Top

ರಾಜಕೀಯಕ್ಕೆ ಆನಂದ್ ಸಿಂಗ್ ವಿದಾಯ: ಪುತ್ರ ಪ್ರವೇಶ?

ರಾಜಕೀಯಕ್ಕೆ ಆನಂದ್ ಸಿಂಗ್ ವಿದಾಯ: ಪುತ್ರ ಪ್ರವೇಶ?
X

ವಿಧಾನಸಭೆಯಲ್ಲಿ ವಿಶ್ವಾಸಮತ ವೇಳೆ ಭಾರೀ ಆಕರ್ಷಣೆಗೆ ಗುರಿಯಾಗಿದ್ದ ಹೊಸಪೇಟೆ ಶಾಸಕ ಆನಂದ್ ಸಿಂಗ್ ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವುದಾಗಿ ಘೋಷಿಸುವ ಮೂಲಕ ಈಗಾಗಲೇ ಅಲ್ಲಾಡುತ್ತಿರುವ ಮೈತ್ರಿ ಸರಕಾರದಲ್ಲಿ ಮತ್ತೊಂದು ಆಘಾತ ಉಂಟಾಗಿದೆ.

ಬಳ್ಳಾರಿಯ ಹೊಸಪೇಟೆಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್​ನಿಂದ ವಿಧಾನಸಭೆಗೆ ಆಯ್ಕೆಯಾಗಿರುವ ಆನಂದ್ ಸಿಂಗ್ ಈ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.

ಇತ್ತೀಚೆಗಷ್ಟೇ ಮೊಳಕಾಲ್ಮೂರು ಶಾಸಕ ಹಾಗೂ ಬಿಜೆಪಿ ಮುಖಂಡ ಶ್ರೀರಾಮುಲು ಜೊತೆ ಕಾಣಿಸಿಕೊಂಡಿದ್ದ ಆನಂದ್ ಸಿಂಗ್​, ಈ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ಪಕ್ಷದಲ್ಲಿನ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಅಲ್ಲದೇ ಬಿಜೆಪಿಗೆ ವಲಸೆ ಹೋಗುವ ಮುನ್ಸೂಚನೆ ನೀಡಿದ್ದಾರೆ.

ತಾವು ಸಕ್ರಿಯ ರಾಜಕಾರಣದಿಂದ ನಿವೃತ್ತಿ ಹೊಂದಲಿದ್ದು, ಮುಂದಿನ ಚುನಾವಣೆಯಲ್ಲಿ ತಮ್ಮ ಪುತ್ರನನ್ನು ಬಿಜೆಪಿ ಪಕ್ಷದಿಂದ ತಮ್ಮದೇ ಕ್ಷೇತ್ರದಿಂದ ಕಣಕ್ಕಿಳಿಸುವ ಮೂಲಕ ಪುತ್ರನ ರಾಜಕೀಯ ಭವಿಷ್ಯಕ್ಕೆ ನಾಂದಿ ಹಾಡಲು ಬಯಸಿದ್ದಾರೆ.

Next Story

RELATED STORIES