Top

ಸುದೀಪ್ ಹುಟ್ಟುಹಬ್ಬ ಆಚರಣೆ ವೇಳೆ ಅವಾಂತರ

ಸುದೀಪ್ ಹುಟ್ಟುಹಬ್ಬ ಆಚರಣೆ ವೇಳೆ ಅವಾಂತರ
X

ಬೆಂಗಳೂರು: ಇಂದು ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ಗೆ 45ನೇ ಹುಟ್ಟುಹಬ್ಬದ ಸಂಭ್ರಮ. ಕುಟುಂಬಸ್ಥರ ಜೊತೆ ಸುದೀಪ್ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ್ರು. ಆದ್ರೆ ಅಭಿಮಾನಿಗಳಿಗೆ ಕೊಂಚ ನಿರಾಸೆಯಾಗಿದ್ದು, ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದರು.

ಬೆಂಗಳೂರಿನ ಜೆ.ಪಿ.ನಗರದ ಮನೆಯಲ್ಲಿ ಸುದೀಪ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆಂದು ತಿಳಿದು, ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದ ಸಾವಿರಾರು ಅಭಿಮಾನಿಗಳು ಭಾವಿಸಿದ್ದರು. ಆದರೆ ಅಭಿಮಾನಿಗಳತ್ತ ಒಂದು ಬಾರಿ ಕೈಬೀಸಿ ಹೋದ ಸುದೀಪ್ ಮತ್ತೆ ಬಂದೇ ಇಲ್ಲ. ಇದರಿಂದ ಬೇಸರವಾದ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ. ಈ ವೇಳೆ ನೂಕುನುಗ್ಗಲು ಸಂಭವಿಸಿದ್ದು, ಅದನ್ನು ನಿಯಂತ್ರಿಸಲು ಸುಬ್ರಹ್ಮಣ್ಯ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ. ಈ ವೇಳೆ ಓರ್ವ ಅಭಿಮಾನಿಯ ತಲೆಗೆ ಗಾಯವಾಗಿದೆ.

ವಾರಕ್ಕೂ ಮುನ್ನವೇ ಕಿಚ್ಚ ತಮ್ಮ ಹುಟ್ಟುಹಬ್ಬವನ್ನ ಅದ್ಧೂರಿಯಾಗಿ ಆಚರಿಸಬೇಡಿ, ಕೇಕ್, ಹೂವು ತರುವುದು ಬೇಡ. ಕಟೌಟ್ ಹಾಕುವುದು ಬೇಡ. ಅದರ ಬದಲಾಗಿ ಆ ಹಣವನ್ನ ಕೊಡಗಿನ ಸಂತ್ರಸ್ತರಿಗೆ ನೀಡಿ ಎಂದು ಹೇಳಿದ್ದರು. ಈ ಕಾರಣಕ್ಕಾಗಿ ಅಭಿಮಾನಿಗಳು ಕೇಕ್ ಹೂವು ತರದೇ ಕಿಚ್ಚನಿಗೆ ವಿಶ್ ಮಾಡಲು ಆಗಮಿಸಿದ್ದರು.ಆದರೆ ಅವೀಸ್ಮರಣೀಯವಾಗಿರಬೇಕಿದ್ದ ಹುಟ್ಟುಹಬ್ಬದಲ್ಲಿ ಅವಾಂತರವಾಗಿದೆ.

ಇನ್ನು ಹುಟ್ಟುಹಬ್ಬದ ವಿಶೇಷವಾಗಿ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಸುದೀಪ್ ಲುಕ್‌ನ್ನ ರಿವೀಲ್ ಮಾಡಲಾಗಿದೆ.

Next Story

RELATED STORIES