Top

ಬ್ರಹ್ಮಪುತ್ರ ನದಿಯಲ್ಲಿ ಮುಳುಗಿದ 40 ಪ್ರಯಾಣಿಕರಿದ್ದ ದೋಣಿ

ಬ್ರಹ್ಮಪುತ್ರ ನದಿಯಲ್ಲಿ ಮುಳುಗಿದ 40 ಪ್ರಯಾಣಿಕರಿದ್ದ ದೋಣಿ
X

ಗುವಾಹಟಿ: 40 ಪ್ರಯಾಣಿಕರಿದ್ದ ದೋಣಿ ಬ್ರಹ್ಮಪುತ್ರ ನದಿಯಲ್ಲಿ ಮಗುಚಿಕೊಂಡಿದ್ದು, ಒಬ್ಬ ಮೃತಪಟ್ಟು ಹಲವಾರು ಮಂದಿ ಗಾಯಗೊಂಡಿದ್ದಾರೆ. ದೋಣಿಯಲ್ಲಿದ್ದ 8 ದ್ವಿಚಕ್ರ ವಾಹನಗಳು ನೀರಿನಲ್ಲಿ ಮುಳಗಿದ ಘಟನೆ ಗುವಾಹಟಿಯಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದೆ.

ದೋಣಿ ಮುಳುಗುತ್ತಿದ್ದಂತೆ 12 ಮಂದಿ ಈಜಿ ಸುರಕ್ಷಿತವಾಗಿ ದಡ ಸೇರಿದ್ದಾರೆ. ಆದರೆ ಮಹಿಳೆಯರು ಮತ್ತು ಮಕ್ಕಳು ಇನ್ನೂ ನಾಪತ್ತೆಯಾಗಿದ್ದಾರೆ. 25 ಸದಸ್ಯರ ರಕ್ಷಣಾ ತಂಡ ಪರಿಹಾರ ಕಾರ್ಯದಲ್ಲಿ ತೊಡಗಿದೆ.

ಸುಮಾರು 2 ಗಂಟೆಗಳ ಸುದೀರ್ಘ ಕಾರ್ಯಾಚರಣೆ ನಂತರ ಅಪ್ರಾಪ್ತ ಬಾಲಕಿಯ ಶವ ಪತ್ತೆಯಾಗಿದೆ. ನದಿ ತುಂಬಾ ದೊಡ್ಡದಾಗಿರುವುದರಿಂದ ಪರಿಹಾರ ಕಾರ್ಯದಲ್ಲಿ ಸಮಸ್ಯೆ ಆಗುತ್ತಿದೆ.

ಗುವಾಹಟಿಯಿಂದ ಉತ್ತರ ಗುವಾಹಟಿಗೆ ತೆರಳುತ್ತಿದ್ದ ದೋಣಿಯ ಇಂಜಿನ್ ಇದ್ದಕ್ಕಿದ್ದಂತೆ ನಿಂತು ಹೋಗಿದೆ. ಕೂಡಲೇ ಮುಳುಗಲು ಆರಂಭಿಸಿತು. ದಡ ಸೇರಲು ಕೇವಲ 200 ಮೀ. ದೂರದಲ್ಲಿದ್ದಾಗ ಈ ಘಟನೆ ನಡೆದಿದ್ದು ಅಶಕ್ತರಿಗೆ ಕಷ್ಟವಾಗಿದೆ.

Next Story

RELATED STORIES