Top

ಧೂಳೆಬ್ಬಿಸಿದ 'ತಾಯಿಗೆ ತಕ್ಕ ಮಗ' ಟ್ರೇಲರ್

ಧೂಳೆಬ್ಬಿಸಿದ ತಾಯಿಗೆ ತಕ್ಕ ಮಗ ಟ್ರೇಲರ್
X

ಮುಂಗಾರು ಮಳೆಯಲ್ಲಿ ಮಿಂದೆದ್ದ ಡೈರೆಕ್ಟರ್ ಶಶಾಂಕ್, ಕೃಷ್ಣ ಅಜಯ್ ರಾವ್​ ತಾಯಿಗೆ ತಕ್ಕ ಮಗ ಅನ್ನೋದನ್ನ ಇಡೀ ಚಿತ್ರರಂಗಕ್ಕೆ ಸಾರಿ ಹೇಳೋಕೆ ಹೊರಟಿದ್ದಾರೆ. ಸಾಫ್ಟ್ ಲವರ್ ಬಾಯ್ ಆಗಿ ಕಾಣಿಸಿಕೊಳ್ತಿದ್ದ ಅಜಯ್, ಏಕ್ಧಮ್ ಮಾಸ್ ಮಗನಾಗಿ ಖದರ್ ತೋರಿಸ್ತಿದ್ದಾರೆ. ಸುಮಲತಾ ಅಂಬರೀಶ್- ಅಜಯ್ ರಾವ್ ತಾಯಿ-ಮಗನಾಗಿ ಕಮಾಲ್ ಮಾಡ್ತಿದ್ದಾರೆ.

ವಕೀಲೆ ವೃತ್ತಿ ಮಾಡೋ ಪಾರ್ವತಿಯಾಗಿ ಸುಮಲತಾ ಅಂಬರೀಶ್ ಕಾಣಿಸಿಕೊಂಡಿದ್ದಾರೆ. ಕಾನೂನು ಕಾಪಾಡೋ ನಿಷ್ಠಾವಂತ ವಕೀಲೆ ಪಾರ್ವತಿ ಲೈಫ್​ಗೆ ರಾಜಕಾರಣಿಯೊಬ್ಬ ಖಳನಾಯಕನಾಗ್ತಾನೆ. ಆಗ ಆ ಖಳನಾಯಕ-ತಾಯಿಯ ನಡುವಿನ ಸಂಘರ್ಷದಲ್ಲಿ ತಾಯಿಯನ್ನ ಕಾಪಾಡೋ ಮಗನಾಗಿ ಅಜಯ್ ಮೋಹನ್ ದಾಸ್ ಪಾತ್ರದಲ್ಲಿ ಮಿಂಚ್ತಿದ್ದಾರೆ.

ಕರಾಟೆ ಕಲಿತು, ಜಿಮ್​ನಲ್ಲಿ ಮೈ ಹುರಿಗಟ್ಟಿಸಿ, ಸಿಕ್ಕಾಪಟ್ಟೆ ಫಿಟ್ ಅಂಡ್ ಫೈನ್ ಆಗಿ ಕಾಣ್ತಿರೋ ಅಜಯ್ ರಾವ್ ಈ ಸಿನಿಮಾಗಾಗಿ ತುಂಬಾ ವರ್ಕೌಟ್ ಮಾಡಿದ್ದಾರೆ. ಲವರ್ ಬಾಯ್ ಆಗಿ ಕಾಣಿಸಿಕೊಳ್ತಿದ್ದ ಅಜಯ್, ಇದೇ ಮೊದಲ ಬಾರಿ ಔಟ್ ಅಂಡ್ ಔಟ್ ಮಾಸ್ ಹೀರೋ ಆಗಿ ಹೊಸ ಅಧ್ಯಾಯ ಶುರು ಮಾಡಿದಂತಿದೆ.

ಹಾಗಂತ ಇದು ಬರೀ ತಾಯಿ-ಮಗನ ಕುರಿತ ಸಿನಿಮಾ ಅಲ್ಲ. ಅದರ ಜೊತೆ ಜೊತೆಗೆ ನವಿರಾದ ಪ್ರೇಮಕಥೆಯೂ ಇದೆ. ಆಶಿಕಾ ರಂಗನಾಥ್ ಇಲ್ಲಿ ಅಜಯ್​ಗೆ ಜೋಡಿಯಾಗಿ ಬಣ್ಣ ಹಚ್ಚಿದ್ದು, ಗ್ಲಾಮರ್ ಪಾತ್ರದಲ್ಲಿ ಕಣ್ಮನ ತಣಿಸಲಿದ್ದಾರೆ.

ಕೃಷ್ಣನ್ ಲವ್ ಸ್ಟೋರಿ, ಕೃಷ್ಣಲೀಲಾ ಸಿನಿಮಾಗಳ ನಂತ್ರ, ಡೈರೆಕ್ಟರ್ ಶಶಾಂಕ್ ಮೂರನೇ ಬಾರಿ ಅಜಯ್​ಗೆ ಆ್ಯಕ್ಷನ್ ಕಟ್ ಹೇಳ್ತಿರೋ ಚಿತ್ರವಿದು. ಈ ಹಿಂದಿನ ಎರಡೂ ಸಿನಿಮಾಗಳು ಶತದಿನೋತ್ಸವ ಆಚರಿಸೋದರ ಜೊತೆಗೆ ಬಾಕ್ಸ್ ಆಫೀಸ್​ನಲ್ಲೂ ದೊಡ್ಡದಾಗಿ ಸೌಂಡ್ ಮಾಡಿತ್ತು. ಇದೀಗ ಈ ಜೋಡಿ ಹ್ಯಾಟ್ರಿಕ್ ಹಿಟ್ ಹೊಡೆಯೋ ಸೂಚನೆ ಕೊಟ್ಟಿದೆ.

ಅಂದಹಾಗೆ ಎಕ್ಸ್​ ಕ್ಯೂಸ್ ಮೀ ಚಿತ್ರದ ನಂತ್ರ ಸುಮಲತಾ ಅಂಬರೀಶ್- ಅಜಯ್ ಮತ್ತೊಮ್ಮೆ ತಾಯಿ-ಮಗನಾಗಿ ಕಾಣಿಸಿಕೊಂಡಿರೋದು ವಿಶೇಷ. ಇನ್ನು ಇವ್ರಿಗೆ ಭಜರಂಗಿ ಲೋಕಿ, ಸಾಧುಕೋಕಿಲಾ, ಅಚ್ಯುತ್ ಕುಮಾರ್ ಕೂಡ ಸಾಥ್ ಕೊಟ್ಟಿದ್ದು, ಬಹುತಾರಾಗಣದ ಈ ಚಿತ್ರ ಸದ್ಯ ಟ್ರೈಲರ್​ನಿಂದ ಗೆಲ್ಲೋ ಭರವಸೆ ಕೊಟ್ಟಿದೆ. ಪೋಸ್ಟ್ ಪ್ರೊಡಕ್ಷನ್​ನಲ್ಲಿ ಬ್ಯುಸಿ ಇರೋ ಚಿತ್ರತಂಡ, ಮುಂದಿನ ತಿಂಗಳು ತೆರೆಗೆ ಬರೋ ಧಾವಂತದಲ್ಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್, ಟಿವಿ5

Next Story

RELATED STORIES