ಅದ್ಧೂರಿ ಶ್ರೀಕೃಷ್ಣ ಜನ್ಮಾಷ್ಟಮಿ: TV5ನಲ್ಲಿ ನೇರಪ್ರಸಾರ

ಇಂದು ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ರಾಷ್ಟ್ರದೆಲ್ಲೆಡೆ ಅದ್ಧೂರಿ ಜನ್ಮಾಷ್ಟಮಿ ಆಚರಿಸಲಾಗುತ್ತಿದೆ. ದ್ವಾರಕಾಧೀಶನಿಗೆ ಬೆಣ್ಣೆ, ಸಕ್ಕರೆ, ಪ್ರಸಾದಗಳ ನೈವೇದ್ಯ ಮಾಡಿ, ರಂಗನ್ನು ಚಿಮಿಕಿಸುವ ಮೂಲಕ ಅದ್ಧೂರಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಗಿದೆ.
ಕೃಷ್ಣನಗರಿ ಉಡುಪಿಯಲ್ಲಿ ಶ್ರೀಕೃಷ್ಣನಿಗೆ ವಿಶೇಷ ಪೂಜೆ ಪುನಸ್ಕಾರಗಳು ನೆರವೇರುತ್ತಿದೆ. ಸಂಜೆ ವಿಶೇಷ ಕಾರ್ಯಕ್ರಮಗಳು ನಡೆಯಲಿದೆ. ಅಲ್ಲದೇ ರಾತ್ರಿ 11.45ಕ್ಕೆ ಅರ್ಘ್ಯ ಪ್ರದಾನ ನಡೆಯಲಿದ್ದು, ನಾಳೆ ಮಧ್ಯಾಹ್ನ ವೈಭವದ ವಿಟ್ಲಪಿಂಡಿ ನಡೆಯಲಿದೆ. ಇನ್ನು ರಾಧಾರಮಣನನ್ನು ಕಣ್ತುಂಬಿಕೊಳ್ಳಲು ಭಕ್ತಸಮೂಹವೇ ಹರಿದು ಬರುತ್ತಿದೆ.
ಇನ್ನು ಬೆಂಗಳೂರಿನ ಇಸ್ಕಾನ್ ದೇವಾಲಯದಲ್ಲೂ ಕೂಡ ಶ್ರೀಕೃಷ್ಣನಿಗೆ ಅದ್ಧೂರಿ ಪೂಜೆ ನಡೆಯುತ್ತಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಲಕ್ಷಾಂತರ ಭಕ್ತರಿಗಾಗಿ ಪ್ರಸಾದ ತಯಾರಿಸಲಾಗಿದ್ದು, ರಾತ್ರಿ 10 ಗಂಟೆಗೆ ಶ್ರೀಕೃಷ್ಣನಿಗೆ ವಿಶೇಷ ಪೂಜೆ, ಅರ್ಘ್ಯ ಪ್ರದಾನ, ಭಜನೆ ಇತ್ಯಾದಿ ನಡೆಯಲಿದ್ದು, ನಿಮ್ಮ TV5 ಕನ್ನಡದಲ್ಲಿ ನೇರಪ್ರಸಾರ ಕಾರ್ಯಕ್ರಮವಿರುತ್ತದೆ.