Top

ಆಶಿಶ್ ನೆಹ್ರಾ ಆರ್​ಸಿಬಿ ನೂತನ ಕೋಚ್

ಆಶಿಶ್ ನೆಹ್ರಾ ಆರ್​ಸಿಬಿ ನೂತನ ಕೋಚ್
X

ಮಾಜಿ ವೇಗಿ ಆಶಿಶ್ ನೆಹ್ರಾ 2019ನೇ ಆವೃತ್ತಿಯ ಐಪಿಎಲ್ ಟಿ-20 ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಚ್ ಆಗಿ ನೇಮಕಗೊಂಡಿದ್ದಾರೆ.

ವಿಶ್ವಕಪ್ ಗೆದ್ದ ಭಾರತ ತಂಡದ ಕೊಚ್ ಆಗಿದ್ದ ಗ್ಯಾರಿ ಕಸ್ಟರ್ನ್ ಆರ್​ಸಿಬಿ ತಂಡದ ಪ್ರಮುಖ ಕೋಚ್ ಹಾಗೂ ಮಾರ್ಗದರ್ಶಿಯಾಗಿದ್ದು, ಅವರ ನೇತೃತ್ವದ ಕೋಚ್​ ವಿಭಾಗದಲ್ಲಿ ನೆಹ್ರಾ ಕೂಡ ಸ್ಥಾನ ಪಡೆದಿದ್ದಾರೆ.

ಬುಧವಾರ ಆರ್​ಸಿಬಿ ತಂಡ ಈ ವಿಷಯವನ್ನ ಪ್ರಕಟಿಸಿತು. ಈ ಬಗ್ಗೆ ಪ್ರತಿಕ್ರಿಯಿಸಿದ ಆಶಿಶ್ ನೆಹ್ರಾ, ಕ್ರಿಕೆಟ್​ ಬಗ್ಗೆ ಅತ್ಯಂತ ಆಸಕ್ತಿ ಹೊಂದಿರುವ ಆರ್​ಸಿಬಿ ತಂಡದಲ್ಲಿ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.

ನೆಹ್ರಾ 18 ವರ್ಷಗಳ ವೃತ್ತಿಜೀವದಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್​ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು, ಒಂದು ವಿಶ್ವಕಪ್​, 2 ಏಷ್ಯಾಕಪ್ ಮತ್ತು 3 ಐಸಿಸಿ ಚಾಂಪಿಯನ್ ಗೆದ್ದ ತಂಡಗಳ ಭಾಗವಾಗಿದ್ದರು.

Next Story

RELATED STORIES