Top

ಅದೇ ಖದರ್, ಅದೇ ಲುಕ್‌ನಲ್ಲಿ 'ಕಿರಾತಕ ಈಸ್ ಬ್ಯಾಕ್'

ಅದೇ ಖದರ್, ಅದೇ ಲುಕ್‌ನಲ್ಲಿ ಕಿರಾತಕ ಈಸ್ ಬ್ಯಾಕ್
X

ವರಮಹಾಲಕ್ಷ್ಮೀ ಹಬ್ಬಕ್ಕೆ ಸೆಟ್ಟೇರಿದ ರಾಕಿಂಗ್ ಸ್ಟಾರ್ ಯಶ್​ರ ಮೋಸ್ಟ್ ಎಕ್ಸ್​ಪೆಕ್ಟೆಡ್ ಕಿರಾತಕ ಸೀಕ್ವೆಲ್, ಮೈ ನೇಮ್ ಈಸ್ ಕಿರಾತಕ ಶೂಟಿಂಗ್​ ಶುರು ಆಗಿದೆ. ಅದೇ ಸ್ಟೈಲು, ಅದೇ ಖದರ್​ನಿಂದ ಯಶ್ ಮತ್ತೊಮ್ಮೆ ಬಿಳಿ ಪಂಚೆ ಕಟ್ಟಿ, ಕೈ ಮೇಲೆತ್ತಿ ಕಿರಾತಕ ಈಸ್ ಬ್ಯಾಕ್ ಅಂದಿದ್ದಾರೆ.

ಕಿರಾತಕ ಈಸ್ ಬ್ಯಾಕ್ ಶೂಟಿಂಗ್​ ನಿನ್ನೆಯಿಂದ ಶುರುವಾಗಿದ್ದು, ಯಶ್ ಫಸ್ಟ್ ಲುಕ್ ರಿವೀಲ್ ಮಾಡಿದೆ ಚಿತ್ರತಂಡ. ಮತ್ತೊಮ್ಮೆ ಮಂಡ್ಯ ಹಳ್ಳಿ ಸೊಗಡಿನಲ್ಲಿ ತಯಾರಾಗಲಿರೋ ಟಿಪಿಕಲ್ ಕಾಮಿಡಿ ಎಂಟ್ರಟೈನರ್ ಇದಾಗಿದ್ದು, ಕಿರಾತಕನಂತೆ ಇಲ್ಲಿಯೂ ಅದೇ ಸ್ಟೈಲ್ ಕ್ಯಾರಿ ಮಾಡಿದೆ ಚಿತ್ರತಂಡ.

ದಿಲ್ ವಾಲಾ, ರ‍್ಯಾಂಬೊ-2 ಖ್ಯಾತಿಯ ಅನಿಲ್ ನಿರ್ದೇಶನ, ಜಯಣ್ಣ-ಭೋಗೇಂದ್ರ ನಿರ್ಮಾಣದ ಈ ಸಿನಿಮಾ ಯಶ್​ರ ಮಾಸ್ ಹೀರೋಯಿಸಂ ಬ್ರೇಕ್ ಮಾಡಲಿದೆ. ಪಕ್ಕಾ ಕಾಮಿಡಿ ಮಾಸ್ ಮಸಾಲ ಕಂಟೆಂಟ್ ಸಿನಿಮಾ ಇದಾಗಿದ್ದು, ಕಿರಾತಕ ಚಿತ್ರವನ್ನ ಮೀರಿಸುವಂತಿರಲಿದೆ.

ಕೆಜಿಎಫ್​ಗಾಗಿ ಲಾಂಗ್ ಹೇರ್ ಹಾಗೂ ಲಾಂಗ್ ದಾಡಿ ಬಿಟ್ಟಿದ್ದ ಯಶ್, ಕಿರಾತಕನಿಗಾಗಿಯೇ ಗಡ್ಡ,ಮೀಸೆಯನ್ನು ಒಲ್ಲದ ಮನಸ್ಸಿನಿಂದ ಕಟ್ ಮಾಡಿಸಿ, ಸಖತ್ ಹ್ಯಾಂಡ್ಸಮ್ ಆಗಿ ರೆಡಿಯಾಗಿದ್ದಾರೆ. ಇನ್ನು ಮೈ ನೇಮ್ ಈಸ್ ಕಿರಾತಕ ದುಬೈನಲ್ಲೂ ಶೂಟಿಂಗ್ ನಡೆಸಲಿದ್ದು, ಅದಕ್ಕೆ ತಕ್ಕನಾಗಿ ಯಶ್ ಕಲರ್ ಕಲರ್ ಶರ್ಟ್​ ಹಾಗೂ ಕೊರಳಲ್ಲಿ ಗೋಲ್ಡ್ ಚೈನ್ ಹಾಕಿ ಸಖತ್ ರಿಚ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ಚಿಕ್ಕಣ್ಣ ಕೂಡ ಬ್ಯಾಕ್ ಡ್ರಾಪ್​ನಲ್ಲಿ ಕಾಣಿಸಿಕೊಂಡಿದ್ದು, ಮತ್ತೊಮ್ಮೆ ಅಣ್ತಮ್ಮನ ಜೊತೆ ಮೋಡಿ ಮಾಡೋ ಸೂಚನೆ ಕೊಟ್ಟಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್, ಟಿವಿ5

Next Story

RELATED STORIES