Top

ಅಂತಿಮ ಟೆಸ್ಟ್ ನಂತರ ಅಲಿಸ್ಟರ್ ಕುಕ್ ಕ್ರಿಕೆಟ್​ಗೆ ವಿದಾಯ

ಅಂತಿಮ ಟೆಸ್ಟ್ ನಂತರ ಅಲಿಸ್ಟರ್ ಕುಕ್ ಕ್ರಿಕೆಟ್​ಗೆ ವಿದಾಯ
X

ಇಂಗ್ಲೆಂಡ್​ ತಂಡದ ಮಾಜಿ ನಾಯಕ ಆಲಿಸ್ಟರ್​ ಕುಕ್ ಭಾರತ ವಿರುದ್ಧದ 5ನೇ ಟೆಸ್ಟ್ ಪಂದ್ಯದ ನಂತರ​ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಲಿದ್ದಾರೆ.

ಸೋಮವಾರ ನಿವೃತ್ತಿ ನಿರ್ಧಾರವನ್ನು ಅಲಿಸ್ಟರ್ ಕುಕ್ ಪ್ರಕಟಿಸಿದರು. ಭಾರತ ವಿರುದ್ಧ ನಡೆಯುತ್ತಿರುವ 5 ಟೆಸ್ಟ್​ ಪಂದ್ಯದ ಸರಣಿಯಲ್ಲಿ ಆಂಗ್ಲ ಪಡೆ ಈಗಾಗಲೇ 3-1 ಅಂತರದಿಂದ ಸರಣಿ ಜಯಿಸಿದೆ. ಸೆಪ್ಟೆಂಬರ್​ 9ರಿಂದ ಕೊನೆಯ ಟೆಸ್ಟ್​ ಪಂದ್ಯ ಶುರುವಾಗಲಿದ್ದು, ಪಂದ್ಯದ ನಂತರ ಕುಕ್​ ವಿದಾಯ ಹೇಳಲಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಟೆಸ್ಟ್​ನಲ್ಲಿನ ಕಳಪೆ ಪ್ರದರ್ಶನದಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಒಟ್ಟು 8 ಇನ್ನಿಂಗ್ಸ್​ ಆಡಿರುವ ಕುಕ್​ ಕೇವಲ 15.57ರ ಸರಾಸರಿಯಲ್ಲಿ 109 ರನ್​ ಗಳಿಸಿದ್ದಾರೆ. ಸರಣಿಯಲ್ಲೇ 29 ರನ್ ಕುಕ್​ ಅವರ ಅತ್ಯಧಿಕ ರನ್​ ಆಗಿದೆ.​

ಕುಕ್​ ನಿವೃತ್ತಿ ಬಗ್ಗೆ ಇಂಗ್ಲೆಂಡ್​ ಮತ್ತು ವೇಲ್ಸ್​ ಕ್ರಿಕೆಟ್ ಮಂಡಳಿ ಮಾಹಿತಿ ಖಚಿತ ಪಡಿಸಿದೆ. ಟೆಸ್ಟ್​ ಮಾದರಿಯ ಪಂದ್ಯಗಳಲ್ಲಿ ಕುಕ್​ ಉತ್ತಮ ಆಟಗಾರ ಎನಿಸಿಕೊಂಡಿದ್ದರು. ಅಲ್ಲದೆ, ಇವರನ್ನು ಟೀಂ ಇಂಡಿಯಾದ ಗೋಡೆ ಖ್ಯಾತಿಯ ರಾಹುಲ್​ ಡ್ರಾವಿಡ್​ ಅವರಿಗೆ ಹೋಲಿಸಲಾಗುತ್ತಿತ್ತು. ವಿಶ್ವ ದಾಖಲೆಯ 160 ಟೆಸ್ಟ್​ ಪಂದ್ಯಗಳನ್ನು ಆಡಿರುವ ಕುಕ್​, ಅತಿವೇಗದಲ್ಲಿ 10,000 ರನ್​ ದಾಖಲಿಸಿದ ಟೆಸ್ಟ್​ ಆಟಗಾರನೆಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಕಳೆದ ಕೆಲವು ತಿಂಗಳುಗಳ ಚಿಂತನೆ ಹಾಗೂ ವಿವೇಚನೆಯ ನಂತರ ನಾನು ಕ್ರಿಕೆಟ್​ ವಿದಾಯ ಹೇಳಲು ನಿರ್ಧರಿಸಿದ್ದೇನೆ. ಟೀಂ ಇಂಡಿಯಾ ವಿರುದ್ಧದ ಟೆಸ್ಟ್​ ಸರಣಿಯ ಕೊನೆಯಲ್ಲಿ ನಿವೃತ್ತಿ ಘೋಷಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

ಒಟ್ಟು 160 ಟೆಸ್ಟ್​ ಆಡಿರುವ ಕುಕ್, 44.88ರ ಸರಾಸರಿಯಲ್ಲಿ​ 12,254 ರನ್​ ಗಳಿಸಿದ್ದಾರೆ. ಇದರಲ್ಲಿ 32 ಶತಕ ಹಾಗೂ 56 ಅರ್ಧ ಶತಕಗಳು ಸೇರಿವೆ.

Next Story

RELATED STORIES