Top

ಶುಕ್ರವಾರ ತೆರೆಮೇಲೆ ಪತಿ ಹುಡುಕಲಿರುವ ಶೀತಲ್..!

ಶುಕ್ರವಾರ ತೆರೆಮೇಲೆ ಪತಿ ಹುಡುಕಲಿರುವ ಶೀತಲ್..!
X

ಶೀತಲ್ ಶೆಟ್ಟಿ ಅಂದಾಕ್ಷಣ ನೆನಪಾಗೋದೇ ನ್ಯೂಸ್ ಚಾನೆಲ್​ಗಳು. ಒಂದ್ಕಾಲದಲ್ಲಿ ಸುದ್ದಿ ನಿರೂಪಕಿಯಾಗಿ ಕನ್ನಡಿಗರ ಮನಗೆದ್ದ ಶೀತಲ್, ಅದಾದ ಬಳಿಕ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಿಗೆ ಬಣ್ಣ ಹಚ್ಚಿದ್ರು. ಅಷ್ಟೇ ಅಲ್ಲ, ಬಿಗ್ ಬಾಸ್ ಮನೆಗೂ ಹೋಗಿ ಬಂದಿದ್ರು. ಅಲ್ಲಿಗೆ ಶೀತಲ್ ಬಣ್ಣದಲೋಕದಲ್ಲಿ ನಾಯಕಿ ಆಗೋ ಎಲ್ಲಾ ಲಕ್ಷಣಗಳು ಕಂಡಿದ್ವು. ಅದ್ರಂತೆ ಶೀತಲ್ ಈಗ ಪತಿ ಬೇಕು.ಕಾಮ್ ಚಿತ್ರದ ನಾಯಕನಟಿ.

ಚಿತ್ರದ ಟೈಟಲ್ಲೇ ಹೇಳುವಂತೆ ಇದೊಂದು ಮಹಿಳಾ ಪ್ರಧಾನ ಸಿನಿಮಾ. ಮಿಡಲ್ ಕ್ಲಾಸ್ ಫ್ಯಾಮಿಲಿಯ ಹೆಣ್ಣುಮಗುವಿಗೆ ಅವರ ಪೋಷಕರು ಮದ್ವೆ ಮಾಡ್ಬೇಕು ಅಂದ್ರೆ ಏನೆಲ್ಲಾ ಕಷ್ಟಗಳು ಎದುರಾಗುತ್ವೆ ಅನ್ನೋದರ ಕಥೆ. ಇಲ್ಲಿ ಶೀತಲ್ ವರ ಹುಡುಕೋ ವಧುವಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮದ್ವೆ ಮಾಡಿಸೋದು ಎಷ್ಟು ಕಷ್ಟ ಅನ್ನೋದನ್ನ ಈ ಚಿತ್ರದ ಮೂಲಕ ಹೇಳೋ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ರಾಕೇಶ್.

ಕಿಚ್ಚ ಸುದೀಪ್ ಈ ಹಿಂದೆ ದಿ ವಿಲನ್ ಚಿತ್ರದ ಶೂಟಿಂಗ್ ಅಡ್ಡಾದಲ್ಲಿ ಟ್ರೈಲರ್ ಲಾಂಚ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ರು. ಪ್ರೇಮ್ ಶಿಷ್ಯ ರಾಕೇಶ್ ನಿರ್ದೇಶನದ ಚಿತ್ರ ಇದಾಗಿದ್ದು, ಪ್ರೇಮ್ ಹಾಗೂ ವಿಲನ್ ಕ ಜಾನ್ ಌಮಿ ಜಾಕ್ಸನ್ ಕೂಡ ಶುಭ ಹಾರೈಸಿದ್ರು.

ಆದ್ರೀಗ ಚಿತ್ರದ ಒಂದು ಬೊಂಬಾಟ್ ಸಾಂಗ್ ರಿಲೀಸ್ ಆಗಿದೆ. ಆಡಿಸ್ತಾ ದ್ಯಾವ್ರೇ ಏನ್ ಚೆಂದ ಕ್ಯಾಬರೇ ಅನ್ನೋ ಈ ಹಾಡು, ಮದ್ವೆ ಆಗೋ ಹೆಣ್ಣಿನ ಅಸಲಿಯತತನ ತೋರಿಸಲಿದೆ. ಅಷ್ಟೇ ಅಲ್ಲ ವರದಕ್ಷಿಣೆ ಪಿಡುಗು ಈ ಕಾಲದಲ್ಲೂ ಯಾವ ರೀತಿ ಕಾಡ್ತಿದೆ ಅನ್ನೋದನ್ನ ಸಾರಿ ಹೇಳ್ತಿದೆ. ಕೌಶಿಕ್ ಹರ್ಷ ಸಂಗೀತ ಸಂಯೋಜನೆಯ ಈ ಹಾಡಿಗೆ ಅರ್ಥಪೂರ್ಣ ಸಾಲುಗಳನ್ನ ಬರೆದಿದ್ದಾರೆ ನಾಗಾರ್ಜುನ್ ಶರ್ಮಾ.

ಜೈ ಮಾರುತಿ ಪಿಕ್ಚರ್ಸ್​ ಬ್ಯಾನರ್​ನಡಿ ತಯಾರಾಗಿರೋ ಈ ಚಿತ್ರದಲ್ಲಿ ಶೀತಲ್ ಸುತ್ತಾ ಸುತ್ತೋ ಕಥಾನಕ ಇದಾಗಿದ್ದು, ರಾಕ್​ಲೈನ್ ಸುಧಾಕರ್, ಅರು ಗೌಡ ಸೇರಿದಂತೆ ಸಾಕಷ್ಟು ಕಲಾವಿದರು ಸಾಥ್ ಕೊಟ್ಟಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಮನರಂಜನೆ ಜೊತೆ ಹೆಣ್ಣಿನ ಕುಟುಂಬದ ಭಾವುಕತೆ ಹಾಗೂ ಅದ್ರ ತೀವ್ರತೆಯನ್ನ ತುಂಬಾ ಸೊಗಸಾಗಿ ಕಟ್ಟಿಕೊಡಲಾಗಿದೆ. ಇನ್ನು ಪತಿ ಹುಡ್ಕೋ ಶೀತಲ್ ಅಸಲಿ ಕಷ್ಟ ಏನು ಅನ್ನೋದು ಶುಕ್ರವಾರ ಥಿಯೇಟರ್​ನಲ್ಲಿ ಬಯಲಾಗಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್, ಟಿವಿ5

Next Story

RELATED STORIES