ಗಣೇಶ ಮೂರ್ತಿಯ ತಯಾರಿಕೆಯಲ್ಲಿ ಮುಸ್ಲಿಂ ಕುಟುಂಬ.!

ಚಿಕ್ಕೋಡಿ : ಹಿಂದೂಗಳ ಪವಿತ್ರ ಹಬ್ಬ ಗಣೇಶ ಚುತುರ್ಥಿ. ಈ ಹಬ್ಬವನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ವಿಜ್ರಂಭಣೆಯಿಂದ ಆಚರಿಸುವ ಹಬ್ಬ. ಗಣಪತಿ ಹಬ್ಬ ಬಂದರೆ ಸಾಕು ಇಡೀ ದೇಶವೇ ವಿಜ್ರಂಭನೆಯಿಂದ ಆಚರಿಸುತ್ತದೆ.

ಆದರೆ ಈ ಹಬ್ಬಕ್ಕೆ ಇಲ್ಲೋಂದು ಮುಸ್ಲಿಂ ಕುಟುಂಬ ಗಣೇಶನ ವಿಗ್ರಹವನ್ನು ತಯಾರಿಸಿ ಹಿಂದೂಗಳಿಗೆ ನೀಡಿ ಭಾವೈಕ್ಯತೆ ಮೆರೆಯುತ್ತಿದೆ. ಇವರ ಈ ಕೆಲಸದಿಂದ ಇಡೀ ಸುತ್ತಮುತ್ತಲಿನ ಹಳ್ಳಿಗಳ ಜನರ ಗಮನ ಸೆಳೆದಿದೆ. ಅಷ್ಟಕ್ಕೂ ಆ ಕುಟುಂಬ ಯಾವುದು, ಎಲ್ಲಿದೆ ಅಂತಿರಾ ಹಾಗಾದರೆ ಈ‌ ಸುದ್ದಿ ಓದಿ..

ತೆಲೆ ಮೇಲೆ ಟೋಪಿ ಕೈಯಲ್ಲಿ ಬ್ರಶ ಹಿಡಿದು ಗಣೇಶನ ವಿಗ್ರಹಕ್ಕೆ ಕಲರ್ ಕಲರ ಬಣ್ಣ ಬಳಿಯುತ್ತಿರುವುದು, ಸುಂದರವಾಗಿ ನಿರ್ಮಿಸಿದ ಗಣೇಶನ ವಿಗ್ರಹಗಳು. ತಯಾರಿಸುವುಲ್ಲಿ ಬ್ಯುಸಿಯಾಗಿರುವ ಕುಟುಂಬಸ್ಥರು. ಒಂದಕ್ಕಿಂತ ಒಂದು ಕಲ್ಲರಪುಲ್ ಆಗಿ ಹೊಳೆಯುತ್ತಿರುವ ಗಣೇಶನ ವಿಗ್ರಹ.

ಇವೆಲ್ಲ ದೃಶ್ಯಗಳು ಕಂಡು ಬರುವುದು ಚಿಕ್ಕೋಡಿ ತಾಲೂಕಿನ ಮಾಂಜರಿವಾಡಿ ಗ್ರಾಮದಲ್ಲಿ. ಈ ಗ್ರಾಮದ ಅಲ್ಲಾಭಕ್ಷ ಜಮಾದಾರ ಹಾಗೂ ಅವರ ಕುಟುಂಬಸ್ಥರು ಕಳೆದ 3 ತಲೆಮಾರುಗಳಿಂದ ಗಣೇಶನ ವಿಗ್ರಹವನ್ನು ತಯಾರಿಸುವ ಕಾಯಕವನ್ನು ಬೆಳೆಸಿಕೋಂಡು ಬಂದಿದ್ದಾರೆ.

ಒಂದು ಕಡೆ ದೇಶದಲ್ಲಿ ಹಿಂದೂ – ಮುಸ್ಲಿಂ ಅನ್ನುತ್ತಾ.. ಧರ್ಮ ಧರ್ಮಗಳ ಹಗೆಸಾಧಿಸುತ್ತಿದ್ದರೆ. ಇತ್ತ ಮಾಂಜರಿವಾಡಿ ಗ್ರಾಮದಲ್ಲಿ ಹಿಂದೂ ಮುಸ್ಲಿಂ ಧರ್ಮದವರು ಸಹೋದರರಂತೆ ಬಾಳುತ್ತಿದ್ದಾರೆ.

