Top

ರಹಮಾನ್​ಗೆ ‘ಭಾರತ ರತ್ನ’ ಒಲಿದಿದ್ಹೇಗೆ ಗೊತ್ತಾ..?

ರಹಮಾನ್​ಗೆ ‘ಭಾರತ ರತ್ನ’ ಒಲಿದಿದ್ಹೇಗೆ ಗೊತ್ತಾ..?
X

ಬಿಗ್ ಬಾಸ್ ಮನೆಗೆ ಹೋಗಿಬಂದ ಹಾಸನದ ಅಚ್ಚ ಕನ್ನಡಿಗ ರಹಮಾನ್​ಗೆ, ಕಿರುತೆರೆ ಜೊತೆ ಬೆಳ್ಳಿತೆರೆಯಿಂದಲೂ ಸಾಲು ಸಾಲು ಅವಕಾಶಗಳು ಅರಸಿ ಬರ್ತಿವೆ. ಸದ್ಯ ಸಿನಿಮಾ ಸೀರಿಯಲ್ ಎರಡರಲ್ಲೂ ಬ್ಯುಸಿ ಇರೋ ರಹಮಾನ್​ಗೆ ಭಾರತರತ್ನ ಒಲಿದಿದ್ದೇಗೆ ಅನ್ನೋದಕ್ಕೆ ಈ ಸ್ಟೋರಿ ಓದಿ.

ರಹಮಾನ್... ಕನ್ನಡ ಸುದ್ದಿ ಮಾಧ್ಯಮಲೋಕದಲ್ಲಿ ಬಹುದೊಡ್ಡ ಹೆಸರು ಮಾಡಿದ ವ್ಯಕ್ತಿ. ಹಾಸನದ ಅಪ್ಪಟ ಕನ್ನಡ ಪ್ರತಿಭೆ. ಕನ್ನಡವನ್ನ ರಹಮಾನ್ ಬಾಯಿಂದ ಕೇಳೋದೇ ಸಖತ್ ಇಂಟರೆಸ್ಟಿಂಗ್ ಅನಿಸುತ್ತೆ. ಅಂತಹ ರಹಮಾನ್ ಸುದ್ದಿವಾಹಿನಿಯಲ್ಲಿನ ನಿರೂಪಣೆ ಬಿಟ್ಟು ಮತ್ತೊಂದೆಜ್ಜೆ ಮುಂದಿಟ್ಟರು. ಅದೇ ಬಿಗ್ ಬಾಸ್.

ಹೌದು, ಬಿಗ್ ಬಾಸ್ ಮನೆಗೆ ಕಂಟೆಸ್ಟೆಂಟ್ ಆಗಿ ಹೋಗಿಬಂದ ನಂತ್ರ ರಹಮಾನ್ ಲೈಫ್ ಫುಲ್ ಬದಲಾಗಿ ಹೋಯ್ತು. ಸಾಲು ಸಾಲು ಅವಕಾಶಗಳು ಅವ್ರನ್ನ ಕೈಬೀಸಿ ಕರೆಯತೊಡಗಿದ್ವು. ಅದ್ರಲ್ಲೂ ಸೀರಿಯಲ್ ಲೋಕ ರಹಮಾನ್​ರನ್ನ ಸೆಳೆಯದೇ ಬಿಡಲಿಲ್ಲ. ಸದ್ಯ ಸೀರಿಯಲ್ ಒಂದರಲ್ಲಿ ಬ್ಯುಸಿ ಇರೋ ರಹಮಾನ್, ಬೆಳ್ಳಿತೆರೆಯಲ್ಲೂ ಒಂದಷ್ಟು ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಮುರಳಿ ಕೃಷ್ಣ ನಿರ್ದೇಶಿಸಿ, ನಿರ್ಮಿಸ್ತಿರೋ ಗರ ಚಿತ್ರದಲ್ಲಿ ರಹಮಾನ್ ಮುಖ್ಯಭೂಮಿಕೆಯಲ್ಲಿ ಬಣ್ಣ ಹಚ್ಚಿದ್ದಾರೆ. ಬಾಲಿವುಡ್​ನ ಜಾನಿ ಲಿವರ್, ಕನ್ನಡದ ಸಾಧು ಮಹಾರಾಜ್ ಕೂಡ ಇವ್ರಿಗೆ ಸಾಥ್ ಕೊಟ್ಟಿದ್ದು ಗೊತ್ತೇಯಿದೆ. ಆದ್ರೀಗ ಭಾರತ ರತ್ನ ರಹಮಾನ್​ರನ್ನ ಹುಡುಕಿಕೊಂಡು ಬಂದಿದೆ.

ಭಾರತರತ್ನ ಅಂದ್ರೆ ಅವಾರ್ಡ್​ ಅಂತ ಕನ್ಫ್ಯೂಸ್ ಆಗ್ಬೇಡಿ. ಯಾಕಂದ್ರೆ ಅದು ಸಿನಿಮಾ ಟೈಟಲ್. ಹೌದು, ರಹಮಾನ್ ನಟಿಸ್ತಿರೋ ಹೊಸ ಸಿನಿಮಾ ಭಾರತ ರತ್ನ. ಚಿತ್ರದ ಶೀರ್ಷಿಕೆಯೇ ಹೇಳುವಂತೆ, ದೇಶ ನಮಗೇನು ಕೊಟ್ಟಿದೆ ಅನ್ನೋದ್ರ ಬದಲು ದೇಶಕ್ಕೆ ನಾವೇನು ಕೊಟ್ಟಿದ್ದೀವಿ ಅನ್ನೋದನ್ನ ಹೇಳೋ ಚಿತ್ರವಿದು. ಸಲ್ಮಾನ್ ಅನ್ನೋ ಚಿಗುರು ಮೀಸೆ ಹುಡ್ಗ ಆ್ಯಕ್ಷನ್ ಕಟ್ ಹೇಳ್ತಿರೋ ಈ ಚಿತ್ರದಲ್ಲಿ ರಹಮಾನ್ ಪ್ರೊಫೆಸರ್ ಪಾತ್ರ ಮಾಡ್ತಿದ್ದು, ಧನ್ಯ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.

ಒಟ್ಟಾರೆ ಸಿನಿಮಾ ಸೀರಿಯಲ್ ಅಂತ ಬ್ಯುಸಿ ಆಗಿರೋ ರಹಮಾನ್, ಆದಷ್ಟು ಬೇಗ ಬಣ್ಣದಲೋಕದಲ್ಲಿ ನೆಲೆಕಂಡುಕೊಳ್ಳುವಂತಾಗಲಿ ಅಂತ ಹಾರೈಸೋಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್, ಟಿವಿ5

Next Story

RELATED STORIES