್ರಾಮಗಳ ಸಾವಿರಾರು ಜನರು ಬಸ್ ಮುಖವನ್ನೆ ನೋಡದ ನತದೃಷ್ಟರಂತೆ ಬದುಕುತ್ತಿದ್ದಾರೆ. ಇತ್ತ ಗ್ರಾಮಪಂಚಾಯಿತಿಗೆ ಇವರ ತೆರಿಗೆ ಬೇಕು ಸಮಸ್ಯೆ ಬೇಕಾಗಿಲ್ಲ ಎಂಬಂತಾಗಿರುವುದರಿಂದಲೇ ಈ ಊರುಗಗಳಿಗೆ 71 ವರ್ಷ ಕಳೆದರು ಬಸ್ ಸಂಚಾರವಿಲ್ಲ.

ಶಾಲಾ ಕಾಲೇಜು ಮಕ್ಕಳ ಪಾಡು ದೇವರಿಗೆ ಗೊತ್ತು.!

ಇದು ಆಶ್ಚರ್ಯವಾದರೂ ಸತ್ಯ. ಈ ಕಾರಣಕ್ಕಾಗಿಯೇ ಸರ್ಕಾರಿ ಶಾಲೆಗೆ ಶಿಕ್ಷಕರು ಬರಲು ಹಿಂದೇಟು ಆಕುತ್ತಾರೆ. ಈ ಮಾರ್ಗದಲ್ಲಿ ಸುಸಜ್ಜಿತವಾದ ರಸ್ತೆ ಇದ್ದರು ಕೂಡ ಬಸ್ ಸಂಚಾರವಿಲ್ಲ. ಇಲ್ಲಿಂದ ಎಲ್ಲಿಯಾದರು ಹೋಗಬೇಕಾದರೆ ಜನರು ಆಟೋ, ದ್ವಿಚಕ್ರ ವಾಹನಗಳಿಗೆ ಪರಿದಾಡಬೇಕಾಗುತ್ತದೆ.

ಸರ್ಕಾರಿ ಶಾಲಾಕಾಲೇಜಿನ ಮಕ್ಕಳೀಗೆ ಬಸ್ ಪಾಸ್ ಕೊಟ್ಟರು, ಈ ಹಳ್ಳಿಗಳಿಗೆ ಬಸ್ಸೇ ಇಲ್ಲ

ಸರ್ಕಾರಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಓಡಾಡಲು ಸರ್ಕಾರಿ ಬಸ್ ಪಾಸ್‌ ನೀಡಿದೆ. ಆದರೇ ಬಸ್ಸೇ ಬಾರದೇ ಇದ್ದರೇ ಓಡಾಡೋದು ಹೇಗೆ ಎಂಬುದು ಇಲ್ಲಿನ ಅನೇಕ ವಿದ್ಯಾರ್ಥಿಗಳ ಪ್ರಶ್ನೆ. ಹೀಗಾಗಿ ಬಸ್‌ ಇಲ್ಲದೇ ಇಲ್ಲಿನ ಅನೇಕ ಗ್ರಾಮಗಳ ಹೆಣ್ಣು ಮಕ್ಕಳು ವಿದ್ಯಾಬ್ಯಾಸವನ್ನೇ ನಿಲ್ಲಿಸಿದ್ದಾರಂತೆ.

ಇನ್ನೂ ಸಂಭಂಧ ಪಟ್ಟ ಅಧಿಕಾರಿಗಳಿಗೆ ಎಷ್ಟೇ ಸರಿ ಮನವಿ ಪತ್ರ ಸಲ್ಲಿಸಿದರು ಬಸ್ ವ್ಯವಸ್ಥೆ ಮಾಡಿಕೊಟ್ಟಿಲ್ಲ. ಇಲ್ಲಿನ ಜನಪ್ರತಿನಿಧಿಗಳಿಗೆ ಎಷ್ಟೇ ಸರಿ ಮನವಿಯನ್ನು ಮಾಡಿಕೊಂಡಿದ್ದರು ಎಲೆಕ್ಷನ್ ಟೈಮ್ ನಲ್ಲಿ 2 ದಿನ ಬಸ್ ಬಿಟ್ಟು ಆಮೇಲೆ ಬಸ್ ಬರದೇ ಮಾಡಿದ್ದಾರೆ ಎಂದು ಗ್ರಾಮಸ್ತರು ದೂರುತ್ತಿದ್ದಾರೆ.

ಬಸ್‌ ಬರದ ಊರಿನ ಗಂಡು ಮಕ್ಕಳಿಗೆ ಹೆಣ್ಣು ಕೊಡಲು ನಿರಾಕರಣೆ

ದೂರದ ಊರುಗಳಿಂದ ಬರುವ ಮಕ್ಕಳು ಶಾಲೆಗೆ ನಿಗಧಿತ ಸಮಯಕ್ಕೆ ಬರಲು ಆಗುವುದಿಲ್ಲ ತಡವಾಗಿ ಶಾಲಾಕಾಲೇಜಿಗೆ ಹೋದರೆ ಶಿಕ್ಷಕರು ಬಯ್ಯುತ್ತಾರಂತೆ. ಬಸ್ ವ್ಯವಸ್ತೆ ಇಲ್ಲದ ಕಾರಣಕ್ಕಾಗಿಯೇ ಈ ಭಾಗದ ಊರುಗಳಿಲ್ಲಿ ಶೈಕ್ಷಣಿಕ ಅಂದೋಗತಿ ಇಳೀದಿದೆ. ಸಾರಿಗೆ ವ್ಯವಸ್ತೆ ಇಲ್ಲದೆ ಈ ಗ್ರಾಮಗಳ ಗಂಡುಮಕ್ಕಳಿಗೆ ಹೆಣ್ಣುಕೊಡಲು ಕೂಡ ನಿರಾಕರಿಸುತ್ತಾರಂತೆ.

ಒಟ್ಟಿನಲ್ಲಿ ಈ ಗ್ರಾಮದ ಜನರು ಬಸ್ ಬರದೇ ಕಂಗಾಲಾಗಿದ್ದು, ಈ ಬಗ್ಗೆ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಕಡೆ ಗಮನಹರಿಸಿ ಈ ಹಳ್ಳಿಗಳಿಗೆ ಬಸ್ ವ್ಯವಸ್ಥೆ ಮಾಡುವರೇ ಕಾದುನೋಡಬೇಕಿದೆ.

ವರದಿ : ಮುರಳಿಧರ್, ಟಿವಿ5 ಚಿಕ್ಕಬಳ್ಳಾಪುರ

Next Story

RELATED STORIES