Top

ಕೆಜಿಎಫ್ ವರ್ಸಸ್ ಅವನೇ ಶ್ರೀಮನ್ನಾರಾಯಣ

ಕೆಜಿಎಫ್ ವರ್ಸಸ್ ಅವನೇ ಶ್ರೀಮನ್ನಾರಾಯಣ
X

​ ​ ಕೆಜಿಎಫ್ ಮತ್ತು ಅವನೇ ಶ್ರೀಮನ್ನಾರಾಯಣ. ಸ್ಯಾಂಡಲ್​ವುಡ್​ನ ಈ ವರ್ಷದ ಮೋಸ್ಟ್ ಎಕ್ಸ್​ಪೆಕ್ಟೆಡ್ ಚಿತ್ರಗಳು. ಟೀಸರ್ ಹಾಗೂ ಮೇಕಿಂಗ್​ನಿಂದಲೇ ಸಖತ್ ಸದ್ದು ಮಾಡ್ತಿರೋ ಇವೆರಡೂ ಚಿತ್ರಗಳು ಇದೇ ಡಿಸೆಂಬರ್​ಗೆ ತೆರೆಗೆ ಬರೋಕ್ಕೆ ಸಜ್ಜಾಗ್ತಿವೆ. ಆದ್ರೆ ರಾಕಿಂಗ್ ಸ್ಟಾರ್ ಕೆಜಿಎಫ್ ಬರೋದಾದ್ರೆ ನಾವು ಬರಲ್ಲ ಅಂತಿದ್ದಾನೆ ಶ್ರೀಮನ್ನಾರಾಯಣ.

ಸಿಂಪಲ್ ಸ್ಟಾರ್​ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ ಟೀಸರ್​ ಬಿಟ್ಟು ಟ್ರೇಂಡಿಂಗ್ ಮಾಡಿಕೊಂಡಿದ್ದರು ಅವನ್ನೇ ಶ್ರೀಮನ್ನಾರಾಯಣ ಫಿಲ್ಮ್ ಟೀಮ್. ಅದ್ಭುತವಾದ ಟೀಸರ್ನ ಎಂಡ್​ನಲ್ಲಿ 2018ರ ಡಿಸೆಂಬರ್​ಗೆ ಮೇ ಬಿ ಬರ್ತಿವಿ ಎಂದಿದ್ರು. ಅದರಂತೆ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.

ಸಂಕಲನಕಾರ ಸಚಿನ್ ರವಿ ಸಾರಥ್ಯದಲ್ಲಿ​ ಅವನ್ನೇ ಶ್ರೀಮನ್ನಾರಾಯಣನ ಕಟ್ಟಲಾಗುತ್ತಿದೆ. 80ರ ದಶಕದ ನೀರು ನೆಲೆ ಇಲ್ಲದ ,ಬಯಲು ಸೀಮೆಯ, ಟಿಪಿಕಲ್ ಕರಪ್ಟೆಡ್ ಪೊಲೀಸ್ ದಿರಿಸಿನಲ್ಲಿ ರಕ್ಷಿತ್​ ಶೆಟ್ಟಿ ನಿಂತಿದ್ದಾರೆ. ಬಿಜಾಪುರ ಹಾಗೂ ಬೆಂಗಳೂರಿನ ಕಂಠಿರವ ಸ್ಟುಡಿಯೋದಲ್ಲಿ ಚಿತ್ರೀಕರಣವಾಗ್ತಿದೆ. ಚಿತ್ರಕ್ಕಾಗಿ ಅದ್ಧೂರಿ ಸೆಟ್​ನ ಹಾಕಿದೆ ಚಿತ್ರತಂಡ. ಶ್ರೀಮನ್ನಾರಾಯನ ಕಾಲ್ಪನಿಕ ಅಮರಾವತಿ ಸೆಟ್ಟ್​​​ನ ಎಕ್ಸ್​​​ಕ್ಲೂಸಿವ್ ದೃಶ್ಯವಳಿಗಳಿವು.

ಅರ್ಧ ಸೆಟ್​ನಲ್ಲಿದ್ರೆ , ಇನ್ನಾರ್ಧ ಬ್ಲೂ ಮೇಟ್​​ನಲ್ಲಿ ಚಿತ್ರೀಕರಣವಾಗ್ತಿದೆ. ಚಿತ್ರದ 50ಪರೆಸೆಂಟ್ ಶೂಟಿಂಗ್ ಆಗಿದೆ ಅಷ್ಟೆ. ಇನ್ನು 50ಪರೆಸೆಂಟ್​​ಗಾಗಿ ಚಿತ್ರತಂಡ ಹಗಲಿರುಳು ದುಡಿಯುತ್ತಿದೆ. ಕಾರಣ ಡಿಸೆಂಬರ್​ನಲ್ಲಿ ಸಿನಿಮಾ ರಿಲೀಸ್ ಮಾಡುವ ಸಲುವಾಗಿ. ಆದ್ರೆ ಈಗ ಅಕಸ್ಮತ್ ಏನಾದ್ರು ಕೆಜಿಎಫ್ ಡಿಸೆಂಬರ್​ಗೆ ಬಂದ್ರೆ ಶ್ರೀಮನ್ನಾರಾಯಣ ರಿಲೀಸ್​ ಆಗೋದು ಡೌಟ್​. ಇದು ಚಿತ್ರತಂಡವರಿಂದಲೇ ಬಂದಿರುವ ವಿಶೇಷ ಮಾಹಿತಿ.

ಒಂದು ಲೆಕ್ಕಕ್ಕೆ, ಇದು ಒಳ್ಳೆಯ ನಿರ್ಧಾರವೇ. ಈಗಿನ ಜಮಾನದಲ್ಲಿ ಕನ್ನಡ ಸಿನ್ಮಾಗಳಿಗೆ ಕನ್ನಡ ಸಿನ್ಮಾಗಳೇ ಪೈಪೋಟಿಯಾಗಿವೆ.. ಇಂಥ ದೊಡ್ಡ ದೊಡ್ಡ ಸಿನಿಮಾಗಳ ಒಟ್ಟಿಗೆ ಬಂದು ಮಾರ್ಕೆಟ್ ಡೌನ್ ಮಾಡಿಕೊಳುವುದ್ರ ಬದಲು, ಕನಿಷ್ಟ ಹದಿನೈದು ದಿನ ಗ್ಯಾಪ್​ನಲ್ಲಿ ಬರೋದು ಬಹಳ ಒಳ್ಳೆಯದ್ದು.

ಶ್ರೀಧರ್ ಶಿವಮೊಗ್ಗ _ ಎಂಟರ್​ಟೈನ್ಮೆಂಟ್ ಬ್ಯೂರೋ_ TV5

Next Story

RELATED STORIES