Top

ಮಳೆಯಿಲ್ಲದೇ ಒಣಗಿನಿಂತ ಬೆಳೆ : ಆತಂಕದಲ್ಲಿ ಅನ್ನದಾತ.!

ಮಳೆಯಿಲ್ಲದೇ ಒಣಗಿನಿಂತ ಬೆಳೆ : ಆತಂಕದಲ್ಲಿ ಅನ್ನದಾತ.!
X

ಚಾಮರಾಜನಗರ : ರಾಜ್ಯದಲ್ಲಿ ಒಂದು ಕಡೆ ಭಾರಿ ಮಳೆಯಿಂದಾಗಿ ಜನಜೀವನದಲ್ಲಿ ಅಸ್ತವ್ಯಸ್ತವಾದ್ರೆ ಮತ್ತೊಂದು ಕಡೆ ಮಳೆ ಇಲ್ಲದೆ ಬೆಳೆದು ನಿಂತ ಬೆಳೆ ಒಣಗಿ ನೆಲಕಚ್ಚುವಂತಾಗಿ ಮಳೆಗಾಗಿ ರೈತ ಆಕಾಶ ನೋಡುವಂತ ಪರಿಸ್ಥಿತಿ ಎದುರಾಗಿದೆ.

ರಾಜ್ಯದಲ್ಲಿ ಕೆಲವು ಕಡೆ ವರುಣನ ಆರ್ಭಟದಿಂದ ಪ್ರವಾಹದ ಭೀತಿ.....

ಮತ್ತೊಂದು ಕಡೆ ನೋಡಿದ್ರೆ ಮಳೆಗಾಗಿ ಆಕಾಶ ನೋಡುತ್ತಾ ಕುಳಿತ ರೈತ...

ಬಿತ್ತನೆ ಮಾಡಿದ ಬೆಳೆ ಮಳೆ ಇಲ್ಲದೆ ಒಣಗಿ ನೆಲ ಕಚ್ಚಿ ನಿಂತಿರುವುದು....

ಮಳೆಗಾಗಿ ಬಾಯಿ ಬಿಟ್ಟು ನಿಂತಿರುವಂತೆ ಕಾಣುವ ಭೂತಾಯಿ.....

ಎಸ್..... ಅಂದಹಾಗೆ ಈ ಪರಿಸ್ಥಿತಿ ಎದುರಾಗಿರೋದು ಬೇರೆಲ್ಲೂ ಅಲ್ಲ ಗಡಿ ಜಿಲ್ಲೆ ಚಾಮರಾಜನಗರದಲ್ಲಿ. ಜಿಲ್ಲೆಯಲ್ಲಿ 5 ತಾಲ್ಲೂಕುಗಳಿದ್ದು ಇವುಗಳಲ್ಲಿ ಗುಂಡ್ಲುಪೇಟೆ, ಭಾಗದಲ್ಲಿ ಉತ್ತಮ ಮಳೆಯಾಗಿದೆ. ಆದ್ರೆ ಚಾಮರಾಜನಗರ ತಾಲ್ಲೂಕಿನ ಸಂತೆಮರಹಳ್ಳಿ, ಚಂದಕವಾಡಿ ಹೋಬಳಿಗಳಲ್ಲಿ ನಿರೀಕ್ಷೆ ಮಟ್ಟದಲ್ಲಿ ಮಳೆ ಆಗದೆ ಬಿತ್ತನೆ ಮಾಡಿದ್ದ ಬೆಳೆ ಒಣಗಿ ನಿಂತಿವೆ. ಇದರಿಂದ ಸಾಲ ಸೋಲ ಮಾಡಿ ಬಿತ್ತನೆ ಮಾಡಿದ್ದ ರೈತ ಆತಂಕದ ಪರಿಸ್ಥಿತಿಯಲ್ಲಿದ್ದಾನೆ.

ಇತ್ತ ಪೂರ್ವ ಮುಂಗಾರಿನಲ್ಲಿ ಬಿತ್ತನೆ ಮಾಡಿದ ಬೆಳೆಗಳು ಅಷ್ಟೋ ಇಷ್ಟೋ ಕೈಗೆಟಕುವಂತಿದ್ರೆ, ಮುಂಗಾರು ನಂತರ ಬಿತ್ತನೆ ಮಾಡಿದ ಜೋಳ, ರಾಗಿ, ಉದ್ದು, ಹೆಸರು ಸೇರಿದಂತೆ ಇತರೆ ದ್ವಿದಳ ಧಾನ್ಯ ಬೆಳೆಗೆ ಕಳೆದ ಒಂದು ತಿಂಗಳಿಂದ ಮಳೆ ಅಭಾವ ಎದುರಿಸುತ್ತಿವೆ. ಬರಿ ಮೋಡ ಕವಿದ ವಾತಾವರಣವಿದ್ದು ಮಳೆ ಮಾತ್ರ ಬಂದಿಲ್ಲ. ಹೀಗಾಗಿ ಜೋಳ ದ್ವಿದಳ ಧಾನ್ಯ ಬೆಳೆಗಳು ಒಣಗಿ ನಿಂತು ರೈತ ಕಂಗಾಲಾಗಿ ಆತಂಕದಲ್ಲಿದ್ದಾನೆ. ಜೊತೆಗೆ ಬೆಳೆ ವಿಮೆ ಅಂತ ಕೃಷಿ ಇಲಾಖೆಯವರು ಕಟ್ಟಿಸಿಕೊಂಡ ಬೆಳೆ ವಿಮೇ ಕೂಡ ಬಂದಿಲ್ಲ ಅಂತಾರೆ ಇಲ್ಲಿನ ರೈತರು

ಒಟ್ಟಾರೆ ಒಂದು ಕಡೆ ಅತೀಯಾದ ಮಳೆಯಿಂದ ಜನ ಸಂಕಷ್ಟ ಎದುರಿಸುವಂತಾದ್ರೆ, ಚಾಮರಾಜನಗರದ ತ ಇಲ್ಲಿ ಮಳೆ ಇಲ್ಲದೆ ಸಂಕಷ್ಟ ಅನುಭವಿಸುತ್ತಿರೋದು ನಿಜವಾಗಿಯೂ ವಿಪರ್ಯಾಸ.

ವರದಿ : ರಾಜೇಶ್ ಅಳಗಂಚಿ, ಟಿವಿ5 ಚಾಮರಾಜನಗರ

Next Story

RELATED STORIES