ಪರಸ್ಪರ ಹೀಂದೂಗಳ ಕಾರ್ಯಕ್ರಮದಲ್ಲಿ ಮುಸ್ಲಿಂರು ಪಾಲ್ಗೋಂಡರೆ. ಮುಸ್ಲಿಂರ ಕಾರ್ಯಕ್ರಮದಲ್ಲಿ ಹೀಂದೂಗಳ ಪಾಲ್ಗೋಳ್ಳುತ್ತಾರೆ. ಇದಕ್ಕೆ ಪುಷ್ಢಿನೀಡುವಂತೆ ಮುಸ್ಲಿಂರು ತಯಾರಿಸುವ ಗಣೇಶನ ವಿಗ್ರಹಗಳನ್ನು ಹಿಂದೂಗಳು ಗಣೇಶನ ಹಬ್ಬದ ದಿನದಂದು ಭಕ್ತಿ ಪೂಜಿಸುತ್ತಾರೆ.

ಅಲಾಭಕ್ಷ ಕುಟುಂಬಸ್ಥರು ಪ್ರತಿ ವರ್ಷ 300ಕ್ಕಿಂತ ಹೆಚ್ಚಿನ ಗಣೇಶನ ವಿಗ್ರಹವನ್ನು ತಯಾರಿಸುತ್ತಾರೆ. ಅದರಲ್ಲೂ ಪರಿಸರ ಹಿತವನ್ನು ಕಾಪಾಡುವು ನಿಟ್ಟಿನಲ್ಲಿ ಶೇಡುವಿನ ಮಣ್ಣಿನಿಂದ ವಿಗ್ರಹ ತಯಾರಿಸುತ್ತಾರೆ.

ಮತ್ತೊಂದು ವಿಶೇಷವೆಂದರೆ, ಇವರು ಯಾವುದೇ ದುಡ್ಡಿನ ಆಸೆಗಾಗಿ ಈ‌ ಮೂರ್ತಿ ಗಳನ್ನು ತಯಾರಿಸುವುದಿಲ್ಲವಂತೆ. ಭಕ್ತರು ತಮ್ಮ ಕೈಲಾದಷ್ಡು ಸ್ವಲ್ಪ ಧಾನ್ಯಗಳನ್ನು ನೀಡಿದರೆ ಸಾಕು ವಿಗ್ರಹವನ್ನು ನೀಡುತ್ತಾರೆ.

ಇವರು ತಯಾರಿಸುವ ಗಣಪನ ಮೂರ್ತಿಗಳನ್ನು ಮಾಂಜರಿವಾಡಿಯ ಎಲ್ಲಾ ಗ್ರಾಮಸ್ಥರು ಅಲ್ಲಾಭಕ್ಷ ಕುಟುಂಬದ ಸ್ಥರು ತಯಾರಿಸಿದ ವಿಗ್ರಹವನ್ನು ಒಯ್ಯುತ್ತಾರೆ. ಇದು ಹಿಂದೂ‌ ಮುಸ್ಲಿಂ ಧರ್ಮಗಳ ಭಾವ್ಯಕತೆಯ ಸಂಕೇತವಾಗಿದೆ ಎಂಬುದು ಅಲ್ಲಾಭಕ್ಷ ಕುಟುಂಬಸ್ಥರ ಮಾತಾಗಿದೆ.

ಒಟ್ಟಿನಲ್ಲಿ ದೇಶದಲ್ಲಿ ಕಾಣದ ಕೈಗಳಿಂದ ಹಿಂದೂ-ಮುಸ್ಲಿಂರ‌ ಮಧ್ಯೆ ಬೆಂಕಿಯನ್ನು ಹಚ್ಚಿ ಅಮಾಯಕರನ್ನು ಬಲಿಪಶುವನ್ನಾಗಿ ಮಾಡುತ್ತಿದ್ದರೆ, ಮಾಂಜರಿವಾಡಿ ಗ್ರಾಮದಲ್ಲಿ ಹಿಂದೂ ಮುಸ್ಲಿಂ ಭಾವ್ಯಕತೆಯ ಸಂಕೇತವಾಗಿರುವ ಮುಸ್ಲಿಂರು ಗಣೇಶನ ವಿಗ್ರಹವನ್ನು ತಯಾರಿಸುತ್ತಿರುವ ಅಲ್ಲಾಭಕ್ಷ ಕುಟುಂಬ ವಿಶೇಷಗಳಲ್ಲಿ ವಿಶೇಷ ಎನಿಸಿಕೊಂಡಿದೆ.

ವರದಿ : ರವೀಂದ್ರ ಚೌಗುಲೆ, ಟಿವಿ5 ಕನ್ನಡ ಚಿಕ್ಕೋಡಿ