Top

ರಿಲ್ಯಾಕ್ಸ್ ಮೂಡ್‌ನಲ್ಲಿ ದಸರಾ ಗಜಪಡೆ

ರಿಲ್ಯಾಕ್ಸ್ ಮೂಡ್‌ನಲ್ಲಿ ದಸರಾ ಗಜಪಡೆ
X

ಮೈಸೂರು: ಇನ್ನೇನು ಮುಂದಿನ ತಿಂಗಳು ದಸರಾ ಹಬ್ಬ ಬಂದೇಬಿಡ್ತು. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಜಯದಶಮಿ ದಸರಾ ಹಬ್ಬ ಅದ್ಧೂರಿ ವೈಭವದೊಂದಿಗೆ ಆಚರಿಸಲ್ಪಡುತ್ತದೆ. ದಸರೆಯಂದು ಅಂಬಾರಿ ಹೊತ್ತು, ಹಬ್ಬಕ್ಕೆ ಕಳೆತರುವ ಆಕರ್ಷಿತ ಕೇಂದ್ರಬಿಂದುವೆಂದರೆ ಗಜಪಡೆ.

ಅಂಬಾರಿ ಹೊತ್ತು, ರಾಜ ಗಾಂಭೀರ್ಯದಿಂದ ಗಜಪಡೆ ಹೆಜ್ಜೆ ಹಾಕುತ್ತಿದ್ದರೆ, ದಸರೆಯ ವೈಭವದ ಅದ್ಧೂರಿತನ ದುಪ್ಪಟ್ಟಾಗುತ್ತದೆ. ಅಂತಹ ಗಜಪಡೆ ಸದ್ಯ ಮೈಸೂರಿಗೆ ಆಗಮಿಸಿದ್ದು, ರಿಲ್ಯಾಕ್ಸ್ ಮೂಡ್‌ನಲ್ಲಿದೆ.

ಇವತ್ತು ರಿಲ್ಯಾಕ್ಸ್ ಮಾಡಲಿರುವ ಗಜಪಡೆಗೆ ನಾಳೆಯಿಂದ ತಾಲೀಮು ಶುರುವಾಗಲಿದೆ. ಮೈಸೂರಿನ ಅರಣ್ಯ ಭವನದಲ್ಲಿ ಗಜಪಡೆ ಬೀಡುಬಿಟ್ಟಿದ್ದು, ಭತ್ತ, ಹಸಿ ಹುಲ್ಲು, ಸೊಪ್ಪು, ಕಾಯಿ ಬೆಲ್ಲ ನೀಡಿ ಆರೈಕೆ ಮಾಡಲಾಗ್ತಿದೆ.

ಕ್ಯಾಪ್ಟನ್ ಅರ್ಜುನ ನೇತೃತ್ವದಲ್ಲಿರುವ ಧನಂಜಯ್, ಚೈತ್ರ, ಗೋಪಿ, ವಿಕ್ರಮ್, ವರಲಕ್ಷ್ಮಿ ಮೊದಲ ತಂಡದ ಗಜಪಡೆ ನಾಳೆ ಸಂಜೆ ಮೈಸೂರಿನ ಅಂಬಾವಿಲಾಸ ಅರಮನೆಗೆ ಎಂಟ್ರಿ ಕೊಡಲಿದ್ದು, ಸಂಜೆ 4.30ಕ್ಕೆ ಸಾಂಪ್ರದಾಯಿಕವಾಗಿ ಅರಮನೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಸ್ವಾಗತ ಕಾರ್ಯಕ್ರಮ ನಡೆಯಲಿದೆ.

Next Story

RELATED STORIES